ನ್ಯೂಯಾರ್ಕ್( ಅಮೆರಿಕ): ಮೆಟಾ ಪ್ಲಾಟ್‌ಫಾರ್ಮ್‌ಗಳ ಸಿಇಒ ಮಾರ್ಕ್ ಜುಕರ್‌ಬರ್ಗ್ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮೆಟಾ ಷೇರು ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿರುವುದರಿಂದ ಅವರ ಕಂಪನಿಯ ಸಂಪತ್ತು ವೃದ್ದಿಯಾಗಲು ಕಾರಣವಾಗಿದೆ. ಈ ವರ್ಷ ಇತರ ವ್ಯಕ್ತಿಗಳಿಗಿಂತ ಅವರ ನಿವ್ವಳ ಮೌಲ್ಯವು ಹೆಚ್ಚಾಗಿದೆ ಎಂದು ಮಾರ್ಕೆಟ್‌ವಾಚ್ ವರದಿ ಮಾಡಿದೆ.
2024 ರಲ್ಲಿ ಇಲ್ಲಿಯವರೆಗೆ ಜುಕರ್‌ಬರ್ಗ್ ಈಗಾಗಲೇ ತಮ್ಮ ನಿವ್ವಳ ಮೌಲ್ಯವನ್ನು $14.3 ಬಿಲಿಯನ್‌ಗಳಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾರ್ಕೆಟ್ ವಾಚ್ ಹೇಳಿದೆ. ಬ್ಲೂಮ್‌ಬರ್ಗ್‌ನ ಬಿಲಿಯನೇರ್ ಇಂಡೆಕ್ಸ್‌ನಲ್ಲಿ ಈ ಮೂಲಕ ಅವರು ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಮೈಕ್ರೋಸಾಫ್ಟ್ ಮಾಜಿ ಸಿಇಒ ಸ್ಟೀವ್ ಬಾಲ್ಮರ್‌ಗಿಂತ ಮೇಲಿರುವ ಜುಕರ್ ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.
ಮೆಟಾದಲ್ಲಿ ಶೇಕಡಾ 13 ರಷ್ಟು ಪಾಲನ್ನು ಹೊಂದಿರುವ ಜುಕರ್‌ಬರ್ಗ್, 2004ರಲ್ಲಿ ಕಂಪನಿ ಸ್ಥಾಪನೆ ಮಾಡಿದಾಗಿನಿಂದ ಅವರ ಕಂಪನಿ ಷೇರುಗಳ ಬೆಲೆ ಹೆಚ್ಚುತ್ತಲೇ ಸಾಗಿದೆ. ಮುಂಬರುವ ದಿನಗಳಲ್ಲಿ ಕಂಪನಿ ಇನ್ನಷ್ಟು ಉತ್ಕರ್ಷಕ್ಕೆ ಹೋಗುವ ಸಾಧ್ಯತೆಗಳಿವೆ. ಹಾರ್ವರ್ಡ್ ವಿವಿ ವಿದ್ಯಾರ್ಥಿಯಾಗಿದ್ದಾಗಲೇ ಜುಕರ್‌ಬರ್ಗ್ ಸಾಮಾಜಿಕ ಜಾಲತಾಣವನ್ನು ಪ್ರವೇಶಿಸಿದ್ದರು ಎಂದು ಮಾರ್ಕೆಟ್‌ವಾಚ್ ವರದಿ ಮಾಡಿದೆ.