ಹೈದರಾಬಾದ್: ತ್ವರಿತ ಸಾಲವನ್ನು ತೆಗೆದುಕೊಳ್ಳುವ ಮೊದಲು ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಅದು ಅಗತ್ಯವೂ ಹೌದು. ಒಂದು ಕಾಲದಲ್ಲಿ, ಸಾಲ ಪಡೆಯಲು ಬ್ಯಾಂಕ್ಗಳನ್ನು ಸುತ್ತಬೇಕಾಗಿತ್ತು. ಆದರೆ ಈಗ ಅಷ್ಟೊಂದು ಕಷ್ಟಪಡಬೇಕಿಲ್ಲ. ಸಾಲ ಪಡೆಯುವುದು ಈಗ ತುಂಬಾ ಸುಲಭ. ಯಾವುದೇ ದಾಖಲೆ ನೀಡದೇ ಅದು ಒಂದೇ ಕ್ಲಿಕ್ನಲ್ಲಿ ನಿಮಗೆ ಬೇಕಾದಷ್ಟು ಸಾಲ ಪಡೆದುಕೊಳ್ಳಬಹುದು.
ತ್ವರಿತ ಸಾಲಗಳು ಸುಲಭವಾಗಿ ಲಭ್ಯವಾಗುವುದರಿಂದ, ಈ ರೀತಿಯ ಸಾಲಗಳ ಜನಪ್ರಿಯತೆ ಹೆಚ್ಚುತ್ತಿದೆ. ಅಂದಹಾಗೆ ನೀವೇನಾದರೂ ಇಂತಹ ತ್ವರಿತ ಸಾಲಗಳಿಗಾಗಿ ಪ್ರಯತ್ನಿಸುತ್ತಿದ್ದೀರಾ? ಆದರೆ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು.
ಸಾಲ ಪಡೆಯಲು ಸರಿಯಾದ ನಿಯಮ ಅನುಸರಿಸಿ:ಆನ್ಲೈನ್ ಈಗ ತ್ವರಿತ ಸಾಲ ನೀಡುವ ಸಾಕಷ್ಟು ಆ್ಯಪ್ಗಳಿವೆ. ಇವುಗಳಲ್ಲಿ ಹೆಚ್ಚಿನವು ನಕಲಿ ಕಂಪನಿಗಳು ಅಥವಾ ಮೋಸ ಎಸಗುವ ಕಂಪನಿಗಳಾಗಿರುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ವೆಬ್ಸೈಟ್ಗಳಲ್ಲಿ ಸಾಲಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ. ಗ್ರಾಹಕರ ವಿಮರ್ಶೆಗಳು ಮತ್ತು ರೇಟಿಂಗ್ಗಳನ್ನು ಸಹ ನೋಡಿ. ಆಗ ನಿಮಗೆ ಒಂದು ತೀರ್ಮಾನಕ್ಕೆ ಬರಲು ಅಲ್ಪ- ಸ್ವಲ್ಪವಾದರೂ ಗೊತ್ತಾಗಬಹುದು. ಅಷ್ಟೇ ಅಲ್ಲ ಆ ಆ್ಯಪ್ ಸರಿಯಾದ ವೇದಿಕೆಯೋ ಅಲ್ಲವೋ ಎಂಬುದೂ ತಿಳಿಯುತ್ತದೆ. ಪಾರದರ್ಶಕ ನೀತಿಗಳು, ಸುರಕ್ಷಿತ ಆನ್ಲೈನ್ ವಹಿವಾಟುಗಳು ಮತ್ತು ನ್ಯಾಯಯುತ ಸಾಲ ನೀಡುವ ಅಭ್ಯಾಸಗಳನ್ನು ಹೊಂದಿರುವ ಕಂಪನಿಗಳನ್ನೇ ಸಾಲ ಪಡೆಯಲು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಆಗ ಮಾತ್ರ ನೀವು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನೆಮ್ಮದಿಯಿಂದ ಇರುತ್ತೀರಿ ಮತ್ತು ಇರಬಹುದು.
ಬಡ್ಡಿದರಗಳ ಬಗ್ಗೆ ಇರಲಿ ಎಚ್ಚರ: ಸಾಲವನ್ನು ತೆಗೆದುಕೊಳ್ಳುವಾಗ ಬಡ್ಡಿದರಗಳ ಬಗ್ಗೆ ಖಂಡಿತವಾಗಿಯೂ ಯೋಚಿಸಬೇಕು. ಸಾಮಾನ್ಯ ಸಾಲಗಳಿಗೆ ಹೋಲಿಸಿದರೆ, ತ್ವರಿತ ಸಾಲಗಳ(ಇನ್ಸ್ಟಂಟ್ ಲೋನ್) ಬಡ್ಡಿ ದರಗಳು ತುಂಬಾ ಹೆಚ್ಚಿರುತ್ತದೆ. ಇದಲ್ಲದೇ, ವಿಳಂಬ ಪಾವತಿ ಶುಲ್ಕ, ಪೂರ್ವಪಾವತಿ ಶುಲ್ಕ ಮತ್ತು ಸಂಸ್ಕರಣಾ ಶುಲ್ಕವನ್ನು ಸಹ ವಿಧಿಸಲಾಗುತ್ತದೆ. ಆದ್ದರಿಂದ, ನೀವು ಕಡಿಮೆ ಬಡ್ಡಿದರದೊಂದಿಗೆ ಸಾಲ ನೀಡುವ ಕಂಪನಿಗಳನ್ನು ಆಯ್ಕೆ ಮಾಡಬೇಕು.