ನವದೆಹಲಿ: ಫೆಬ್ರವರಿ 1 ರಂದು ಮಂಡಿಸಲಾಗುವ ಕೇಂದ್ರ ಬಜೆಟ್ನಲ್ಲಿ ಭಾರತದ ಉತ್ಪಾದನಾ ವಲಯವನ್ನು ಬಲಪಡಿಸುವ ಅಗತ್ಯವಿದೆ. ಈ ಮೂಲಕ ಚೀನಾಕ್ಕೆ ಪರ್ಯಾಯವಾಗಿ ಭಾರತವನ್ನು ಮುನ್ನೆಲೆಗೆ ತರಬೇಕಾಗಿದೆ. Apple ಮತ್ತು Foxconn ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿರುವಂತಹ ಯಶಸ್ವಿ ಉದಾಹರಣೆಗಳಿಗೆ ಹೋಲಿಸಿದರೆ, ಬೆಳವಣಿಗೆಯ ಗುರಿಯನ್ನು ಹೊಂದಿರುವ ಹೊಸ ಉತ್ಪಾದನಾ ಕಂಪನಿಗಳಿಗೆ ಬಜೆಟ್ನಲ್ಲಿ 15% ಅನುಕೂಲಕರ ತೆರಿಗೆ ದರವನ್ನು ವಿಸ್ತರಿಸಬೇಕು.
ಇದರೊಂದಿಗೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಒಟ್ಟಾರೆ ಆರ್ಥಿಕ ಕುಸಿತದಂತಹ ವಿವಿಧ ಕಾರಣಗಳಿಂದಾಗಿ ಕ್ಷೀಣಿಸುತ್ತಿರುವ ರಫ್ತುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯತಂತ್ರದ ವಿಧಾನವನ್ನು ಅನುಸರಿಸಬೇಕು.
ರಫ್ತು ಮತ್ತು ಮೇಕ್ ಇನ್ ಇಂಡಿಯಾ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2025ರ ವೇಳೆಗೆ ಭಾರತವನ್ನು 300 ಬಿಲಿಯನ್ ಡಾಲರ್ ಪವರ್‌ಹೌಸ್ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವುದರಿಂದ, ರಫ್ತು ಚಟುವಟಿಕೆಗಳ ಮೂಲಕ ಗಣನೀಯ ಭಾಗ, ಅಂದರೆ ಸುಮಾರು 120 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ಪಾದನಾ ವಲಯಕ್ಕೆ ನೀಡುವ ಉತ್ತೇಜನೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಗುರಿಗಳಿಗೆ ಕೊಡುಗೆ ನೀಡುತ್ತದೆ.
ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ): ಸುಸ್ಥಿರ ಬೆಳವಣಿಗೆ ಹೆಚ್ಚಿಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು. ಉದ್ಯಮದ ಒಂದು ವಿಭಾಗವು ಡಿಸೈನ್ ಮತ್ತು ಇನ್ನೋವೇಶನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಆಗಿ ಪರಿವರ್ತಿಸುವುದರಿಂದ ಉತ್ಪಾದನಾ ರಂಗಕ್ಕೆ ಹೂಡಿಕೆಗಳನ್ನು ಪ್ರೋತ್ಸಾಹಿಸುವುದಲ್ಲದೇ ಸಂಶೋಧನೆ ಮತ್ತು ಅಭಿವೃದ್ಧಿಗೂ ಬಂಡವಾಳ ಹರಿದು ಬರುವಂತೆ ಮಾಡಿದೆ. ಈ ಬದಲಾವಣೆಯು ನಾವೀನ್ಯತೆಯನ್ನು ಹೆಚ್ಚಿಸುತ್ತದೆ, ಅಂತಿಮವಾಗಿ ಜಾಗತಿಕವಾಗಿ ಭಾರತೀಯ ಕೈಗಾರಿಕೆಗಳ ಸ್ಪರ್ಧಾತ್ಮಕತೆಯನ್ನು ವೃದ್ಧಿಸುತ್ತದೆ.
ಕಡಿಮೆ ತೆರಿಗೆ ಪದ್ಧತಿ: ಜಾಗತಿಕ ಉತ್ಪಾದನೆಗೆ ಭಾರತವನ್ನು ಉತ್ತೇಜಿಸಲು ಮತ್ತು ಬೆಂಬಲಿಸುವ ಸಲುವಾಗಿ, ಹೊಸ ಉತ್ಪಾದನಾ ಕಂಪನಿಗಳಿಗೆ ಕಡಿಮೆ ತೆರಿಗೆ ದರ ನಿಬಂಧನೆಯನ್ನು ಕನಿಷ್ಠ 5 ವರ್ಷಗಳವರೆಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಧ್ರುವ ಅಡ್ವೈಸರ್ಸ್ನ ಕಾರ್ಯನಿರ್ವಾಹಕ ಅಭಿಪ್ರಾಯಪಟ್ಟಿದ್ದಾರೆ.