ಕರ್ನಾಟಕ

karnataka

ETV Bharat / business

ನಾಳೆ ಆರ್​ಬಿಐ ಸಭೆಯ ಮೇಲೆ ಚಿತ್ತ: ಅಲ್ಪ ಏರಿಕೆಯಾದ ಸೆನ್ಸೆಕ್ಸ್​, ನಿಫ್ಟಿ

ಬುಧವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಸಮತಟ್ಟಾಗಿ ಕೊನೆಗೊಂಡಿವೆ.

sensex-nifty-rise-marginally-as-focus-on-rbi-meeting
sensex-nifty-rise-marginally-as-focus-on-rbi-meeting

By ETV Bharat Karnataka Team

Published : Feb 7, 2024, 7:22 PM IST

ಮುಂಬೈ :ಫೆಬ್ರವರಿ 8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ಬಡ್ಡಿದರ ಬದಲಾವಣೆ ನಿರ್ಧಾರಕ್ಕೆ ಮುಂಚಿತವಾಗಿ ಭಾರತದ ಬೆಂಚ್​ಮಾರ್ಕ್ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಫೆಬ್ರವರಿ 7 ರಂದು ಅಸ್ಥಿರ ವಹಿವಾಟು ನಡೆಸಿ ಸಮತಟ್ಟಾಗಿ ಕೊನೆಗೊಂಡವು. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 34.09 ಪಾಯಿಂಟ್ ಅಥವಾ ಶೇಕಡಾ 0.05 ರಷ್ಟು ಕುಸಿದು 72,152 ರಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಇದು ಗರಿಷ್ಠ 72,559.21 ಮತ್ತು ಕನಿಷ್ಠ 71,938.22 ರಲ್ಲಿ ವಹಿವಾಟು ನಡೆಸಿತ್ತು. ನಿಫ್ಟಿ 1.10 ಪಾಯಿಂಟ್ ಅಥವಾ ಶೇಕಡಾ 0.01 ರಷ್ಟು ಏರಿಕೆ ಕಂಡು 21,930.50 ರಲ್ಲಿ ಕೊನೆಗೊಂಡಿದೆ.

ಎಸ್​ಬಿಐ ಕ್ಯಾಪ್ಸ್ ಅಂಗಸಂಸ್ಥೆಯನ್ನು 708.07 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಬ್ಯಾಂಕ್ ಘೋಷಿಸಿದ ನಂತರ ಸೆನ್ಸೆಕ್ಸ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 3.78 ರಷ್ಟು ಏರಿಕೆಯಾಗಿದೆ. ನೆಸ್ಲೆ ಇಂಡಿಯಾ ಶೇಕಡಾ 1.68ರಷ್ಟು ಏರಿಕೆ ಕಂಡಿದ್ದು, ಶೇಕಡಾ 9ರಷ್ಟು ಬೆಳವಣಿಗೆ ದಾಖಲಿಸಿದೆ. ಜೆಎಸ್​ಡಬ್ಲ್ಯೂ ಸ್ಟೀಲ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಲಾಭ ಗಳಿಸಿದವು.

ಟೆಕ್ ಮಹೀಂದ್ರಾ, ಪವರ್ ಗ್ರಿಡ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್​ಡಿಎಫ್​ಸಿ ಬ್ಯಾಂಕ್, ವಿಪ್ರೋ, ಲಾರ್ಸನ್ ಅಂಡ್ ಟೂಬ್ರೊ ಮತ್ತು ಎನ್​ಟಿಪಿಸಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮಂಗಳವಾರ 92.52 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ. ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕ್ರೂಡ್ ತೈಲ ಬೆಲೆ ಶೇಕಡಾ 0.66 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 79.11 ಡಾಲರ್​ಗೆ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್ ಮತ್ತು ಶಾಂಘೈ ಏರಿಕೆಯಲ್ಲಿ ವಹಿವಾಟು ನಡೆಸಿದರೆ, ಟೋಕಿಯೊ ಮತ್ತು ಹಾಂಗ್ ಕಾಂಗ್ ಇಳಿಕೆಯೊಂದಿಗೆ ಕೊನೆಗೊಂಡವು. ಯುರೋಪಿಯನ್ ಮಾರುಕಟ್ಟೆಗಳು ಬಹುತೇಕ ಇಳಿಕೆಯಲ್ಲಿವೆ. ಯುಎಸ್ ಮಾರುಕಟ್ಟೆಗಳು ಫೆಬ್ರವರಿ 6 ರಂದು ಲಾಭದೊಂದಿಗೆ ಕೊನೆಗೊಂಡವು.

ಎರಡು ದೊಡ್ಡ ವಿದೇಶಿ ಬ್ಯಾಂಕುಗಳಿಂದ ಡಾಲರ್ ಮಾರಾಟದ ಹಿನ್ನೆಲೆಯಲ್ಲಿ ಭಾರತೀಯ ರೂಪಾಯಿ ಬುಧವಾರ ಲಾಭ ಗಳಿಸಿತು. ಯುಎಸ್ ಡಾಲರ್ ಎದುರು ರೂಪಾಯಿ 82.9675 ರಲ್ಲಿ ಕೊನೆಗೊಂಡಿತು. ಹಿಂದಿನ ವಹಿವಾಟಿನಲ್ಲಿ ಇದ್ದ 83.0550ಕ್ಕೆ ಹೋಲಿಸಿದರೆ ಇದು ಶೇ 0.11 ಹೆಚ್ಚಾಗಿದೆ.

ಇದನ್ನೂ ಓದಿ: ಆರ್​ಬಿಐ ಎಂಪಿಸಿ ಸಭೆ ಫೆ.8ಕ್ಕೆ: ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ

ABOUT THE AUTHOR

...view details