ಕರ್ನಾಟಕ

karnataka

ETV Bharat / business

RBI ಗವರ್ನರ್ ಆಗಿ ಸಂಜಯ ಮಲ್ಹೋತ್ರಾ ಅಧಿಕಾರ ಸ್ವೀಕಾರ: ಇಂದು ಮಧ್ಯಾಹ್ನ ಮಾಧ್ಯಮಗೋಷ್ಠಿ - RBI GOVERNOR

ಆರ್​ಬಿಐ ಗವರ್ನರ್ ಆಗಿ ಸಂಜಯ್​ ಮಲ್ಹೋತ್ರಾ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಬಗ್ಗೆ ಇಂದು ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಆರ್​ಬಿಐ ಗವರ್ನರ್ ಆಗಿ ಸಂಜಯ ಮಲ್ಹೋತ್ರಾ ಅಧಿಕಾರ ಸ್ವೀಕಾರ
ಆರ್​ಬಿಐ ಗವರ್ನರ್ ಆಗಿ ಸಂಜಯ ಮಲ್ಹೋತ್ರಾ ಅಧಿಕಾರ ಸ್ವೀಕಾರ (x.com/RBI)

By PTI

Published : Dec 11, 2024, 1:39 PM IST

ಮುಂಬೈ, ಮಹಾರಾಷ್ಟ್ರ:ಭಾರತೀಯ ರಿಸರ್ವ್ ಬ್ಯಾಂಕ್​​​ನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಬುಧವಾರ ಅಧಿಕಾರ ಸ್ವೀಕರಿಸಿದರು. ಇಂದು ಬೆಳಗ್ಗೆ ಆರ್​ಬಿಐನ ಪ್ರಧಾನ ಕಚೇರಿಗೆ ಆಗಮಿಸಿದ ಮಲ್ಹೋತ್ರಾ ಅವರನ್ನು ಕಚೇರಿಯ ಹಿರಿಯ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು.

ಮಲ್ಹೋತ್ರಾ ಅವರ ನೇಮಕಾತಿಯ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಆರ್​ಬಿಐ ಮಾಹಿತಿ ನೀಡಿದ್ದು, ಕೆಲ ಪೋಟೊಗಳನ್ನು ಕೂಡ ಶೇರ್ ಮಾಡಿದೆ. "ಸಂಜಯ್ ಮಲ್ಹೋತ್ರಾ ಅವರು 2024ರ ಡಿಸೆಂಬರ್ 11 ರಿಂದ ಮುಂದಿನ 3 ವರ್ಷಗಳವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 26 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು" ಎಂದು ಆರ್​ಬಿಐ ಪೋಸ್ಟ್ ಮಾಡಿದೆ.

ಇತ್ತೀಚಿನವರೆಗೆ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಲ್ಹೋತ್ರಾ, ಆರ್​ಬಿಐನ ಗವರ್ನರ್​ ಆಗಿ ಅಧಿಕಾರ ಸ್ವೀಕರಿಸಲು ಇಂದು ಅಗತ್ಯ ದಾಖಲೆಗಳಿಗೆ ಸಹಿ ಹಾಕಿದರು. ಉಪ ಗವರ್ನರ್​ಗಳಾದ ಸ್ವಾಮಿನಾಥನ್ ಜೆ, ಎಂ ರಾಜೇಶ್ವರ್ ರಾವ್ ಮತ್ತು ಟಿ ರಬಿ ಶಂಕರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಯಾರಿವರು ಮಲ್ಹೋತ್ರಾ?:ಮಲ್ಹೋತ್ರಾ ರಾಜಸ್ಥಾನ ಕೇಡರ್​ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಕಾನ್ಪುರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಮತ್ತು ಯುನೈಟೆಡ್ ಸ್ಟೇಟ್ಸ್​ನ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಂದಾಯ ಕಾರ್ಯದರ್ಶಿಯಾಗಿ ಸೇವೆ:ತಮ್ಮ33 ವರ್ಷಗಳ ವೃತ್ತಿ ಜೀವನದಲ್ಲಿ ಮಲ್ಹೋತ್ರಾ ಹಣಕಾಸು, ಐಟಿ, ವಿದ್ಯುತ್, ಹಣಕಾಸು, ಗಣಿ ಮತ್ತು ತೆರಿಗೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆರ್​ಬಿಐ ಗವರ್ನರ್ ಆಗುವ ಮುನ್ನ ಅವರು ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಹಣಕಾಸು ಮತ್ತು ತೆರಿಗೆಯಲ್ಲಿ ಆಳವಾದ ಅನುಭವವನ್ನು ಹೊಂದಿದ್ದಾರೆ. ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಭಾರತದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಎಲ್ಲಾ ಹಣಕಾಸು ಚಟುವಟಿಕೆಗಳ ಸುಗಮ ಕಾರ್ಯಾಚರಣೆ ಜವಾಬ್ದಾರಿಯನ್ನು ಹೊಂದಿದೆ. ಅದು ಬ್ಯಾಂಕ್ ನಿರ್ವಹಣೆ, ಇತರ ಹಣಕಾಸು ಸಂಸ್ಥೆಗಳ ನಿಯಂತ್ರಣ, ರೆಪೊ ದರ ಅಥವಾ ಮೀಸಲು ಅನುಪಾತ ಮುಂತಾದ ವಿಷಯಗಳನ್ನು ಒಳಗೊಂಡಿದೆ. ಆರ್​ಬಿಐ ನೇರವಾಗಿ ಕೇಂದ್ರ ಸರ್ಕಾರದ ನೇತೃತ್ವದ ಹಣಕಾಸು ಸಚಿವಾಲಯದ ಅಡಿ ಬರುತ್ತದೆ ಮತ್ತು ಗವರ್ನರ್ ಇದರ ಮುಖ್ಯಸ್ಥರಾಗಿರುತ್ತಾರೆ.

ಇದನ್ನೂ ಓದಿ : 138 ಕೋಟಿ ದಾಟಿದ ಆಧಾರ್ ಸಂಖ್ಯೆ, ಡಿಜಿಲಾಕರ್​ನಲ್ಲಿ 776 ಕೋಟಿ ದಾಖಲೆ ಸಂಗ್ರಹ: ಕೇಂದ್ರದ ಮಾಹಿತಿ

For All Latest Updates

ABOUT THE AUTHOR

...view details