ಕರ್ನಾಟಕ

karnataka

ETV Bharat / business

ಯುಪಿಐ ಮೂಲಕ ದಿನಕ್ಕೆ ಎಷ್ಟು ಹಣ ವರ್ಗಾವಣೆ ಮಾಡಬಹುದು ನಿಮಗೆ ಗೊತ್ತಿದೆಯಾ?: ಬ್ಯಾಂಕ್​ಗಳ ಮಿತಿ ಹೀಗಿದೆ! - which bank give maximum upi

ಆರ್‌ಬಿಐ ಬ್ಯಾಂಕ್‌ಗಳಿಗೆ ಪ್ರತಿದಿನ ಪಾವತಿ ಮಾಡಲು ನಿರ್ಬಂಧಗಳನ್ನು ವಿಧಿಸಿದೆ. ಹಾಗಾದರೆ ಬ್ಯಾಂಕ್​ಗಳಿಂದ ಒಂದು ದಿನದ ವಾಹಿವಾಟುಗಳಿಗೆ ವಿಧಿಸಿರುವ ಮಿತಿ ಎಷ್ಟು ಎಂಬ ವಿಚಾರವನ್ನು ನಾವು ತಿಳಿಸಿಕೊಡುತ್ತೇವೆ.

which-bank-give-maximum-upi-limit-per-day-how-many-upi-transactions-allow-in-a-day
ಯುಪಿಐ (ಈಟಿವಿ ಭಾರತ್​)

By ETV Bharat Karnataka Team

Published : Sep 14, 2024, 4:43 PM IST

ನವದೆಹಲಿ: ಯುಪಿಐ ಬಂದ ಬಳಿಕ ಬಹುತೇಕ ಡಿಜಿಟಲ್​ ಬ್ಯಾಂಕಿಂಗ್​ ಮೂಲಕವೇ ವಹಿವಾಟು ನಡೆಸಲಾಗುತ್ತಿದೆ. ಸಣ್ಣ ಮೊತ್ತವಿರಲಿ, ದೊಡ್ಡ ಮೊತ್ತವಿರಲಿ ಸುಲಭವಾಗಿ ಆನ್​ಲೈನ್​ ಪಾವತಿಗೆ ಮುಂದಾಗುತ್ತಿದ್ದಾರೆ. ಸದ್ಯ ದೇಶದಲ್ಲಿ ಡಿಜಿಟಲ್​ ಪಾವತಿ ಸಿಕ್ಕಾಪಟ್ಟೆ ಯಶಸ್ಸು ಕಾಣುತ್ತಿದ್ದು, ಜನರನ್ನು ಸೆಳೆಯುತ್ತಿದೆ. ಸಣ್ಣ ಅಂಗಡಿಗಳಿಂದ ಬ್ಯಾಂಕಿಂಗ್​ ವಹಿವಾಟಿನವರೆಗೆ ಕ್ಷಣಮಾತ್ರದಲ್ಲಿ ಯುಪಿಐ ಪಾವತಿ ನಡೆಸಲಾಗುತ್ತಿದೆ. ಇದೇ ಕಾರಣದಿಂದ ಇತ್ತೀಚೆಗೆ ಆರ್​ಬಿಐ ಡಿಜಿಟಲ್​ ಪಾವತಿ ಹೆಚ್ಚಿಸಲು ಯುಪಿಐ ಲೈಟ್​ ಎಂದು ಬದಲಾಯಿಸಿದೆ. ಆದರೆ, ಆರ್‌ಬಿಐ ಬ್ಯಾಂಕ್‌ಗಳಿಗೆ ನಿತ್ಯ ಪಾವತಿ ಮಾಡಲು ನಿರ್ಬಂಧಗಳನ್ನು ವಿಧಿಸಿದೆ. ಹಾಗಾದರೆ ಬ್ಯಾಂಕ್​ಗಳಿಂದ ಒಂದು ದಿನದ ವಾಹಿವಾಟುಗಳಿಗೆ ವಿಧಿಸಿರುವ ಮಿತಿ ಎಷ್ಟು ತಿಳಿದಿದ್ಯಾ?

  • ಎಚ್​ಡಿಎಫ್​ಸಿ:ಬ್ಯಾಂಕಿಂಗ್​ ದೈತ್ಯ ಎಚ್​ಡಿಎಫ್​ಸಿಯಲ್ಲಿ ಒಂದು ದಿನ ಅಂದರೆ 24 ಗಂಟೆಯಲ್ಲಿ ಮಾಡಬಹುದಾದ ಗರಿಷ್ಠ ಯುಪಿಐ ವಹಿವಾಟಿನ ಮೊತ್ತವು 1 ಲಕ್ಷ ರೂ. ಆಗಿದ್ದು, ಕೇವಲ 20 ವಹಿವಾಟಿಗೆ ಅನುಮತಿ ನೀಡಲಾಗಿದೆ.
  • ಎಸ್​ಬಿಐ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ದಿನದ ಪಾವತಿ ಮಿತಿಯನ್ನು 1,00,000 ರೂ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕೂಡ ಇದೇ ಮಿತಿಯನ್ನು ಅನುಸರಿಸುತ್ತಿವೆ.
  • ಐಸಿಐಸಿಐ ಬ್ಯಾಂಕ್​: ಈ ಬ್ಯಾಂಕ್‌ನಲ್ಲಿ ಗರಿಷ್ಠ ವಹಿವಾಟಿನ ಮಿತಿಯನ್ನು 1,00,000 ರೂ. ಆಗಿದ್ದು, ಗರಿಷ್ಠ ವಹಿವಾಟು 10ಕ್ಕೆ ಮಾತ್ರ ಸಿಮಿತಗೊಳಿಸಿದೆ.
  • ಕೆನರಾ ಬ್ಯಾಂಕ್​: ಕೆನರಾ ಬ್ಯಾಂಕ್​ನಲ್ಲೂ ಕೂಡ 1 ಲಕ್ಷ ರೂ ನಿಗದಿಸಲಾಗಿದೆ. ದಿನಕ್ಕೆ 20 ವಹಿವಾಟು ನಡೆಸಬಹುದಾಗಿದೆ.
  • ಬ್ಯಾಂಕ್​ ಆಫ್​ ಬರೋಡಾ: ಬ್ಯಾಂಕ್​ ಆಫ್​ ಬರೋಡಾ ಕೂಡ ದಿನಕ್ಕೆ 1 ಲಕ್ಷ ಮಿತಿ ವಹಿವಾಟಿಗೆ ಅನುಮತಿ ಹೊಂದಿದ್ದು, ದಿನಕ್ಕೆ 20 ವಹಿವಾಟು ನಡೆಸಬಹುದು.
  • ಆಕ್ಸಿಸ್​ ಬ್ಯಾಂಕ್​: ಈ ಬ್ಯಾಂಕ್​ನಲ್ಲಿ ಕೂಡ ವೈಯಕ್ತಿಕ ಪಾವತಿ ಮಿತಿ 1 ಲಕ್ಷ ಮಿತಿ ವಿಧಿಸಲಾಗಿದೆ.
  • ಕೋಟಾಕ್​ ಮಹೀಂದ್ರ ಬ್ಯಾಂಕ್​:ಈ ಬ್ಯಾಂಕ್​ನಲ್ಲಿ ಕೂಡ ವೈಯಕ್ತಿಕ ಪಾವತಿ ಮಿತಿ 1 ಲಕ್ಷ ಮಿತಿ ವಿಧಿಸಲಾಗಿದೆ. ಬೇಕಾದಲ್ಲಿ ಕ್ಯೂಆರ್​ ಕೋಡ್​​ ಮೂಲಕ 2,000 ರೂ ಪಾವತಿ ಮಾಡಬಹುದು.

ವಹಿವಾಟು ಹೆಚ್ಚಿಸಲು ಇರುವ ಮಾರ್ಗ:ಇತ್ತೀಚೆಗೆ, ಆರ್​ಬಿ ಯುಪಿಐ ಮೂಲಕ ಮಾಡಿದ ವಹಿವಾಟುಗಳ ಮೇಲಿನ ತೆರಿಗೆ ಪಾವತಿಯ ಮಿತಿಯನ್ನು ಹೆಚ್ಚಿಸಿದೆ. ಈ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಆಸ್ತಿ ತೆರಿಗೆ, ಮುಂಗಡ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ ಹೆಚ್ಚಿಸಬಹುದು. ಬಂಡವಾಳ ಮಾರುಕಟ್ಟೆ, ವಿಮೆ, ಪ್ಯಾರಿನ್ ಇನ್ವರ್ಡ್ ರವಾನೆಗೆ 2 ಲಕ್ಷದವರೆಗೆ ಪಾವತಿಸಬಹುದು.

ಇದನ್ನೂ ಓದಿ:ನಿಯಂತ್ರಣದಲ್ಲಿ ಚಿಲ್ಲರೆ ಹಣದುಬ್ಬರ: ಬಡ್ಡಿದರ ಕಡಿಮೆ ಮಾಡುತ್ತಾ ಆರ್​ಬಿಐ?

ABOUT THE AUTHOR

...view details