ETV Bharat / business

ಮೂರನೇ ದಿನವೂ ಷೇರುಪೇಟೆಯಲ್ಲಿ ಕುಸಿತ: ಲಕ್ಷಾಂತರ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು! - STOCK MARKETS TANKED SHARPLY

ಸತತ ಮೂರನೇ ದಿನವೂ ಷೇರು ಪೇಟೆ ಕುಸಿತದ ಹಾದಿ ಹಿಡಿದಿದೆ. ನಿಫ್ಟಿಯ ಟಾಪ್​ 50 ಷೇರುಗಳ ಪೈಕಿ 47 ಷೇರುಗಳು ನಷ್ಟ ಅನುಭವಿಸಿದರೆ, ಕೇವಲ ಮೂರು ಷೇರುಗಳು ಲಾಭದಲ್ಲಿ ವಹಿವಾಟು ಮುಂದುವರೆಸಿವೆ.

bloodbath-in-indian-stock-indices-following-global-markets
Bloodbath in Indian stock indices following global markets (ANI)
author img

By ANI

Published : 3 hours ago

ಮುಂಬೈ, ಮಹಾರಾಷ್ಟ್ರ: ಅಮೆರಿಕದ ಫೆಡ್​​​ ಮತ್ತೆ ರೆಪೋ ರೇಟ್​ ಕಡಿತ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಸೇರಿದಂತೆ ವಿಶ್ವದ ಮಾರುಕಟ್ಟಗಳು ಒತ್ತಡಕ್ಕೆ ಸಿಲುಕಿವೆ.

ಇನ್ನು ಭಾರತೀಯ ಷೇರು ಮಾರುಕಟ್ಟೆಗಳಾ ನಿಫ್ಟಿ ಮತ್ತು ಸೆನ್ಸೆಕ್ಸ್​ ಕಳೆದ ಎರಡು ದಿನಗಳಿಂದ ಭಾರಿ ಕುಸಿತದೊಂದಿಗೆ ವಹಿವಾಟು ಮುಗಿಸಿದ್ದವು, ಇಂದೂ ಕೂಡಾ ಈ ಕುಸಿತ ಮುಂದುವರೆದಿದೆ. ನಿಫ್ಟಿ 50 ಸೂಚ್ಯಂಕವು ಶೇ 1.33ರಷ್ಟು ಅಂದರೆ 321 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 23,877.15 ಪಾಯಿಂಟ್‌ಗಳಲ್ಲಿ ಇಂದಿನ ದಿನಾರಂಭ ಮಾಡಿತು. ಬಿಎಸ್‌ಇ 1,153.17 ಪಾಯಿಂಟ್ ಕೆಳಗಿಳಿಯುವ ಮೂಲಕ 79,029.03 ಪಾಯಿಂಟ್‌ಗಳಲ್ಲಿ ದಿನದ ವಹಿವಾಟ ಶುರು ಮಾಡಿತು.

ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹಿಂಜರಿತ: ಆರಂಭಿಕ ಸೆಷನ್‌ನಲ್ಲಿ ತೀವ್ರ ಮಾರಾಟದ ಒತ್ತಡ ಕಂಡು ಬಂತು. ಇದಕ್ಕೆ ಪ್ರಮುಖ ಕಾರಣ ಎಂದರೆ ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಇನ್ನೂ ಹೆಚ್ಚಿನ ಬಡ್ಡಿ ದರ ಕಡಿತಗಳನ್ನು ಮಾಡುವ ನಿರೀಕ್ಷೆ ಇದೆ. ಇದು ಜಾಗತಿಕವಾಗಿ ಪ್ರಮುಖ ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಅಮೆರಿಕದ ಕೇಂದ್ರ ಬ್ಯಾಂಕ್​ ಬಡ್ಡಿ ದರ ಕಡಿತ ಮಾಡು ನಿರ್ಧಾರವು ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬಲ ವೃದ್ಧಿಸಿಕೊಂಡ ಡಾಲರ್​: 2025ರಲ್ಲಿ ಫೆಡ್​ ದರ ಕಡಿತದ ಮುನ್ಸೂಚನೆಗಳು, ಅಮೆರಿಕದ ಷೇರುಗಳು, ಚಿನ್ನ, ಬೆಳ್ಳಿ, ಇಎಂ ಕರೆನ್ಸಿಗಳ ಮಾರಾಟಕ್ಕೆ ಕಾರಣವಾಗಿದೆ. ಅತ್ತ ಯುಎಸ್ ಡಾಲರ್ ತನ್ನ ಬಲ ಹೆಚ್ಚಿಸಿಕೊಂಡಿದೆ. ಹೀಗಾಗಿ ಬಹುತೇಕ ಎಲ್ಲಾ ಮಾರುಕಟ್ಟೆಗಳಲ್ಲಿ ರೆಡ್​ ಮಾರ್ಕ್​ ಕಂಡು ಬಂದಿದೆ ಎಂದು ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಹೇಳಿದ್ದಾರೆ.

ಟಾಪ್​ 50ಯಲ್ಲಿ 47 ಷೇರುಗಳಿಗೆ ಲಾಸ್​: ಇಂದು ಎನ್​​ಎಸ್​​ಸಿಯ ಎಲ್ಲ ವಲಯದ ಷೇರುಗಳಲ್ಲಿ ಮಾರಾಟದ ಪ್ರಕ್ರಿಯೆ ಕಂಡು ಬಂತು. ನಿಫ್ಟಿ ಐಟಿ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್‌ಗಳಲ್ಲಿ ಹೆಚ್ಚಿನ ಮಾರಾಟದ ಒತ್ತಡ ಕಂಡು ಬಂದಿದೆ. ನಿಫ್ಟಿ 50ಯಲ್ಲಿ ಕೇವಲ 3 ಷೇರುಗಳು ಲಾಭ ಗಳಿಸಿದರೆ 47 ಷೇರುಗಳು ಕುಸಿತ ಕಂಡಿವೆ. ಈ ಕುಸಿತದ ಮಾರುಕಟ್ಟೆಯಲ್ಲೂ ಡಾ. ರೆಡ್ಡಿ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಐಟಿಸಿ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಲಾಭ ಗಳಿಸಿದ ಷೇರುಗಳಾಗಿವೆ.

ಇನ್ನು ಏಷ್ಯಾದ ಮಾರುಕಟ್ಟೆಗಳು ಸಹ ಕೆಳ ಮುಖವಾದ ಪ್ರವೃತ್ತಿಯಲ್ಲಿ ವಹಿವಾಟು ನಡೆಸುತ್ತಿವೆ. ಜಪಾನ್‌ನ ನಿಕ್ಕಿ 225, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇಕಡಾ 1.06 ರಷ್ಟು ಕುಸಿತ ಕಂಡಿದೆ. ದಕ್ಷಿಣ ಕೊರಿಯಾದ ಮಾರುಕಟ್ಟೆಯು ಶೇಕಡಾ 1.58 ರಷ್ಟು ಪಾತಾಳಕ್ಕೆ ಹೋಗಿದೆ. 2025 ರ ಫೆಡ್ ದರ ಕಡಿತದ ಸುಳಿವಿನ ಹಿನ್ನೆಲೆ ಅಮೆರಿಕದ ಮಾರುಕಟ್ಟೆಗಳು ತೀವ್ರವಾಗಿ ಕುಸಿದವು. S&P 500 ಶೇಕಡಾ 2.95 ರಷ್ಟು ಕುಸಿದು 178 ಅಂಕಗಳನ್ನು ಕಳೆದುಕೊಂಡು 5,872 ಕ್ಕೆ ತಲುಪಿತು.

ಇದನ್ನು ಓದಿ: ಹಿಂಗಾರು ಹಂಗಾಮಿನಲ್ಲಿ ಎಂಎಸ್​ಪಿಯಡಿ 2.75 ಲಕ್ಷ ರೈತರಿಗೆ 4,820 ಕೋಟಿ ರೂ. ಪಾವತಿ: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.