ಕರ್ನಾಟಕ

karnataka

ETV Bharat / business

ಟ್ರಂಪ್ ಭಯ, ಷೇರು ಮಾರುಕಟ್ಟೆ ದುರ್ಬಲ: ಸೆನ್ಸೆಕ್ಸ್​ 319 ಅಂಕ ಇಳಿಕೆ - STOCK MARKET FALL

ಸೋಮವಾರದಂದು ಭಾರತದ ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ಕೊನೆಗೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (IANS)

By ETV Bharat Karnataka Team

Published : Feb 3, 2025, 5:42 PM IST

ಮುಂಬೈ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ದೇಶದೊಂದಿಗಿನ ಕೆಲ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಸುಂಕ ವಿಧಿಸುವ ಆತಂಕದ ಮಧ್ಯೆ, ಏಷ್ಯಾದ ದುರ್ಬಲ ಮಾರುಕಟ್ಟೆಗಳ ಪ್ರವೃತ್ತಿಯಲ್ಲೇ ಸಾಗಿದ ಭಾರತದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ (ಫೆಬ್ರವರಿ 3) ಕುಸಿದವು.

30 ಷೇರುಗಳ ಬಿಎಸ್ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 319.22 ಪಾಯಿಂಟ್ ಅಥವಾ ಶೇಕಡಾ 0.41ರಷ್ಟು ಕುಸಿದು 77,186.74 ರೂ.ಗೆ ತಲುಪಿದೆ. ಎನ್ಎಸ್ಇ ನಿಫ್ಟಿ 121.10 ಪಾಯಿಂಟ್ಸ್ ಕುಸಿದು 23,361.05ಕ್ಕೆ ತಲುಪಿದೆ.

ವಲಯವಾರು ನೋಡುವುದಾದರೆ- 12 ಬ್ಯಾಂಕಿಂಗ್ ಷೇರುಗಳನ್ನು ಒಳಗೊಂಡ ಬ್ಯಾಂಕಿಂಗ್ ವಲಯವನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕ 296.40 ಪಾಯಿಂಟ್​ಗಳು ಅಥವಾ ಶೇಕಡಾ 0.60ರಷ್ಟು ಕುಸಿದು 49,210.66ರಲ್ಲಿ ಸ್ಥಿರವಾಯಿತು. ನಿಫ್ಟಿ ತೈಲ ಮತ್ತು ಅನಿಲ ಸೂಚ್ಯಂಕವು ಶೇಕಡಾ 2ಕ್ಕಿಂತ ಹೆಚ್ಚು ಕುಸಿದಿದೆ. ನಿಫ್ಟಿ ಮೆಟಲ್, ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಪಿಎಸ್​ಯು ಬ್ಯಾಂಕ್ ತಲಾ ಶೇಕಡಾ 1.50ಕ್ಕಿಂತ ಹೆಚ್ಚು ಕುಸಿದವು.

ಸೆನ್ಸೆಕ್ಸ್​ನಲ್ಲಿ ಅತಿ ಹೆಚ್ಚು ಲಾಭ, ನಷ್ಟಕ್ಕೀಡಾದ ಷೇರುಗಳು: 30 ಷೇರುಗಳ ಬ್ಲೂ-ಚಿಪ್ ಪ್ಯಾಕ್​ ಸೆನ್ಸೆಕ್ಸ್‌ನಲ್ಲಿ ಲಾರ್ಸೆನ್ & ಟೂಬ್ರೊ ಶೇಕಡಾ 4.50ಕ್ಕಿಂತ ಹೆಚ್ಚು ಕುಸಿದರೆ, ಟಾಟಾ ಮೋಟಾರ್ಸ್, ಎಚ್ ಯುಎಲ್ ಮತ್ತು ಏಷ್ಯನ್ ಪೇಂಟ್ಸ್ ತಲಾ ಶೇಕಡಾ 2ಕ್ಕಿಂತ ಹೆಚ್ಚು ಕುಸಿದವು. ಐಟಿಸಿ, ಪವರ್ ಗ್ರಿಡ್, ಎನ್​ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಹೋಟೆಲ್ಸ್, ಟಾಟಾ ಸ್ಟೀಲ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ನಷ್ಟ ಅನುಭವಿಸಿದ ಇತರ ಪ್ರಮುಖ ಷೇರುಗಳಾಗಿವೆ.

ಮತ್ತೊಂದೆಡೆ, ಬಜಾಜ್ ಫೈನಾನ್ಸ್ ಶೇಕಡಾ 5ರಷ್ಟು ಏರಿಕೆಯೊಂದಿಗೆ ಅತ್ಯಧಿಕ ಲಾಭದಲ್ಲಿದೆ. ಮಹೀಂದ್ರಾ ಅಂಡ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಏರ್ ಟೆಲ್, ಮಾರುತಿ, ಜೊಮಾಟೊ, ಟೈಟಾನ್ ಮತ್ತು ಇನ್ಫೋಸಿಸ್ ಇವು ಲಾಭ ಗಳಿಸಿದ ಇತರ ಪ್ರಮುಖ ಷೇರುಗಳಾಗಿವೆ.

ನಿಫ್ಟಿ 50ಯಲ್ಲಿ ಬಜಾಜ್ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಎಂ & ಎಂ, ವಿಪ್ರೋ, ಬಜಾಜ್ ಫಿನ್ ಸರ್ವ್, ಏರ್ ಟೆಲ್, ಮಾರುತಿ, ಐಷರ್ ಮೋಟಾರ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಇನ್ಫೋಸಿಸ್, ಟೈಟಾನ್, ಟೆಕ್ ಮಹೀಂದ್ರಾ ಮತ್ತು ಎಸ್ ಬಿಐ ಲೈಫ್ ಷೇರುಗಳು ಏರಿಕೆ ಕಂಡವು. ಎಲ್ ಅಂಡ್ ಟಿ, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಹೀರೋ ಮೋಟೊಕಾರ್ಪ್, ಕೋಲ್ ಇಂಡಿಯಾ, ಬಿಇಎಲ್, ಬಜಾಜ್ ಆಟೋ, ಟಾಟಾ ಮೋಟಾರ್ಸ್, ಏಷ್ಯಾ ಪೇಂಟ್ಸ್, ಒಎನ್ ಜಿಸಿ, ಎಚ್ ಯುಎಲ್, ಬಿಪಿಸಿಎಲ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಐಟಿಸಿ ಕುಸಿದವು.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರೇ: ಕೊನೆಗೂ ಬಂತು ಎಲ್ಲ ಸೇವೆಗಳಿಗೆ ಒಂದೇ ಆ್ಯಪ್; SwaRail ಡೌನ್‌ಲೋಡ್ ಮಾಡಿ - SWARAIL APP

For All Latest Updates

ABOUT THE AUTHOR

...view details