ಕರ್ನಾಟಕ

karnataka

ETV Bharat / business

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೇ? ನಿಮಗೆ 7-5-3-1 ನಿಯಮ ಗೊತ್ತಿರಲೇಬೇಕು - Mutual Fund Investment Tips

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕಾದರೆ 7-5-3-1 ನಿಯಮ ಹೆಚ್ಚು ಪ್ರಸ್ತಾಪವಾಗುತ್ತದೆ. ಹಾಗಾದರೆ, ಈ ನಿಯಮವೇನು?, ಇದರ ಬಗ್ಗೆ ವಿವರವಾದ ಮಾಹಿತಿ ಓದಿ.

Mutual Fund Investment Tips
ಮ್ಯೂಚುವಲ್ ಫಂಡ್‌

By ETV Bharat Karnataka Team

Published : Apr 2, 2024, 5:26 PM IST

ಮ್ಯೂಚುವಲ್ ಫಂಡ್‌ಗಳಲ್ಲಿ (Mutual Fund) ಹೂಡಿಕೆ ಮಾಡಲು ಅನೇಕರು ಬಯಸುತ್ತಾರೆ. ಆದರೆ, ನಷ್ಟದ ಭಯದಿಂದ ಮುಂದೆ ಹೋಗುವುದಿಲ್ಲ. ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಸಿಪ್​ (Systematic Investment Plan-SIP) ಮೂಲಕ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯ ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಪ್ರಮುಖವಾಗಿ, ನೀವು 7-5-3-1 ನಿಯಮವನ್ನು ಅನುಸರಿಸಿದರೆ, ಕಾಲಾನಂತರದಲ್ಲಿ ನಿಮ್ಮ ಆದಾಯವನ್ನು ವ್ಯವಸ್ಥಿತ ರೀತಿಯಲ್ಲಿ ಹೆಚ್ಚಿಸಬಹುದು.

ಏನಿದು 7-5-3-1 ನಿಯಮ?: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಈ 7-5-3-1 ನಿಯಮವನ್ನು ತಿಳಿದುಕೊಳ್ಳಬೇಕು. ಇದರ ಆಧಾರದ ಮೇಲೆ ನಿರ್ದಿಷ್ಟ ಆಸ್ತಿ ವರ್ಗಗಳಲ್ಲಿ (Asset Classes) ಹಣವನ್ನು ಹೇಗೆ ಹಂಚಿಕೆ ಮಾಡುವುದು ಎಂದು ತಿಳಿಯುತ್ತದೆ. ಈ ನಿಯಮ ನಿಮ್ಮ ಹೂಡಿಕೆಗೆ ಉತ್ತಮ ಚೌಕಟ್ಟು ಒದಗಿಸುತ್ತದೆ. ಇದು ವೈವಿಧ್ಯಮಯ ಬಂಡವಾಳಕ್ಕೂ (Portfolio Diversification) ಅನುಮತಿಸುತ್ತದೆ.

(7) ವಾರ್ಷಿಕ ಆದಾಯದ ಏಳು ಪಟ್ಟು:ಈ 7-5-3-1 ನಿಯಮದಲ್ಲಿ ಸಂಖ್ಯೆ 7 ವಿಶೇಷ ಅರ್ಥ ಹೊಂದಿದೆ. ಇದು ನಿಮ್ಮ ವಾರ್ಷಿಕ ಆದಾಯದ ಕನಿಷ್ಠ 7 ಪಟ್ಟು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ಪ್ರಾರಂಭಿಸಿ ಎಂದು ಹೇಳುತ್ತದೆ. ನಿಮ್ಮ ಹೂಡಿಕೆ ತಂತ್ರಕ್ಕೆ ಇದು ಉತ್ತಮ ಅಡಿಪಾಯವಿದ್ದಂತೆ. ನಿಮ್ಮ ಹೂಡಿಕೆಯ ಪ್ರಯಾಣವನ್ನು ವೇಗಗೊಳಿಸಲು ಇದು ತುಂಬಾ ಉಪಯುಕ್ತವಾಗಿದೆ.

(5) ಡೈವರ್ಸಿಫಿಕೇಷನ್​ಗಾಗಿ 5 ಸಿಪ್​ಗಳು:ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ ನಂತರ ನೀವು 5 ರೀತಿಯ ಸಿಪ್(SIP)​ಗಳನ್ನು ಪ್ರಾರಂಭಿಸಬೇಕು. ವಿಶೇಷವಾಗಿ ಸಾಲ, ಇಕ್ವಿಟಿ, ಹೈಬ್ರಿಡ್ ಫಂಡ್‌ಗಳಂತಹ ವೈವಿಧ್ಯಮಯ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದು ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ನಿಮ್ಮ ಅಪಾಯ ಸಹಿಷ್ಣುತೆ ಮತ್ತು ಹಣಕಾಸಿನ ಗುರಿಗಳ ಆಧಾರದ ಮೇಲೆ ನೀವು ಇಕ್ವಿಟಿ, ಸಾಲ ಮತ್ತು ಹೈಬ್ರಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು.

(3) ಮೂರು ಅಸೆಟ್​ ಕ್ಲಾಸೆಸ್:7-5-3-1 ನಿಯಮದಲ್ಲಿ 3 ಎಂದರೆ ಮೂರು ಅಸೆಟ್​ ಕ್ಲಾಸೆಸ್. ಅವುಗಳೆಂದರೆ ಇಕ್ವಿಟಿ, ಸಾಲ ಮತ್ತು ಹೈಬ್ರಿಡ್ ಫಂಡ್‌ಗಳು. ಇಕ್ವಿಟಿ ಫಂಡ್‌ಗಳಲ್ಲಿ ಅಪಾಯ ಮತ್ತು ಪ್ರತಿಫಲ ಎರಡೂ ಹೆಚ್ಚು. ಸಾಲ ನಿಧಿಗಳು ಕಡಿಮೆ ಅಪಾಯವನ್ನು ಹೊಂದಿರುತ್ತವೆ. ಆದರೆ, ಆದಾಯವೂ ಕಡಿಮೆ. ಈ ಸಾಲ ನಿಧಿಗಳು ನಿಮಗೆ ಸ್ಥಿರವಾದ ಆದಾಯವನ್ನು ನೀಡುತ್ತವೆ. ಹೈಬ್ರಿಡ್ ಫಂಡ್‌ಗಳು ಇಕ್ವಿಟಿ ಮತ್ತು ಸಾಲ ನಿಧಿಗಳ ಸಂಯೋಜನೆಯಾಗಿದೆ. ಆದ್ದರಿಂದ ಈ ಅಸೆಟ್​ ಕ್ಲಾಸೆಸ್​ನಲ್ಲಿ ನಿಮ್ಮ ಹೂಡಿಕೆಗಳನ್ನು ಇಟ್ಟುಕೊಳ್ಳುವುದು ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ದೀರ್ಘಾವಧಿಯಲ್ಲಿ ಉತ್ತಮ ಆದಾಯದ ಸಾಧ್ಯತೆಗಳು ಹೆಚ್ಚಾಗುತ್ತವೆ.

(1) ಒಂದು ಬಾರಿ ಹೂಡಿಕೆ:ನೀವು ಸಿಪ್​ ಮೋಡ್‌ನಲ್ಲಿ ವಿವಿಧ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಹೀಗೆ ಮಾಡುವುದು ಒಳ್ಳೆಯದು. ಆದರೆ, ಮ್ಯೂಚುವಲ್ ಫಂಡ್‌ಗಳಲ್ಲಿ ಒಮ್ಮೆಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬಹುದು. ಇದರಿಂದ ಭಾರೀ ಲಾಭ ಪಡೆಯಬಹುದು. ಸಹಜವಾಗಿಯೇ ಇದು ಅಪಾಯವನ್ನು ಹೊಂದಿದ್ದರೂ, ನಿಮ್ಮ ಬಂಡವಾಳವನ್ನು ಮರುಸಮತೋಲನಗೊಳಿಸಲು, ಮಾರುಕಟ್ಟೆಯ ಹಿಮ್ಮುಖತೆಯ ಲಾಭವನ್ನು ಪಡೆಯಲು ಮತ್ತು ಉದಯೋನ್ಮುಖ ಪ್ರವೃತ್ತಿಗಳಿಗೆ ಅನುಗುಣವಾಗಿ ಲಾಭ ತಂದುಕೊಡಲು ಇದು ನಿಮಗೆ ನೆರವಾಗುತ್ತದೆ. ಹೀಗಾಗಿಯೇ 7-5-3-1 ನಿಯಮವು ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯ ನೀಲನಕ್ಷೆಯಂತೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ:ನಿಮ್ಮ PAN ಕಾರ್ಡ್ ದುರುಪಯೋಗವಾಗಿದೆಯೇ? ಈ ವಿಚಾರಗಳನ್ನು ಅವಶ್ಯವಾಗಿ ಇಂದೇ ತಿಳಿಯಿರಿ - PAN Card Fraud

ABOUT THE AUTHOR

...view details