ಕರ್ನಾಟಕ

karnataka

ETV Bharat / business

ಜನವರಿ 1ರಿಂದ ಏನೆಲ್ಲ ಬದಲಾವಣೆ?: ಯಾವೆಲ್ಲ ರೂಲ್ಸ್​ ಚೇಂಜ್​​, ಇದಕ್ಕೆಲ್ಲ ಈಗಲೇ ಸಿದ್ಧರಾಗಿ! - GST CHANGES FROM JANUARY 2025

ಹೊಸ ವರ್ಷದಲ್ಲಿ LPG ಯಿಂದ ಹಿಡಿದು ವೀಸಾ ನಿಯಮಗಳವರೆಗೆ ಏನೆಲ್ಲ ಬದಲಾವಣೆ - ಇಲ್ಲಿದೆ ಅವೆಲ್ಲವುಗಳ ಫುಲ್ ಡೀಟೇಲ್ಸ್​.

pension-fixed-deposit-gst-visa-fees-mobile-data-charges- -financial-changes-from-january
ಜನವರಿ 1ರಿಂದ ಏನೆಲ್ಲ ಬದಲಾವಣೆ?: ಯಾವೆಲ್ಲ ರೂಲ್ಸ್​ ಚೇಂಜ್​​, ಇದಕ್ಕೆಲ್ಲ ಈಗಲೇ ಸಿದ್ಧರಾಗಿ! (ETV Bharat)

By ETV Bharat Karnataka Team

Published : Dec 28, 2024, 11:21 AM IST

ಹೈದರಾಬಾದ್: 2024ನೇ ವರ್ಷಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಇನ್ನೊಂದೆರಡು ದಿನಗಳಲ್ಲಿ 2024 ಕಳೆದು 2025ರ ಆಗಮನವಾಗಲಿದೆ. ಹೊಸ ವರ್ಷದ ಜನವರಿ 1ರಿಂದ ದೇಶಾದ್ಯಂತ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. GST 2025 ಜನವರಿ 1 ರಿಂದ ಕಠಿಣ GST ನಿಯಮಗಳ ಅಡಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (MFA): GST ಪೋರ್ಟಲ್‌ಗಳಲ್ಲಿ ಭದ್ರತೆ ಹೆಚ್ಚಿಸುವ ಸಲುವಾಗಿ ಎಲ್ಲಾ ತೆರಿಗೆದಾರರಿಗೆ ಬಹು ಅಂಶದ ದೃಢೀಕರಣ ವ್ಯವಸ್ಥೆ ಕಡ್ಡಾಯ ಮಾಡಲಾಗುತ್ತದೆ.

ಇ-ವೇ ಬಿಲ್ ನಿರ್ಬಂಧಗಳು: ಇ-ವೇ ಬಿಲ್‌ಗಳನ್ನು ಈಗ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳ ಮೇಲೆ ಮಾತ್ರ ರಚಿಸಲಾಗುತ್ತದೆ. ವಂಚನೆಗಳನ್ನು ಕಡಿಮೆ ಮಾಡಲು ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ.

ಥಾಯ್ಲೆಂಡ್​ ವೀಸಾ :ವಿಶ್ವದ ಯಾವುದೇ ದೇಶದ ಸಂದರ್ಶಕರು ಅಧಿಕೃತ ವೆಬ್‌ಸೈಟ್ www.thaievisa.go.th ಮೂಲಕ ಥಾಯ್ಲೆಂಡ್​ ಇ - ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ, ಇ - ವೀಸಾ ವ್ಯವಸ್ಥೆಯು ಕೆಲವು ಪ್ರದೇಶಗಳ ಪ್ರಯಾಣಿಕರಿಗೆ ಮಾತ್ರವೇ ಲಭ್ಯವಿತ್ತು. ಈಗ ಇತರ ಪ್ರಜೆಗಳು ಸೇರಿದಂತೆ ಭಾರತೀಯರು ಎಲ್ಲಿಂದಲಾದರೂ ಆನ್‌ಲೈನ್‌ನಲ್ಲಿ ಇ - ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಪ್ರವಾಸಿಗರು ಈಗ ಸುಲಭವಾಗಿ ಥಾಯ್ಲೆಂಡ್​​ಗೆ ಪ್ರಯಾಣ ಬೆಳೆಸಬಹುದು.

ಅಮೆರಿಕದ ವೀಸಾ ನಿಯಮಗಳಲ್ಲಿ ಬದಲಾವಣೆ: ಜನವರಿ 1, 2025 ರಿಂದ ಅಮೆರಿಕದ ವೀಸಾ ನಿಯಮಗಳಲ್ಲಿ ಬದಲಾಣೆಗಳು ಜಾರಿಗೆ ಬರುತ್ತವೆ. ವಲಸೆ - ಅಲ್ಲದ ವೀಸಾ ಅರ್ಜಿದಾರರು ತಮ್ಮ US ವೀಸಾ ನೇಮಕಾತಿಗಳನ್ನು ಹೆಚ್ಚುವರಿ ಶುಲ್ಕವಿಲ್ಲದೇ ಒಮ್ಮೆ ಮರು ಹೊಂದಿಸಿಕೊಳ್ಳಬಹುದು. ಹೆಚ್ಚುವರಿ ಮರು ಹೊಂದಿಕೆಗಳಿಗಾಗಿ ಅರ್ಜಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

H-1B ವೀಸಾ: ಈ ವೀಸಾದ ಕೂಲಂಕಷ ಪರೀಕ್ಷೆಯು ಜನವರಿ 17 2025 ರಿಂದ ಜಾರಿಗೆ ಬರಲಿದೆ. ಇದು H-1B ವೀಸಾವನ್ನು ನವೀಕರಿಸುವ ಕೆಲಸವನ್ನು ಸುಲಭಗೊಳಿಸುತ್ತದೆ. ಆದರೆ, ಇಲ್ಲಿ ಒಂದು ವಿಷಯ ನೆನಪಿಡಬೇಕು, ಭಾರತದಲ್ಲಿ ವೀಸಾ ನೇಮಕಾತಿಗಾಗಿ ಕಾಯುವ ಸಮಯವು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ B1/B2 ವೀಸಾಗಳು ಸರಾಸರಿ 400 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಟೆಲಿಕಾಂ ಹೊಸ ನಿಯಮಗಳು: ದೂರಸಂಪರ್ಕ ಇಲಾಖೆ (ರೈಟ್ ಆಫ್ ವೇ) ನಿಯಮಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಭೂಗತ ಸಂವಹನ ಮೂಲಸೌಕರ್ಯಗಳ ಸ್ಥಾಪನೆ ಮತ್ತು ನಿರ್ವಹಣೆ ಇನ್ಮುಂದೆ ಸುಲಭವಾಗಲಿದೆ. ಹೀಗಾಗಿ ಜಿಯೋ, ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್‌ನಂತಹ ಟೆಲಿಕಾಂ ಕಂಪನಿಗಳ ಸೇವೆಗಳಲ್ಲಿ ಭಾರಿ ಸುಧಾರಣೆ ಕಾಣುವ ಸಾಧ್ಯತೆಗಳಿವೆ.

ಜನವರಿ 1, 2025 ರಿಂದ ಈ ಫೋನ್‌ಗಳಲ್ಲಿ WhatsApp ನಿಷೇಧ: ಹಲವು ಹಳೆಯ Android ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ. Samsung Galaxy S3, Galaxy S3, Galaxy S4 Mini, HTC One X, One X Plus, Sony Xperia Z, Xperia T, LG Optimus G, Nexus 4, Moto G, Moto E 2014 ನಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ.

LPG ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆ: ತೈಲ ಕಂಪನಿಗಳು LPG ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ 1 ರಂದು ಮರು ಪರಿಶೀಲನೆಗೆ ಒಳಪಡಿಸುತ್ತವೆ ಎಂಬುದು ತಿಳಿದೇ ಇದೆ. ಕಳೆದ ಐದು ತಿಂಗಳಿಂದ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದೆ. ಆದರೆ, 14.2 ಕೆಜಿಯ ಮನೆ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಾರಿ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಕಾರುಗಳ ಬೆಲೆಗಳಲ್ಲಿ ಹೆಚ್ಚಳ: ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಹ್ಯುಂಡೈ, ಮಹೀಂದ್ರಾ, ಹೋಂಡಾ, ಕಿಯಾ ಇತ್ಯಾದಿ ಕಂಪನಿಗಳ ಕಾರುಗಳ ಬೆಲೆ ಶೇ.2-4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಎಫ್‌ಡಿ ನಿಯಮಗಳು: ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 1, 2025 ರಿಂದ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮತ್ತು ಹೌಸಿಂಗ್​ ಫೈನಾನ್ಸ್​​ ಕಂಪನಿಗಳ ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ನೀತಿಗಳನ್ನು ಬದಲಾಯಿಸಿದೆ.

UPI 123 Pay: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ವರ್ಷಗಳ ಹಿಂದೆ 'UPI 123 Pay' ಅನ್ನು ಪರಿಚಯಿಸಿತ್ತು. ಇದರ ವಹಿವಾಟಿನ ಮಿತಿಯನ್ನು 5,000 ರೂ. ದಿಂದ 10,000 ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಜನವರಿ 1 ರಿಂದ ಜಾರಿಗೆ ಬರಲಿದೆ. 'ಯುಪಿಐ 123 ಪೇ' ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೇ ಫೀಚರ್ ಫೋನ್‌ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ.

ಇದನ್ನು ಓದಿ:ಬೆಳ್ಳಂಬೆಳಗ್ಗೆ ಭಾರಿ ಮಳೆ; ಮುಂದುವರಿದ ಕಳಪೆ ವಾತಾವರಣ, ಮರಗಳು ನೆಲಕ್ಕುರುಳಿ ಭಾರಿ ಟ್ರಾಫಿಕ್​ ಜಾಮ್​

ABOUT THE AUTHOR

...view details