Gold Rate Today:ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.73,090 ಇತ್ತು. ಶನಿವಾರ ಇದು ರೂ.710 ಏರಿಕೆಯಾಗಿ ರೂ.73,800ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆ.ಜಿ.ಗೆ 92500 ರೂ.ಗಳಷ್ಟಿದ್ದ ಬೆಳ್ಳಿ ಬೆಲೆ ಶನಿವಾರ 750 ರೂ.ಗಳ ಏರಿಕೆ ಕಂಡು 93,250 ರೂ.ಗೆ ತಲುಪಿದೆ.
ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು:
- ಬೆಂಗಳೂರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,800 ರೂ. ಇದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. ಇದೆ.
- ಮೈಸೂರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93,250 ರೂ. ಇದೆ.
- ಬೆಳಗಾವಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93,250 ರೂ. ಇದೆ.
- ದಾವಣಗೆರೆಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. ಇದೆ.
- ಮಂಗಳೂರಲ್ಲಿ 10 ಗ್ರಾಂ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. ಇದೆ.
ಸ್ಪಾಟ್ ಚಿನ್ನದ ಬೆಲೆ?:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ 2361 ಡಾಲರ್ ಇತ್ತು, ಆದರೆ ಶನಿವಾರ 30 ಡಾಲರ್ ಏರಿಕೆಯಾಗಿ 2391 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.23 ಡಾಲರ್ ಆಗಿದೆ.