ಕರ್ನಾಟಕ

karnataka

ETV Bharat / business

ಬ್ಯಾಂಕುಗಳ ಸಾಲ ಮತ್ತು ಠೇವಣಿ ಬೆಳವಣಿಗೆಯ ಅಂತರ ಹೆಚ್ಚಳ; ಆರ್​ಬಿಐ - ಆರ್ ಬಿಐ ಅಂಕಿ ಅಂಶಗಳು

2024ರ ಆರಂಭದಲ್ಲಿ ಭಾರತದ ಬ್ಯಾಂಕುಗಳ ಸಾಲ ಮತ್ತು ಠೇವಣಿ ಬೆಳವಣಿಗೆಯ ಅಂತರ ಹೆಚ್ಚಾಗಿದೆ.

Growth in banks' credit surpassing deposits: RBI
Growth in banks' credit surpassing deposits: RBI

By ETV Bharat Karnataka Team

Published : Jan 28, 2024, 5:08 PM IST

ನವದೆಹಲಿ: 2023 ರ ಸೆಪ್ಟೆಂಬರ್ ಕೊನೆಯ ಹದಿನೈದು ದಿನಗಳಿಗೆ ಹೋಲಿಸಿದರೆ 2024 ರ ಜನವರಿ ಮೊದಲ ಹದಿನೈದು ದಿನಗಳಲ್ಲಿ ಬ್ಯಾಂಕುಗಳ ಸಾಲ ಮತ್ತು ಠೇವಣಿ ಬೆಳವಣಿಗೆಯ ನಡುವಿನ ಅಂತರ ಹೆಚ್ಚಾಗಿದೆ ಎಂದು ಇತ್ತೀಚಿನ ಆರ್ ಬಿಐ ಅಂಕಿ ಅಂಶಗಳು ತಿಳಿಸಿವೆ. ಜನವರಿ 12, 2024 ರ ಹೊತ್ತಿಗೆ, ವರ್ಷದಿಂದ ವರ್ಷಕ್ಕೆ ಸಾಲ ಮತ್ತು ಠೇವಣಿ ಬೆಳವಣಿಗೆ ಕ್ರಮವಾಗಿ ಶೇಕಡಾ 19.93 ಮತ್ತು ಶೇಕಡಾ 12.84 ರಷ್ಟಿದೆ. ಇದು ಶೇಕಡಾ 7.09 ಪಾಯಿಂಟ್​ಗಳ ಅಂತರವಾಗಿದೆ ಎಂದು ಅಂಕಿ ಅಂಶಗಳು ತೋರಿಸಿವೆ.

ಜನವರಿ 12, 2024 ಕ್ಕೆ ಕೊನೆಗೊಂಡ ವರದಿಯ ಹದಿನೈದು ದಿನಗಳಲ್ಲಿ, ನಿಗದಿತ ಬ್ಯಾಂಕುಗಳ ಸಾಲ ಬಾಕಿ 10,277 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಠೇವಣಿಗಳು 98,848 ಕೋಟಿ ರೂ.ಗಳಿಗೆ ಇಳಿಕೆಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಆರೋಗ್ಯಕರ ಬ್ಯಾಲೆನ್ಸ್ ಶೀಟ್​ಗಳು ಬ್ಯಾಂಕುಗಳು ಸಾಲ ನೀಡುವಲ್ಲಿ ವಿಶಾಲ ಆಧಾರಿತ ವಿಸ್ತರಣೆಗೆ ಅನುಕೂಲ ಮಾಡಿಕೊಟ್ಟಿವೆ. ಬೇಡಿಕೆಯ ನಿರಂತರ ಆವೇಗದ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲದ ಬೆಳವಣಿಗೆಯು ಠೇವಣಿ ಬೆಳವಣಿಗೆಯನ್ನು ಮೀರಿಸುತ್ತಿದೆ" ಎಂದು ಆರ್ ಬಿಐ ತನ್ನ ಹಿಂದಿನ ಹಣಕಾಸು ಸ್ಥಿರತೆ ವರದಿಯಲ್ಲಿ (ಎಫ್ಎಸ್ಆರ್) ತಿಳಿಸಿದೆ.

ಹೆಚ್ಚುತ್ತಿರುವ ಬಡ್ಡಿದರಗಳಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಿದೆ ಮತ್ತು ಅವುಗಳ ನಿವ್ವಳ ಬಡ್ಡಿಯ ಮಾರ್ಜಿನ್​ಗಳನ್ನು (ಎನ್ಐಎಂ) ಸುಧಾರಿಸಿವೆ ಎಂದು ಆರ್ ಬಿಐ ಉಲ್ಲೇಖಿಸಿದೆ. ಹಾಗೆಯೇ ಬಡ್ಡಿದರ ಚಕ್ರವು ಉತ್ತುಂಗವನ್ನು ಸಮೀಪಿಸುತ್ತಿದ್ದಂತೆ, ಹೆಚ್ಚುತ್ತಿರುವ ಮೌಲ್ಯಮಾಪನ ನಷ್ಟಗಳು, ಆಸ್ತಿ ಗುಣಮಟ್ಟಕ್ಕೆ ಹೆಚ್ಚುತ್ತಿರುವ ಅಪಾಯಗಳು ಮತ್ತು ಸಾಲದ ಬೆಳವಣಿಗೆಯ ಸಮತೋಲನದಿಂದಾಗಿ ಬ್ಯಾಂಕುಗಳ ಲಾಭದಾಯಕತೆಯು ಒತ್ತಡಕ್ಕೆ ಒಳಗಾಗುವ ನಿರೀಕ್ಷೆಯಿದೆ ಎಂದು ಆರ್ ಬಿಐ ಹೇಳಿದೆ.

ಕ್ರೆಡಿಟ್​ ಕಾರ್ಡ್​ ಸಂಖ್ಯೆ ಹೆಚ್ಚಳ: ಡಿಸೆಂಬರ್ 2023 ರ ಹೊತ್ತಿಗೆ 97.9 ಮಿಲಿಯನ್ ಕ್ರೆಡಿಟ್ ಕಾರ್ಡ್​ಗಳು ಚಲಾವಣೆಯಲ್ಲಿವೆ ಮತ್ತು ತಿಂಗಳಲ್ಲಿ ದಾಖಲೆಯ 1.9 ಮಿಲಿಯನ್ ಹೊಸ ಕಾರ್ಡ್​ಗಳನ್ನು ವಿತರಿಸಲಾಗಿದೆ ಎಂದು ಇತ್ತೀಚಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿ ಅಂಶಗಳು ಬಹಿರಂಗಪಡಿಸಿವೆ. 2023 ರ ಕ್ಯಾಲೆಂಡರ್ ವರ್ಷದಲ್ಲಿ 16.71 ಮಿಲಿಯನ್ ಕಾರ್ಡ್​ಗಳನ್ನು ವಿತರಿಸಲಾಗಿದೆ. ಇದು 2022 ರಲ್ಲಿ ನೀಡಲಾದ 12.24 ಮಿಲಿಯನ್​ ಕಾರ್ಡ್​ಗಳಿಗಿಂತ ಗಮನಾರ್ಹ ಹೆಚ್ಚಳವಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಬೆಳವಣಿಗೆಯ ಪ್ರವೃತ್ತಿ ಸ್ಥಿರವಾಗಿದೆ. ಚಲಾವಣೆಯಲ್ಲಿರುವ ಕ್ರೆಡಿಟ್ ಕಾರ್ಡ್​ಗಳ ಸಂಖ್ಯೆ 2019 ರ ಡಿಸೆಂಬರ್​ನಲ್ಲಿ 55.53 ಮಿಲಿಯನ್​ನಿಂದ ಸುಮಾರು 77 ಪ್ರತಿಶತದಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : ಆರ್ಥಿಕ ಬೆಳವಣಿಗೆಯ ಪ್ರಮುಖ ಅಡಿಪಾಯ ಭಾರತೀಯ ಸ್ಟಾರ್ಟ್ಅಪ್ ವ್ಯವಸ್ಥೆ

ABOUT THE AUTHOR

...view details