ಜಮ್ಶೆಡ್‌ಪುರ (ಜಾರ್ಖಂಡ್):ಟಾಟಾ ಸ್ಟೀಲ್‌ನ ವೆಸ್ಟ್ ಬೊಕಾರೊ ವಿಭಾಗದಿಂದ 14 ಟ್ರಾನ್ಸ್‌ಜೆಂಡರ್ ಉದ್ಯೋಗಿಗಳ ಹೊಸ ಬ್ಯಾಚ್ ಅನ್ನು ಆರಂಭಿಸಲಾಯಿತು. ಅಂತಾರಾಷ್ಟ್ರೀಯ ಟ್ರಾನ್ಸ್‌ಜೆಂಡರ್ ದಿನದ ಸಂದರ್ಭದಲ್ಲಿ ನಿನ್ನೆ (ಭಾನುವಾರ) ಆಯೋಜಿಸಿದ್ದ ಸಮಾರಂಭದಲ್ಲಿ ಹೆವಿ ಅರ್ಥ್ ಮೂವಿಂಗ್ ಮೆಷಿನರಿ ಆಪರೇಟರ್ ಟ್ರೇನಿಗಳಾಗಿ ನೇಮಕ ಮಾಡಲಾಯಿತು.
ಕಂಪನಿಯಲ್ಲಿ ಒಟ್ಟು ಟ್ರಾನ್ಸ್‌ಜೆಂಡರ್ ಉದ್ಯೋಗಿಗಳ ಸಂಖ್ಯೆ ಇದೀಗ 120 ರಷ್ಟಿದೆ. ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಟಾಟಾ ಸ್ಟೀಲ್ನಲ್ಲಿ ಯಾವುದೇ ಲಿಂಗ ಆಧಾರದಲ್ಲಿ ಗುರುತಿಸದೇ ಎಲ್ಲಾ ಉದ್ಯೋಗಿಗಳಿಗೆ ಉತ್ತಮ ಬೆಂಬಲ ಹಾಗೂ ಗೌರವಯುತವಾದ ವಾತಾವರಣ ನಿರ್ಮಿಸುವತ್ತ ಗಮನಹರಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ವೆಸ್ಟ್ ಬೊಕಾರೊ ವಿಭಾಗದ ಪ್ರಧಾನ ವ್ಯವಸ್ಥಾಪಕ ಅನುರಾಗ್ ದೀಕ್ಷಿತ್ ಮಾತನಾಡಿ, ''ನಮ್ಮ ಹೊಸ ತರಬೇತುದಾರರು ನಮ್ಮ ತಂಡಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಾರೆ ಎಂಬ ವಿಶ್ವಾಸವಿದೆ. ಜೊತೆಗೆ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಇರುವ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ'' ಎಂದು ಹೇಳಿದರು.
ಇತ್ತೀಚಿನ ಮಾಹಿತಿ, ತಮಿಳುನಾಡಿನಲ್ಲಿ ಟಾಟಾ ಮೋಟರ್ಸ್ 9 ಸಾವಿರ ಕೋಟಿ ರೂ. ಹೂಡಿಕೆ:ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ತಯಾರಿಸುವ ಟಾಟಾ ಮೋಟರ್ಸ್ ಗ್ರೂಪ್ ತಮಿಳುನಾಡಿನಲ್ಲಿ ಸುಮಾರು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಇತ್ತೀಚೆಗೆ ಪ್ರಕಟಿಸಿತ್ತು.
ಟಾಟಾ ಮೋಟಾರ್ಸ್ ಗ್ರೂಪ್ ಮಾರ್ಚ್ 13ರಂದು ತಮಿಳುನಾಡು ಸರ್ಕಾರದೊಂದಿಗೆ ಘಟಕ ಸ್ಥಾಪನೆಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಮಾಡಿದೆ. ಒಪ್ಪಂದದ ಪ್ರಕಾರ, 5 ವರ್ಷಗಳ ಅವಧಿಯಲ್ಲಿ ಸುಮಾರು 9,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತದೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ ಸುಮಾರು 5,000 ಉದ್ಯೋಗಗಳು ಸೃಷ್ಟಿ ಆಗಲಿವೆ.
ಈ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಿದ ಬಳಿಕ, ಹೂಡಿಕೆ ಉತ್ತೇಜನ ಹಾಗೂ ಸೌಲಭ್ಯಕ್ಕಾಗಿ ತಮಿಳುನಾಡಿನ ನೋಡಲ್ ಏಜೆನ್ಸಿಯಾದ ಗೈಡೆನ್ಸ್, ಟಾಟಾ ಮೋಟಾರ್ಸ್ ಗ್ರೂಪ್ನ ತಂಡಗಳು ಈ ಒಪ್ಪಂದವನ್ನು ಮುಂದೆ ಕೊಂಡೊಯ್ಯಲು ಒಟ್ಟಾಗಿ ಕಾರ್ಯನಿರ್ವಹಿಸಲಿವೆ. ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ ಗೈಡೆನ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿ. ವಿಷ್ಣು, ಟಾಟಾ ಮೋಟಾರ್ಸ್ ಗ್ರೂಪ್ ಸಿಎಫ್ಒ ಪಿ. ಬಿ. ಬಾಲಾಜಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಮಾಡಿದರು.
ಇದನ್ನೂ ಓದಿ:ಐಟಿ ಇಲಾಖೆಯಿಂದ ₹ 6,329 ಕೋಟಿ ರಿಫಂಡ್ ನಿರೀಕ್ಷೆಯಲ್ಲಿ ಇನ್ಫೋಸಿಸ್ - Infosys