ಕರ್ನಾಟಕ

karnataka

ETV Bharat / business

ಸೆನ್ಸೆಕ್ಸ್ 58 & ನಿಫ್ಟಿ 19 ಅಂಕ ಕುಸಿತ: ದಾಖಲೆಯ ಕನಿಷ್ಠ ಮಟ್ಟಕ್ಕಿಳಿದ ರೂಪಾಯಿ - STOCK MARKET

ಬುಧವಾರದ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಅಲ್ಪ ಕುಸಿತ ಕಂಡಿದೆ.

ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್ (ians)

By ETV Bharat Karnataka Team

Published : Jan 8, 2025, 5:14 PM IST

ಮುಂಬೈ: ಬಿಎಸ್ಇ ಸೆನ್ಸೆಕ್ಸ್ ಬುಧವಾರ 58 ಅಂಕ ಅಥವಾ ಶೇ 7ರಷ್ಟು ಕುಸಿದು 78,141.06 ರಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್​ ಬುಧವಾರ 77,486.79 - 78,319.45 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಎನ್ಎಸ್ಇ ನಿಫ್ಟಿ50 19 ಅಂಕ ಅಥವಾ ಶೇ 0.08 ರಷ್ಟು ಕುಸಿದು 23,688.95 ರಲ್ಲಿ ಕೊನೆಗೊಂಡಿತು.

ನಿಫ್ಟಿಯಲ್ಲಿ ಅಪೊಲೊ ಆಸ್ಪತ್ರೆ, ಟ್ರೆಂಟ್, ಶ್ರೀರಾಮ್ ಫೈನಾನ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಕಂಡವು. ನಿಫ್ಟಿಯ 50 ಷೇರುಗಳ ಪೈಕಿ 28 ನಷ್ಟದಲ್ಲಿ ಕೊನೆಗೊಂಡವು. ಒಎನ್​ಜಿಸಿ, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಮತ್ತು ಏಷ್ಯನ್ ಪೇಂಟ್ಸ್ ಸೇರಿದಂತೆ 22 ಷೇರುಗಳು ಶೇಕಡಾ 3 ರಷ್ಟು ಲಾಭದೊಂದಿಗೆ ಏರಿಕೆಯೊಂದಿಗೆ ಕೊನೆಗೊಂಡವು.

ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 1.05 ರಷ್ಟು ಕುಸಿದು 56,270.60 ರಲ್ಲಿ ಕೊನೆಗೊಂಡರೆ, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 1.65 ರಷ್ಟು ನಷ್ಟದೊಂದಿಗೆ 18,365.65 ರಲ್ಲಿ ಕೊನೆಗೊಂಡಿತು.

ವಲಯ ಸೂಚ್ಯಂಕಗಳು ವಿಭಿನ್ನ ಪ್ರವೃತ್ತಿಗಳನ್ನು ಪ್ರತಿಬಿಂಬಿಸಿದವು. ನಿಫ್ಟಿ ಕನ್ಸ್ಯೂಮರ್ ಡ್ಯೂರೇಬಲ್ಸ್ ಸೂಚ್ಯಂಕ ಶೇಕಡಾ 2.16 ರಷ್ಟು ಕುಸಿಯಿತು. ನಿಫ್ಟಿ ಹೆಲ್ತ್ ಕೇರ್ ಸೂಚ್ಯಂಕ ಶೇಕಡಾ 1.09 ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇಕಡಾ 0.94 ರಷ್ಟು ಕುಸಿದಿವೆ. ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಶೇಕಡಾ 0.83 ರಷ್ಟು ಮತ್ತು ನಿಫ್ಟಿ ಪಿಎಸ್​ಯು ಬ್ಯಾಂಕ್ ಶೇಕಡಾ 0.79 ರಷ್ಟು ಕುಸಿದಿದೆ.

ಸಕಾರಾತ್ಮಕ ಅಂಶಗಳನ್ನು ನೋಡುವುದಾದರೆ- ನಿಫ್ಟಿ ಐಟಿ ಶೇಕಡಾ 0.60 ರಷ್ಟು ಏರಿಕೆಯೊಂದಿಗೆ ಅಗ್ರ ಲಾಭ ಗಳಿಸಿದೆ. ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ ಶೇಕಡಾ 0.44 ರಷ್ಟು ಏರಿಕೆಯಾಗಿ ಹಸಿರು ಬಣ್ಣದಲ್ಲಿ ಕೊನೆಗೊಂಡಿತು.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಬಲವಾದ ಅಮೆರಿಕನ್ ಕರೆನ್ಸಿಯ ಮಧ್ಯೆ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ 13 ಪೈಸೆ ಕುಸಿದು ದಾಖಲೆಯ ಕನಿಷ್ಠ ಮಟ್ಟವಾದ 85.87 ಕ್ಕೆ (ತಾತ್ಕಾಲಿಕ) ತಲುಪಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 85.82 ರಲ್ಲಿ ಪ್ರಾರಂಭವಾಯಿತು ಮತ್ತು ಇಂಟ್ರಾ-ಡೇನಲ್ಲಿ ಡಾಲರ್ ವಿರುದ್ಧ 85.89 ರ ಕನಿಷ್ಠ ಮಟ್ಟವನ್ನು ಮುಟ್ಟಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ 85.87 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 13 ಪೈಸೆ ಕಡಿಮೆಯಾಗಿದೆ.

ಇದನ್ನೂ ಓದಿ :ಗೃಹಬಳಕೆ ಎಲ್​ಪಿಜಿ ಸಂಪರ್ಕಗಳ ಸಂಖ್ಯೆ ದಶಕದಲ್ಲಿ ದ್ವಿಗುಣ: 14 ರಿಂದ 32 ಕೋಟಿಗೆ ಏರಿಕೆ - LPG CONNECTIONS

For All Latest Updates

ABOUT THE AUTHOR

...view details