ನವದೆಹಲಿ: ಫೆಬ್ರವರಿ 2024ರ ಹೊತ್ತಿಗೆ ಭಾರತದಲ್ಲಿನ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 148 ಮಿಲಿಯನ್ಗೆ (14.8 ಕೋಟಿ) ಏರಿಕೆಯಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ತಿಳಿಸಿದೆ. ಫೆಬ್ರವರಿ 2024 ರಲ್ಲಿ 4.3 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿದ್ದು, ಹಣಕಾಸು ವರ್ಷ 2023 ರಲ್ಲಿ ಮಾಸಿಕ ಸರಾಸರಿ 2.1 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳು ಸೃಷ್ಟಿಯಾಗಿವೆ.
ಫೆಬ್ರವರಿ 2024 ರಲ್ಲಿ, ಸಿಡಿಎಸ್ಎಲ್ನಲ್ಲಿ ಅತ್ಯಧಿಕ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿವೆ ಮತ್ತು ಎಂಒಎಂ ಆಧಾರದ ಮೇಲೆ ಸಿಡಿಎಸ್ಎಲ್ ತನ್ನ ಮಾರುಕಟ್ಟೆ ಪಾಲು ಹೆಚ್ಚಿಸಿಕೊಂಡಿದೆ. ವಾರ್ಷಿಕ ಆಧಾರದ ಮೇಲೆ, ಎನ್ಎಸ್ಡಿಎಲ್ ಒಟ್ಟು ಅಥವಾ ಹೊಸದಾಗಿ ಸೇರ್ಪಡೆಯಾದ ಖಾತೆಗಳ ಪೈಕಿ 380 ಬಿಪಿ / 920 ಬಿಪಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಎನ್ಎಸ್ಇಯಲ್ಲಿ ಸಕ್ರಿಯ ಗ್ರಾಹಕರ ಸಂಖ್ಯೆ ಫೆಬ್ರವರಿ 2024 ರಲ್ಲಿ ಶೇಕಡಾ 4.8 ರಷ್ಟು ಏರಿಕೆಯಾಗಿ 40.05 ಮಿಲಿಯನ್ಗೆ ತಲುಪಿದೆ. ಪ್ರಸ್ತುತ, ಅಗ್ರ ಐದು ಡಿಸ್ಕೌಂಟ್ ಬ್ರೋಕರ್ಗಳು ಒಟ್ಟು ಎನ್ಎಸ್ಇ ಸಕ್ರಿಯ ಗ್ರಾಹಕರ ಪೈಕಿ ಶೇಕಡಾ 63.5 ರಷ್ಟು ಗ್ರಾಹಕರನ್ನು ಹೊಂದಿದ್ದಾರೆ. ಇದು ಫೆಬ್ರವರಿ 2023 ರಲ್ಲಿ ಶೇಕಡಾ 59.6 ರಷ್ಟಿತ್ತು.