ಮುಂಬೈ: ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಬುಧವಾರದ ವಹಿವಾಟಿನಲ್ಲಿ ನಷ್ಟದೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 312.53 ಪಾಯಿಂಟ್ಸ್ ಅಥವಾ ಶೇಕಡಾ 0.40 ರಷ್ಟು ಕುಸಿದು 78,271.28 ರಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 78,735.41-78,226.26 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.
ಎನ್ಎಸ್ಇ ನಿಫ್ಟಿ 42.95 ಪಾಯಿಂಟ್ಸ್ ಅಥವಾ ಶೇಕಡಾ 0.18 ರಷ್ಟು ಕುಸಿದು 23,696.30 ಕ್ಕೆ ತಲುಪಿದೆ. ನಿಫ್ಟಿ 50 ಒಂದು ದಿನದ ವಹಿವಾಟಿನಲ್ಲಿ ಗರಿಷ್ಠ 23,807.30 ಹಾಗೂ ಕನಿಷ್ಠ 23,680.45 ರ ನಡುವೆ ವಹಿವಾಟು ನಡೆಸಿತು.
ಯಾರಿಗೆ ಲಾಭ, ನಷ್ಟ?: ನಿಫ್ಟಿ ಫಿಫ್ಟಿಯ 50 ಷೇರುಗಳ ಪೈಕಿ 25 ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿಯಲ್ಲಿ ಏಷಿಯನ್ ಪೇಂಟ್ಸ್, ಟೈಟಾನ್ ಕಂಪನಿ, ನೆಸ್ಲೆ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಟಾಟಾ ಕನ್ಸೂಮರ್ ಷೇರುಗಳು ಶೇಕಡಾ 3.40 ರಷ್ಟು ನಷ್ಟ ಕಂಡವು. ಒಎನ್ಜಿಸಿ, ಹಿಂಡಾಲ್ಕೊ, ಅಪೊಲೊ ಹಾಸ್ಪಿಟಲ್ಸ್ ಮತ್ತು ಬಿಪಿಸಿಎಲ್ ಷೇರುಗಳು ಶೇಕಡಾ 2.90 ರಷ್ಟು ಲಾಭದೊಂದಿಗೆ ಕೊನೆಗೊಂಡವು.
ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 1.85 ರಷ್ಟು ಹಾಗೂ ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ಶೇ 0.68 ರಷ್ಟು ಲಾಭದೊಂದಿಗೆ ಕೊನೆಗೊಂಡಿವೆ.