ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮೇಲೆ ಆರ್ಬಿಐ ವಿಧಿಸಿರುವ ನಿರ್ಬಂಧ ಇಂದಿನಿಂದ ಜಾರಿಗೆ ಬರಲಿದೆ. ಇದರೊಂದಿಗೆ ಇಂದಿನಿಂದ ಈ ಬ್ಯಾಂಕ್ನ ವಹಿವಾಟು ಸಂಪೂರ್ಣ ನಿಷೇಧಿಸಲಾಗುವುದು. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಪ್ರಮುಖ ಬದಲಾವಣೆಗಳು ಮಾರ್ಚ್ 15ರಿಂದ ಜಾರಿಯಾಗಲಿದೆ. ಈ ಕುರಿತು ಗ್ರಾಹಕರು, ಬಳಕೆದಾರರು ಅರಿಯುವುದು ಅವಶ್ಯವಾಗಿದೆ.
ಮೊದಲಿಗೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಸದ್ಯ ಖಾತೆ ಹೊಂದಿರುವವರು ಇನ್ಮುಂದೆ ತಮ್ಮ ಖಾತೆಗೆ ಯಾವುದೇ ಠೇವಣಿ ಮಾಡಲು ಸಾಧ್ಯವಿಲ್ಲ.
ಸೆಂಟ್ರಲ್ ಬ್ಯಾಂಕ್ ಅನುಸಾರ ಬಡ್ಡಿ ಹೊರತಾಗಿ ಯಾವುದೇ ಸಾಲಗಳು ಅಥವಾ ಠೇವಣಿ ಮಾಡಲು ಸಾಧ್ಯವಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಕ್ಯಾಶ್ಬಾಕ್ಸ್, ಪಾಲುದಾರ ಬ್ಯಾಂಕ್ ನಿಂದ ಹಣ ಪಡೆಯಲು ಅಥವಾ ಮರು ಪಾವತಿಸಲು ಸಾಧ್ಯವಿಲ್ಲ.
ಆದಾಗ್ಯೂ, ಪೇಟಿಎಂ ಖಾತೆಯಲ್ಲಿರುವ ಹಣ ಬಳಕೆ, ಹಿಂಪಡೆಯಲು ಅಥವಾ ವರ್ಗಾವಣೆ ಮಾಡಲು ಸಾಧ್ಯವಿದೆ.
ಪಾಲುದಾರರ ಬ್ಯಾಂಕ್ನಿಂದ ಮರುಪಾವತಿಗಳು, ಕ್ಯಾಶ್‌ಬ್ಯಾಕ್‌ಗಳು, ಬಡ್ಡಿ ಪಡೆಯಲು ಮಾರ್ಚ್ 15ರ ಬಳಿಕವೂ ಅನುಮತಿಸಲಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಪಾಲುದಾರ ಬ್ಯಾಂಕ್‌ಗಳೊಂದಿಗೆ ನಿರ್ವಹಿಸಲಾದಲ್ಲಿ ಆ ಠೇವಣಿಗಳನ್ನು ಹಿಂಪಡೆಯಬಹುದು ಸ್ವೀಪ್-ಇನ್, ಪಾವತಿಗಳ ಬ್ಯಾಂಕ್‌ಗೆ ಸೂಚಿಸಲಾದ ಬ್ಯಾಲೆನ್ಸ್ ಮೇಲಿನ ಸೀಲಿಂಗ್‌ಗೆ ಒಳಪಟ್ಟಿರುತ್ತದೆ ಎಂದು ಆರ್ಬಿಐ ತಿಳಿಸಿದೆ.