ಕರ್ನಾಟಕ

karnataka

ETV Bharat / business

ದಿನಕ್ಕೆ ಜಸ್ಟ್​​ 100 ರೂ ಹೂಡಿಕೆ ಮಾಡಿ 5 ಕೋಟಿ ನಿಧಿ ಪಡೆಯಿರಿ; ಈ ಹೂಡಿಕೆ ತಂತ್ರದ ಬಗ್ಗೆ ನಿಮಗೆ ಗೊತ್ತಾ? - MUTUAL FUND SIP STRATEGY

ನಿವೃತ್ತಿಗಾಗಿ ಹೂಡಿಕೆ ಮಾಡಬೇಕು ಎಂದುಕೊಂಡಿರುವಿರಾ? ಹಾಗಾದರೆ ದಿನಕ್ಕೆ ಕೇವಲ 100 ಹೂಡಿಕೆ ಮಾಡಿ - ನೀವು 5 ಕೋಟಿ ರೂ. ಗಳಿಸಬಹುದು - ಹೇಗೆ ಅನ್ನೋದನ್ನು ಇಲ್ಲಿ ತಿಳಿಯಿರಿ.

mutual-fund-sip-calculator-how-a-rs-100-a-day-investment-can-take-you-to-rs-5-crore-retirement
ದಿನಕ್ಕೆ ಜಸ್ಟ್​​ 100 ರೂ ಹೂಡಿಕೆ ಮಾಡಿ 5 ಕೋಟಿ ನಿಧಿ ಪಡೆಯಿರಿ; ಈ ಹೂಡಿಕೆ ತಂತ್ರದ ಬಗ್ಗೆ ನಿಮಗೆ ಗೊತ್ತಾ? (ANI)

By ETV Bharat Karnataka Team

Published : Oct 21, 2024, 11:39 AM IST

Mutual Fund SIP :ನೀವು ಮುಂದಿನ ಭವಿಷ್ಯಕ್ಕಾಗಿ ಹಾಗೂ ಅತ್ಯಂತ ಸುಖಕರ ವೃದ್ಧಾಪ್ಯಕ್ಕಾಗಿ ಹೂಡಿಕೆ ಮಾಡಲು ಬಯಸುವಿರಾ?. ನಿವೃತ್ತಿಯ ಮೂಲಕ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಬೇಕು ಎಂದುಕೊಂಡಿದ್ದೀರಾ?. ಹಾಗಾದರೆ ನಾವು ಹೇಳುವ ಈ ಐಡಿಯಾ ಒಮ್ಮೆ ಟ್ರೈ ಮಾಡಿ ನೋಡಿ. ದಿನಕ್ಕೆ 100 ರೂ.ನಂತೆ ಹೂಡಿಕೆ ಮಾಡಿದರೆ ಸಾಕು, ನಿವೃತ್ತಿಯ ಹೊತ್ತಿಗೆ ಸುಮಾರು 5 ಕೋಟಿ ರೂ. ಗಳಿಸಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ 'ವ್ಯವಸ್ಥಿತ ಹೂಡಿಕೆ ಯೋಜನೆ' SIP ಮೂಲಕ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು. ಈ ಪ್ಲಾನ್​ ಹೇಗೆ ವರ್ಕೌಟ್​ ಆಗುತ್ತೆ ಅನ್ನೋದನ್ನು ನಾವೀಗ ನೋಡೋಣ

ಕಾಂಪೌಂಡಿಂಗ್ ಎಫೆಕ್ಟ್: ಮ್ಯೂಚುವಲ್ ಫಂಡ್‌ಗಳಲ್ಲಿ ಕಾಂಪೌಂಡಿಂಗ್ ಎಫೆಕ್ಟ್ ಕೆಲಸ ಮಾಡುತ್ತದೆ. ಅಂದರೆ ದೀರ್ಘಾವಧಿ ಹೂಡಿಕೆಯ ಮೇಲಿನ ಲಾಭ ಚಕ್ರಬಡ್ಡಿ ರೂಪದಲ್ಲಿ ಬರುತ್ತಿದೆ. ಇದನ್ನು ಅರ್ಥಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ಮೂಲಕ ನಾವು ತಿಳಿದುಕೊಳ್ಳೋಣ.

ಒಬ್ಬ ವ್ಯಕ್ತಿಯು ಮೊದಲ ವರ್ಷದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುತ್ತಾನೆ ಎಂದು ಭಾವಿಸೋಣ. ವರ್ಷದ ಕೊನೆಯಲ್ಲಿ ಅವರು ಬಡ್ಡಿಯ ರೂಪದಲ್ಲಿ ಸ್ವಲ್ಪ ಆದಾಯವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ, ಬಡ್ಡಿಯ ರೂಪದಲ್ಲಿ ಆದಾಯವನ್ನು ಅಸಲಿಗೆ ಸೇರಿಸಲಾಗುತ್ತದೆ. ಮರುವರ್ಷ ಈ ಮೊತ್ತದಲ್ಲಿ ಮತ್ತೆ ಆದಾಯ ಬರುತ್ತದೆ. ಇದನ್ನೂ ಮೂಲದಲ್ಲಿ ಸಂಯೋಜಿಸಲಾಗುತ್ತದೆ. ಹೀಗೆ ವರ್ಷಗಳು ಕಳೆದಂತೆ ಆತನ ಹೂಡಿಕೆಗೆ ಹೆಚ್ಚುವರಿ ಆದಾಯ ಸೇರುತ್ತಾ ಹೋಗುತ್ತದೆ. ಹೀಗಾಗಿ ಸಂಯುಕ್ತ ಪರಿಣಾಮವು ಮ್ಯೂಚುವಲ್ ಫಂಡ್‌ಗಳಲ್ಲಿ ಕಂಡುಬರುತ್ತದೆ. ಅದಕ್ಕಾಗಿಯೇ ಕಿರಿಯರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎನ್ನುವುದು ಹಣಕಾಸು ತಜ್ಞರ ಮಾತಾಗಿದೆ. ಏಕೆಂದರೆ ನೀವು ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು ಅದನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು. ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸುವ ಅವಕಾಶವಿದೆ.

100ರೂ ದೈನಂದಿನ ಹೂಡಿಕೆಯೊಂದಿಗೆ 5 ಕೋಟಿ ರೂ ಗಳಿಕೆ: ಉದಾಹರಣೆಗೆ, 25 ವರ್ಷದ ಉದ್ಯೋಗದಲ್ಲಿರುವ ವ್ಯಕ್ತಿಯು SIP ಮೂಲಕ ದಿನಕ್ಕೆ 100ರೂಗಳಂತೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾನೆ ಎಂದು ಭಾವಿಸೋಣ. ಅಂದರೆ ತಿಂಗಳಿಗೆ 3000 ರೂ.ವರೆಗೆ ಹೂಡಿಕೆ ಮಾಡುತ್ತಾರೆ. 60ಕ್ಕೆ ಅವರು ನಿವೃತ್ತಿಯಾಗುತ್ತಾರೆ ಎಂದು ನಾವು ಊಹಿಸಿಕೊಳ್ಳೋಣ. ಅಂದರೆ ಅವರು ಒಟ್ಟಾರೆ 35 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡುವುದನ್ನು ಮುಂದುವರೆಸಿದರೆ, ವಾರ್ಷಿಕವಾಗಿ ತನ್ನ ಹೂಡಿಕೆ 10 ಪ್ರತಿಶತದಷ್ಟು ಹೆಚ್ಚಿಸಿಕೊಂಡು ಮುಂದುವರೆದರೆ, ನಿವೃತ್ತಿಯ ಸಮಯದಲ್ಲಿ ಅವರು ದೊಡ್ಡ ಪ್ರಮಾಣದ ಆರ್ಥಿಕ ನಿಧಿ ಸಂಗ್ರಹಿಸಬಹುದು. ಇದನ್ನು ಸರಳ ರೀತಿಯಲ್ಲಿ ಅರ್ಥಮಾಡಿಕೊಳ್ಳಲು, ಈಗ ನಾವು ಸರಳ ಲೆಕ್ಕಾಚಾರವನ್ನು ನೋಡೋಣ.

ಗಮನಿಸಿ:ಇತ್ತೀಚಿನ ಮಾರುಕಟ್ಟೆ ಪ್ರವೃತ್ತಿಯನ್ನು ಆಧರಿಸಿ, ಮ್ಯೂಚುವಲ್ ಫಂಡ್‌ಗಳು ವರ್ಷಕ್ಕೆ 12 ಪ್ರತಿಶತದಷ್ಟು ಗಳಿಸುತ್ತವೆ ಎಂದು ಊಹಿಸಿ ಈ ಲೆಕ್ಕಾಚಾರವನ್ನು ಮಾಡೋಣ.

  • ಆರಂಭಿಕ ಹೂಡಿಕೆ = ದಿನಕ್ಕೆ ರೂ.100 = ತಿಂಗಳಿಗೆ 3000ರೂ.
  • ಹೂಡಿಕೆಯ ಅವಧಿ = 35 ವರ್ಷಗಳು
  • ವಾರ್ಷಿಕ ಆದಾಯ = ಶೇ12
  • ಒಟ್ಟು ಹೂಡಿಕೆ = ರೂ.3000 X 12 ತಿಂಗಳುಗಳು X 35 ವರ್ಷಗಳು = ರೂ.97,56,877( ವಾರ್ಷಿಕ 12ರಷ್ಟು ಬಡ್ಡಿಯನ್ನು ಲೆಕ್ಕ ಹಾಕಬೇಕು)
  • ಹೂಡಿಕೆಯ ಮೇಲಿನ ಲಾಭ = ರೂ.4,35,43,942
  • 35 ವರ್ಷಗಳ ನಂತರ ಹೂಡಿಕೆದಾರರು ಪಡೆದ ಒಟ್ಟು ಹಣಕಾಸು ನಿಧಿ = ರೂ.5,33,00,819

ದಯವಿಟ್ಟು ಗಮನಿಸಿ: ಈ ಲೇಖನದಲ್ಲಿ ತಿಳಿಸಲಾದ ವಿಷಯಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ಸ್ಟಾಕ್ ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳು ಬಹಳಷ್ಟು ಅಪಾಯವನ್ನು ಹೊಂದಿರುತ್ತವೆ. ಹಾಗಾಗಿ ಇಂತಹ ಹೂಡಿಕೆ ಮಾಡುವ ಮುನ್ನ ಹಣಕಾಸು ತಜ್ಞರ ಸಲಹೆ ಪಡೆಯುವುದು ಉತ್ತಮ.

ಇದನ್ನು ಓದಿ:EPFO ನಿಯಮಗಳಲ್ಲಿ ಮತ್ತೆ ಬದಲಾವಣೆ: ಹಣ ಹಿಂಪಡೆಯುವ ಮೊದಲು ಹೊಸ ನಿಯಮಗಳ ಬಗ್ಗೆ ತಿಳಿಯಿರಿ

Tata Curvv ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ; ವಿಡಿಯೋ

ದೀಪಾವಳಿಯಲ್ಲಿ Phonepay ಪ್ರಮುಖ ನಿರ್ಧಾರ: ಕೇವಲ 9 ರೂಪಾಯಿಗೆ ವಿಮೆ!: ಈ ಪಾಲಿಸಿ ಖರೀದಿಸುವುದು ಹೇಗೆ?

ABOUT THE AUTHOR

...view details