ಕರ್ನಾಟಕ

karnataka

ETV Bharat / business

ಇನ್ಮುಂದೆ Zomatoದಲ್ಲಿ ನಿಮ್ಮಿಷ್ಟದ ಊಟ ಮಾತ್ರವಲ್ಲ ಚಲನಚಿತ್ರ ಟಿಕೆಟ್‌ಗಳೂ ಲಭ್ಯ! - Zomato Paytm Business Deal - ZOMATO PAYTM BUSINESS DEAL

ಜೊಮಾಟೊ ಪೇಟಿಎಂ ಬಿಸಿನೆಸ್ ಡೀಲ್ ಮಾತುಕತೆ ನಡೆದಿದೆ. ಒಂದೊಮ್ಮೆ ಪೇಟಿಎಂನ ಈ ಡೀಲ್​ ಯಶಸ್ವಿಯಾದರೆ ಇನ್ಮುಂದೆ ಜೊಮಾಟೊದಲ್ಲೇ ಸಿನಿಮಾ ಟಿಕೆಟ್​ಗಳನ್ನು ಬುಕ್​ ಮಾಡಬಹುದಾಗಿದೆ.

Zomato Paytm Business Deal
ಇನ್ಮುಂದೆ Zomatoದಲ್ಲಿ ನಿಮ್ಮಿಷ್ಟದ ಊಟ ಮಾತ್ರವಲ್ಲ ಚಲನಚಿತ್ರ ಟಿಕೆಟ್‌ಗಳೂ ಲಭ್ಯ! (ANI)

By ETV Bharat Karnataka Team

Published : Jun 18, 2024, 6:57 AM IST

ಪ್ರಮುಖ ಆಹಾರ ವಿತರಣಾ ಕಂಪನಿ ಜೊಮಾಟೊ ತಾನು ಪೇಟಿಎಂ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ದೃಢಪಡಿಸಿದೆ. ಪೇಟಿಎಂನ ಸಿನಿಮಾ ಮತ್ತು ಈವೆಂಟ್ಸ್ ವ್ಯವಹಾರ ಖರೀದಿಸಲು ಈ ಚರ್ಚೆಗಳನ್ನು ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಇನ್ನೂ ಯಾವುದೇ ಅಧಿಕೃತ ನಿರ್ಧಾರಕ್ಕೆ ಬಂದಿಲ್ಲ ಎಂದೂ ಕಂಪನಿ ಸ್ಪಷ್ಟಪಡಿಸಿದೆ. ಈ ಒಪ್ಪಂದವು ಮಂಡಳಿಯ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಜೊಮಾಟೊ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಒಪ್ಪಂದ ಪೂರ್ಣಗೊಂಡರೆ, ಚಲನಚಿತ್ರ ಪ್ರೇಮಿಗಳು Zomatoದಲ್ಲಿ ನಿಮ್ಮಿಷ್ಟದ ಆಹಾರ ಮಾತ್ರವಲ್ಲ, ಚಲನಚಿತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಈ ಮಾತುಕತೆ ಒಂದೊಮ್ಮೆ ಸಕ್ಸಸ್​ ಆದರೆ, ಎರಡನೇ ಅತಿದೊಡ್ಡ ಒಪ್ಪಂದ ಎಂದು ಹೇಳಲಾಗುತ್ತಿದ್ದು, Paytm ಮತ್ತು Zomato ನಡುವಿನ ಈ ಒಪ್ಪಂದದ ಮೌಲ್ಯವು 1500 ರೂ. ಕೋಟಿಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಜೊಮಾಟೊದ ಎರಡನೇ ಅತಿ ದೊಡ್ಡ ಸ್ವಾಧೀನವಾಗುತ್ತದೆ ಎಂದೂ ವರದಿಯಾಗಿದೆ. ಜೊಮಾಟೊ 2021 ರಲ್ಲಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ಅನ್ನು 4,447 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಬ್ಲಿಂಕಿಟ್​​​ ಬಳಿಕ Zomato ದ ಅತಿ ದೊಡ್ಡ ಆಲ್-ಸ್ಟಾಕ್ ಡೀಲ್ ಆಗಲಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - HEAVY RAIN ALERT

ABOUT THE AUTHOR

...view details