ಕರ್ನಾಟಕ

karnataka

ETV Bharat / business

ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ: ನೀವು ಬಯಸಿದಾಗಲೆಲ್ಲಾ ಹಣ ಹಿಂಪಡೆಯಲು ಅವಕಾಶ!, ಲಾಭ ಏನು ಅಂತೀರಾ? - SBI Special FD Scheme - SBI SPECIAL FD SCHEME

SBI MOD Scheme: ನೀವು ಸ್ಥಿರ ಠೇವಣಿ ಮಾಡಲು ಬಯಸುವಿರಾ? ಆದರೆ ಇದು ನಿಮಗಾಗಿ SBI 'ಮಲ್ಟಿ-ಆಯ್ಕೆ ಠೇವಣಿ ಖಾತೆ' ಒದಗಿಸುತ್ತದೆ. ಇತರ ಸ್ಥಿರ ಠೇವಣಿಗಳಿಗಿಂತ ಭಿನ್ನವಾಗಿ, ಈ ಎಫ್‌ಡಿ ಠೇವಣಿದಾರರು ತಾವು ಬಯಸಿದಾಗ ಹಣವನ್ನು ಹಿಂಪಡೆಯಬಹುದು. ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಈ ಕುರಿತು ಸಂಪೂರ್ಣ ವರದಿ ಓದಿ.

SBI MOD Scheme  SBI MOD Account  SBI MOD Scheme Eligibility  SBI MOD Scheme Interest Rate
ಸಂಗ್ರಹ ಚಿತ್ರ (Etv Bharat)

By ETV Bharat Karnataka Team

Published : May 4, 2024, 10:11 AM IST

ಬೆಂಗಳೂರು: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ SBI, 'ಮಲ್ಟಿ- ಆಯ್ಕೆಯ ಠೇವಣಿ ಖಾತೆ' (SBI MOD) ಎಂಬ ವಿಶಿಷ್ಟ ಠೇವಣಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದು ವಾಸ್ತವವಾಗಿ ನಿಶ್ಚಿತ ಠೇವಣಿ ಯೋಜನೆಯಾಗಿದೆ. ಆದಾಗ್ಯೂ, ಇತರ ಎಫ್‌ಡಿಗಳಿಗಿಂತ ಭಿನ್ನವಾಗಿ, ಇದರಲ್ಲಿ ಉಳಿಸಿದ ಹಣವನ್ನು ನೀವು ಯಾವಾಗ ಬೇಕಾದರೂ ನಿಮ್ಮ ಇಚ್ಛೆಯಂತೆ ಹಿಂಪಡೆದು ಕೊಳ್ಳಬಹುದು.

ನೀವು ನಿಯಮಿತ ಸ್ಥಿರ ಠೇವಣಿ ಯೋಜನೆಗಳಲ್ಲಿ ನಿಮ್ಮ ಹಣವನ್ನು ಇಟ್ಟರೆ, ನಿರ್ದಿಷ್ಟ ಅವಧಿವರೆಗೂ ನೀವು ಡಿಪಾಸಿಟ್​ ಇಟ್ಟಿರುವ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ನೀವು ಬಯಸಿದಾಗ ಈ ಎಸ್‌ಬಿಐ ಮಲ್ಟಿ- ಆಯ್ಕೆ ಠೇವಣಿ ಖಾತೆಯಲ್ಲಿ ಉಳಿಸಿದ ಮೊತ್ತವನ್ನು ನೀವು ಭಾಗಶಃ ಹಿಂಪಡೆಯಬಹುದು. ಇದಲ್ಲದೇ, ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ದಂಡವನ್ನು ಕೂಡಾ ಪಾವತಿಸುವ ಅಗತ್ಯವಿಲ್ಲ.

ನೀವು SBI MOD ಖಾತೆಯಿಂದ 1,000 ರೂ. ಅಥವಾ 2,000 ರೂ. ಅಥವಾ 3,000 ರೂ. ಹಿಂಪಡೆಯಬಹುದು ಖಾತೆಯಲ್ಲಿ ಉಳಿದ ಮೊತ್ತವು ಪೂರ್ವನಿರ್ಧರಿತವಾಗಿರುವಂತೆ ನಿಮ್ಮ ಉಳಿದ ಹಣಕ್ಕೆ ಬಡ್ಡಿಯನ್ನು ನೀಡಲಾಗುತ್ತದೆ.

SBI MOD ಖಾತೆಯನ್ನು ತೆರೆಯುವುದು ಹೇಗೆ?:ನೀವು ನೇರವಾಗಿ SBI ಶಾಖೆಗೆ ಹೋಗಿ SBI MOD ಖಾತೆಯನ್ನು ತೆರೆಯಬಹುದು. ಅಥವಾ ನೀವು SBI ಪೋರ್ಟಲ್ ಮೂಲಕ ಈ FD ಅನ್ನು ಆನ್‌ಲೈನ್‌ನಲ್ಲಿ ತೆರೆಯಬಹುದು. ಹಾಗಾಗಿ ತುರ್ತಾಗಿ ಹಣ ತೆಗೆಯಬೇಕೆಂದಿದ್ದರೆ ನೇರವಾಗಿ ಎಟಿಎಂಗೆ ಹೋಗಿ ಹಣ ತೆಗೆಯಬಹುದು. ಅಥವಾ ಚೆಕ್ ರೂಪದಲ್ಲಿಯೂ ಹಣ ಹಿಂಪಡೆಯಬಹುದು.

SBI MOD ಯೋಜನೆಯ ಬಡ್ಡಿ ದರ:SBI MOD ಯೋಜನೆಯಲ್ಲಿ, ಸಾಮಾನ್ಯ ಗ್ರಾಹಕರು ಶೇ 7ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಹಿರಿಯ ನಾಗರಿಕರಿಗೆ ಶೇಕಡಾ 0.5ರಷ್ಟು ಹೆಚ್ಚುವರಿ ಅಂದರೆ ಶೇ 7.5ರಷ್ಟು ಬಡ್ಡಿ ಸಿಗಲಿದೆ.

SBI MOD ಯೋಜನೆಗೆ ಏನು ಅರ್ಹತೆ ಇರಬೇಕು:ಎಲ್ಲ ಭಾರತೀಯ ನಾಗರಿಕರು ಈ SBI ಮಲ್ಟಿ -ಆಯ್ಕೆ ಠೇವಣಿ ಖಾತೆಯನ್ನು ತೆರೆಯಬಹುದು. ಇದರರ್ಥ ಭಾರತದಲ್ಲಿ ನೆಲೆಸಿರುವವರಲ್ಲದೇ, ಅನಿವಾಸಿ ಭಾರತೀಯರೂ ಈ ಎಫ್‌ಡಿ ಯೋಜನೆಗೆ ಸೇರಬಹುದು. ಅಲ್ಲದೇ, ಹಿಂದೂ ಅವಿಭಜಿತ ಕುಟುಂಬಗಳು (HUF), ಕಂಪನಿಗಳು ಮತ್ತು ಅರ್ಹರಾಗಿರುವ ಇತರರು ಸಹ ಈ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ:ಸಾಲ ಮಾಡಿ ಮನೆ ಖರೀದಿಸುತ್ತಿದ್ದೀರಾ?; ಈ ವಿಷಯಗಳನ್ನು ತಿಳಿದುಕೊಳ್ಳಲು ಯಾವುದೇ ಕಾರಣಕ್ಕೂ ಮರೆಯಬೇಡಿ! - HOME LOAN TIPS

ABOUT THE AUTHOR

...view details