ಕರ್ನಾಟಕ

karnataka

ETV Bharat / business

'ತುಂಬಾ, ತುಂಬಾ ಸಂತೋಷವಾಗಿದೆ': ಆ್ಯಪಲ್ ಸಿಇಒ ಭಾರತದ ಬಗ್ಗೆ ಹೀಗೆ ಅಂದಿದ್ಯಾಕೆ? - Apple CEO Tim Cook - APPLE CEO TIM COOK

ಭಾರತದಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ಆ್ಯಪಲ್ ತನ್ನ ವಹಿವಾಟಿನಲ್ಲಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದೆ.

ಆ್ಯಪಲ್ ಸಿಇಒ ಟಿಮ್ ಕುಕ್
ಆ್ಯಪಲ್ ಸಿಇಒ ಟಿಮ್ ಕುಕ್ (IANS)

By ETV Bharat Karnataka Team

Published : May 3, 2024, 2:49 PM IST

Updated : May 3, 2024, 3:11 PM IST

ನವದೆಹಲಿ: ಆ್ಯಪಲ್ ಈ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಲವಾದ ಎರಡಂಕಿ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಕಂಪನಿಯು ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಲಿದೆ ಎಂದು ಕಂಪನಿಯ ಸಿಇಒ ಟಿಮ್ ಕುಕ್ ಶುಕ್ರವಾರ ಹೇಳಿದ್ದಾರೆ.

"ನಾವು ಭಾರತದಲ್ಲಿ ಬಲವಾದ ಎರಡಂಕಿಯಷ್ಟು ಬೆಳೆದಿದ್ದೇವೆ. ಇದು ನಮಗೆ ತುಂಬಾ ಸಂತೋಷದ ವಿಷಯವಾಗಿದೆ. ಇದು ನಾವು ಮಾರ್ಚ್​​ ತ್ರೈಮಾಸಿಕದಲ್ಲಿ ಗಳಿಸಿದ ದಾಖಲೆಯ ಆದಾಯವಾಗಿದೆ" ಎಂದು ಟಿಮ್ ಕುಕ್ ಹೇಳಿದರು.

"ಭಾರತವು ನಂಬಲಾಗದಷ್ಟು ರೋಮಾಂಚನಕಾರಿ ಮಾರುಕಟ್ಟೆಯಾಗಿದೆ ಮತ್ತು ಇದು ನಮ್ಮ ಪಾಲಿಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಪ್ರಾಯೋಗಿಕವಾಗಿ ನೋಡಿದರೆ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆಯನ್ನು ಎದುರಿಸಲು ಕಾರ್ಯಾಚರಣೆಯ ದೃಷ್ಟಿಯಿಂದ ಅಥವಾ ಪೂರೈಕೆ ಸರಪಳಿಯ ದೃಷ್ಟಿಯಿಂದ ಭಾರತದಲ್ಲಿ ಉತ್ಪಾದನೆ ಮಾಡುವುದು ಬಹಳ ಮುಖ್ಯ" ಎಂದು ಟಿಮ್ ಕುಕ್ ಮಾರ್ಚ್ 2024 ಕ್ಕೆ ಕೊನೆಗೊಳ್ಳುವ 2024 ರ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಘೋಷಿಸಿದ ನಂತರ ಸಭೆಯಲ್ಲಿ ಹೇಳಿದರು.

ಭಾರತ ಡೆವಲಪರ್‌ಗಳ ಬೇಸ್‌ ಆಗಿ ಬೆಳವಣಿಗೆ: ಕಂಪನಿಯು ತನ್ನ ಮಾರಾಟ ಜಾಲ ವಿಸ್ತರಿಸುವುದನ್ನು ಮುಂದುವರಿಸುತ್ತಿದೆ ಮತ್ತು ಭಾರತದಲ್ಲಿ ಡೆವಲಪರ್ ಪರಿಸರ ವ್ಯವಸ್ಥೆಯಲ್ಲಿಯೂ ಕೆಲಸ ಮಾಡುತ್ತಿದೆ ಎಂದು ಕುಕ್ ಹೇಳಿದರು. "ಭಾರತವು ಅತ್ಯಂತ ವೇಗವಾಗಿ ಡೆವಲಪರ್​ಗಳ ಬೇಸ್​ ಆಗಿ ಬೆಳೆಯುತ್ತಿದೆ. ಹೀಗಾಗಿ ನಾವು ಡೆವಲಪರ್ ವ್ಯವಸ್ಥೆಯಿಂದ ಹಿಡಿದು ಮಾರುಕಟ್ಟೆಯವರೆಗೆ ಸಮಗ್ರ ಕಾರ್ಯಾಚರಣೆಗಾಗಿ ವ್ಯವಸ್ಥೆಯನ್ನು ತಯಾರಿಸಲು ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

"ನಾವು ಒಂದು ಡಜನ್​ಗೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಆದಾಯದ ದಾಖಲೆಗಳನ್ನು ನಿರ್ಮಿಸಿದ್ದೇವೆ. ಇವುಗಳಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ, ಕೆನಡಾ, ಭಾರತ, ಸ್ಪೇನ್ ಮತ್ತು ಟರ್ಕಿಯ ಮಾರ್ಚ್ ತ್ರೈಮಾಸಿಕದಲ್ಲಿ ಗಳಿಸಿದ ದಾಖಲೆಯ ಆದಾಯಗಳು ಸೇರಿವೆ" ಎಂದು ಕುಕ್ ತಿಳಿಸಿದರು.

ಪ್ರಸಕ್ತ ತ್ರೈಮಾಸಿಕದಲ್ಲಿ ವಿಶ್ವದಾದ್ಯಂತ ಐಫೋನ್ ಮಾರಾಟದಲ್ಲಿ ತೀವ್ರ ಕುಸಿತವಾಗಿರುವುದನ್ನು ಆ್ಯಪಲ್ ಗುರುವಾರ ಬಹಿರಂಗಪಡಿಸಿದೆ. ಕೊರೊನಾ ಅಲೆ ಕಡಿಮೆಯಾದ ನಂತರ ಐಫೋನ್​ನ ಅತ್ಯಧಿಕ ಕಡಿಮೆ ಮಾರಾಟದ ತ್ರೈಮಾಸಿಕ ಇದಾಗಿದೆ. ಹೀಗಾಗಿ ತನ್ನ ಸಾಧನಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಕಂಪನಿಯು ಕೃತಕ ಬುದ್ಧಿಮತ್ತೆ ಆಧರಿತ ಹೊಸ ಫೋನ್​ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇತ್ತೀಚಿನ ತ್ರೈಮಾಸಿಕ ಆದಾಯದ ವರದಿಯನ್ನು ಪ್ರಸ್ತುತ ಪಡಿಸಲು ಕರೆಯಲಾದ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿದ ಕುಕ್, ಆ್ಯಪಲ್ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ : ಮಹಾನ್​​ ಕ್ರಾಂತಿಕಾರಿ ಆವಿಷ್ಕಾರ: ಬ್ಲೂಟೂತ್​ನಿಂದ 600 ಕಿಮೀ ದೂರದ ಉಪಗ್ರಹದೊಂದಿಗೆ ಸಂಪರ್ಕ - BLUETOOTH CONNECTION

Last Updated : May 3, 2024, 3:11 PM IST

ABOUT THE AUTHOR

...view details