ಹೈದರಾಬಾದ್:ಡಿಜಿಟಲ್ ಇಂಡಿಯಾ ಬಳಿಕ ಪಾವತಿ ವ್ಯವಸ್ಥೆಯು ಅತಿ ಸರಳವಾಗಿದೆ. ಏನಾದರೂ ವ್ಯವಹಾರ ನಡೆಸಿದಾಗ ತಕ್ಷಣವೇ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಮೂಲಕ ತಮ್ಮ ಮೊಬೈಲ್ನಿಂದ ವೈಯಕ್ತಿಕವಾಗಿ (ವ್ಯಕ್ತಿಯಿಂದ ವ್ಯಕ್ತಿಗೆ) ಹಣ ವರ್ಗಾವಣೆ ಮಾಡುತ್ತಾರೆ. ಪಾವತಿಗೆ ಸರಳ ವಿಧಾನವಾದ್ದರಿಂದ ಜನರು ಅತಿಹೆಚ್ಚು ಆನ್ಲೈನ್ ವಹಿವಾಟನ್ನು ಅವಲಂಬಿಸಿದ್ದಾರೆ.
ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಅಂಕಿ - ಅಂಶಗಳ ಪ್ರಕಾರ, ಡಿಜಿಟಲ್ ಪಾವತಿದಾರರ ಸಂಖ್ಯೆಯು 2024ರ ಆಗಸ್ಟ್ ವೇಳೆಗೆ 14.96 ಬಿಲಿಯನ್ಗೆ ತಲುಪಿದೆ. ಡಿಜಿಟಲ್ ಪಾವತಿಗಳು ದೇಶದಲ್ಲಿ ವೇಗ ಪಡೆದಿದ್ದರಿಂದ ಬ್ಯಾಂಕ್‌ಗಳು ದಿನದ ಪಾವತಿ ಮೊತ್ತವನ್ನು ಹೆಚ್ಚಿಸಿವೆ. ಯುಪಿಐ ಲೈಟ್ ಹೆಸರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಡಿಜಿಟಲ್ ಪಾವತಿಗಳಲ್ಲಿ ಬದಲಾವಣೆಗಳನ್ನು ತಂದಿದೆ. ಆದರೆ, ನಿತ್ಯದ ಪಾವತಿಯಲ್ಲಿ ಬ್ಯಾಂಕ್‌ಗಳಿಗೆ ನಿರ್ಬಂಧ ಹೇರಿದೆ. ಹಾಗಾದರೆ, ಯಾವ ಬ್ಯಾಂಕ್ನಿಂದ ಗರಿಷ್ಠ ಎಷ್ಟು ಪ್ರಮಾಣದಲ್ಲಿ ಪಾವತಿಸಲು ಸಾಧ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಹೆಚ್ಡಿಎಫ್ಸಿ ಬ್ಯಾಂಕ್:HDFC ಬ್ಯಾಂಕ್‌ನಲ್ಲಿ ದಿನಕ್ಕೆ 1 ಲಕ್ಷ ರೂಪಾಯಿವರೆಗೆ UPI ವಹಿವಾಟುಗಳನ್ನು ವೈಯಕ್ತಿಕವಾಗಿ (ವ್ಯಕ್ತಿಯಿಂದ ವ್ಯಕ್ತಿಗೆ) ಮಾಡಬಹುದು. ಬ್ಯಾಂಕ್ನ ಖಾತೆದಾರರು 24 ಗಂಟೆಯಲ್ಲಿ ಗರಿಷ್ಠ 20 ವಹಿವಾಟುಗಳನ್ನು ನಡೆಸಬಹುದಾಗಿದೆ.
ಎಸ್ಬಿಐ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೈನಂದಿನ ಪಾವತಿ ಮೊತ್ತದ ಮಿತಿಯು 1 ಲಕ್ಷ ರೂಪಾಯಿ ಇದೆ. ದಿನಕ್ಕೆ 10 ಬಾರಿ ಮಾತ್ರ ವಹಿವಾಟು ನಡೆಸಬಹುದು. ಇದರ ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್‌ಗಳು ಕೂಡ ಇಷ್ಟೇ ಮಿತಿಯನ್ನು ಹೊಂದಿವೆ.
ಐಸಿಐಸಿಐ ಬ್ಯಾಂಕ್:ಈ ಬ್ಯಾಂಕ್‌ನಲ್ಲಿ ಗರಿಷ್ಠ ವಹಿವಾಟಿನ ಮಿತಿ 1 ಲಕ್ಷ ರೂಪಾಯಿ. 24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟುಗಳಿಗೆ ಅವಕಾಶವಿದೆ.