ಕರ್ನಾಟಕ

karnataka

ETV Bharat / business

ಏಪ್ರಿಲ್​ನಲ್ಲಿ ಭಾರತದಲ್ಲಿ 1 ಬಿಲಿಯನ್​ ಡಾಲರ್​ ಠೇವಣಿ ಇಟ್ಟ ಎನ್​​ಆರ್​ಐಗಳು - NRI Deposits in India - NRI DEPOSITS IN INDIA

ಭಾರತದ ಆರ್ಥಿಕತೆಯ ಮೇಲೆ ತಮ್ಮ ವಿಶ್ವಾಸಾರ್ಹತೆಯನ್ನು ಮುಂದುವರಿಸಿರುವ ಎನ್​ಆರ್​ಐಗಳು ಏಪ್ರಿಲ್​ ತಿಂಗಳಲ್ಲಿ ದೇಶದಲ್ಲಿ ಸುಮಾರು 1 ಬಿಲಿಯನ್ ಡಾಲರ್ ಠೇವಣಿ ಇಟ್ಟಿದ್ದಾರೆ.

ಭಾರತದಲ್ಲಿ 1 ಬಿಲಿಯನ್​ ಡಾಲರ್​ ಠೇವಣಿ ಇಟ್ಟ ಎನ್​​ಆರ್​ಐಗಳು
ಭಾರತದಲ್ಲಿ 1 ಬಿಲಿಯನ್​ ಡಾಲರ್​ ಠೇವಣಿ ಇಟ್ಟ ಎನ್​​ಆರ್​ಐಗಳು (IANS (ಸಾಂದರ್ಭಿಕ ಚಿತ್ರ))

By ETV Bharat Karnataka Team

Published : Jun 22, 2024, 5:13 PM IST

ನವದೆಹಲಿ: ಜಾಗತಿಕವಾಗಿ ಮಂದಗತಿಯ ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ ಭಾರತದ ಆರ್ಥಿಕತೆಯ ದೃಢತೆಯ ಬಗ್ಗೆ ತಮ್ಮ ವಿಶ್ವಾಸವನ್ನು ತೋರಿಸಿರುವ ಅನಿವಾಸಿ ಭಾರತೀಯರು (ಎನ್ಆರ್​ಐ) ಏಪ್ರಿಲ್​ ಒಂದೇ ತಿಂಗಳಲ್ಲಿ ದೇಶದಲ್ಲಿ ಸುಮಾರು 1 ಬಿಲಿಯನ್ ಡಾಲರ್ ಠೇವಣಿ ಇಟ್ಟಿದ್ದಾರೆ.

ಕಳೆದ ವರ್ಷ, ಸಾಗರೋತ್ತರ ಭಾರತೀಯರು ಇದೇ ತಿಂಗಳಲ್ಲಿ 150 ಮಿಲಿಯನ್ ಡಾಲರ್ ಠೇವಣಿ ಇಟ್ಟಿದ್ದರು. ಈ ವರ್ಷ ಪ್ರಮಾಣ ಹೆಚ್ಚಾಗಿರುವುದು ಭಾರತೀಯ ಆರ್ಥಿಕತೆಯ ಮೇಲೆ ಹೆಚ್ಚುತ್ತಿರುವ ನಂಬಿಕೆಯನ್ನು ತೋರಿಸುತ್ತದೆ. 2003-19 ರ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಸರಾಸರಿ ಶೇಕಡಾ 7 ರಷ್ಟಿದ್ದದು 2021-24 ರ ಅವಧಿಯಲ್ಲಿ ಸರಾಸರಿ ಶೇಕಡಾ 8 ಅಥವಾ ಅದಕ್ಕಿಂತ ಹೆಚ್ಚಿನ ದರಕ್ಕೆ ಬೆಳವಣಿಗೆಯಾಗುತ್ತಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ ಬಿಐ) ಇತ್ತೀಚಿನ ಮಾಹಿತಿಯ ಪ್ರಕಾರ, ಎನ್ಆರ್​ಐ ಠೇವಣಿಗಳ ಹೆಚ್ಚಳವು ಭಾರತೀಯ ಆರ್ಥಿಕತೆಯ ದೃಢತೆಯನ್ನು ಪ್ರತಿಬಿಂಬಿಸುತ್ತದೆ.

ಅನಿವಾಸಿ ಭಾರತೀಯರು ದೇಶದಲ್ಲಿ ಮೂರು ಪ್ರಮುಖ ರೀತಿಯ ಠೇವಣಿ ಯೋಜನೆಗಳಲ್ಲಿ ತಮ್ಮ ಹಣವನ್ನು ಠೇವಣಿ ಇಡಬಹುದು. ಅವು: ವಿದೇಶಿ ಕರೆನ್ಸಿ ಅನಿವಾಸಿ (ಬ್ಯಾಂಕ್) ಅಥವಾ ಎಫ್​ಸಿಎನ್ಆರ್ (ಬಿ); ಅನಿವಾಸಿ ಬಾಹ್ಯ ರೂಪಾಯಿ ಖಾತೆ ಅಥವಾ ಎನ್ಆರ್​ಇ (ಆರ್​ಎ) ಮತ್ತು ಅನಿವಾಸಿ ಸಾಮಾನ್ಯ (ಎನ್ಆರ್​ಒ) ಠೇವಣಿ ಯೋಜನೆ.

ಏಪ್ರಿಲ್​ನಲ್ಲಿ ಅನಿವಾಸಿ ಭಾರತೀಯರು ಎನ್ಆರ್​ಇ (ಆರ್​ಎ) ಯೋಜನೆಯಲ್ಲಿ 583 ಮಿಲಿಯನ್ ಡಾಲರ್ ಠೇವಣಿ ಇಟ್ಟಿದ್ದರೆ, ಎಫ್​ಸಿಎನ್ಆರ್ (ಬಿ) ಯೋಜನೆಯಲ್ಲಿ 483 ಮಿಲಿಯನ್ ಡಾಲರ್ ಠೇವಣಿ ಇಟ್ಟಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಎನ್ಆರ್​ಐ ಠೇವಣಿಗಳು 131 ಬಿಲಿಯನ್ ಡಾಲರ್​ನಿಂದ 142 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದ್ದವು.

ಏತನ್ಮಧ್ಯೆ, ಭಾರತದ ವಿದೇಶಿ ವಿನಿಮಯ ಮೀಸಲು 4.3 ಬಿಲಿಯನ್ ಡಾಲರ್​ನಷ್ಟು ಏರಿಕೆಯಾಗಿ ಜೀವಮಾನದ ಗರಿಷ್ಠ 655.8 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಇತ್ತೀಚಿನ ಆರ್​ಬಿಐ ಅಂಕಿ ಅಂಶಗಳು ತಿಳಿಸಿವೆ. 2024 ರಲ್ಲಿ ವಿಶ್ವದ ಹಣ ರವಾನೆಯಲ್ಲಿ ಶೇಕಡಾ 15.2 ರಷ್ಟು ಪಾಲನ್ನು ಹೊಂದಿರುವ ಭಾರತವು ಜಾಗತಿಕವಾಗಿ ಅತಿ ಹೆಚ್ಚು ಹಣ ಸ್ವೀಕರಿಸುವ ದೇಶವಾಗಿ ಮುಂದುವರೆದಿದೆ. ಭಾರತೀಯ ಮೂಲದ ಪ್ರಜೆಯಾಗಿದ್ದು, ಬೇರೆ ದೇಶಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿರುವವರಿಗೆ ಎನ್ಆರ್​ಐ ಎಂದು ಕರೆಯುತ್ತಾರೆ. ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಪ್ರಕಾರ, ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಂಖ್ಯೆಯ ಎನ್ಆರ್​ಐಗಳನ್ನು ಹೊಂದಿದೆ.

ಇದನ್ನೂ ಓದಿ : 2023-24ರಲ್ಲಿ ಅಟಲ್​ ಪಿಂಚಣಿ ಯೋಜನೆಗೆ 1 ಕೋಟಿ 22 ಲಕ್ಷ ಜನರ ಸೇರ್ಪಡೆ: ಶೇ 24ರಷ್ಟು ಹೆಚ್ಚಳ - ATAL PENSION YOJANA

ABOUT THE AUTHOR

...view details