ನವದೆಹಲಿ:''ಐಟಿಆರ್ ಫೈಲಿಂಗ್ ಮಾಡುವ ವೇಳೆಯಲ್ಲಿ ಉತ್ಪ್ರೇಕ್ಷಿತ, ನಕಲಿ ಬಿಲ್ಗಳನ್ನು ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ'' ಎಂದು ಐಟಿ ಇಲಾಖೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಸೂಚನೆ ನೀಡಿದೆ.
2024-25ರ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಫೈಲಿಂಗ್ ಮಾಡಲು ಕೊನೆಯ ದಿನಾಂಕ ಜುಲೈ 31 ಆಗಿದೆ. ಆದಾಯ ತೆರಿಗೆ ಇಲಾಖೆ ಮತ್ತು ಅದರ ಆಡಳಿತ ಮಂಡಳಿಯ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಾರ, ಜುಲೈ 26ರ ಹೊತ್ತಿಗೆ ಐದು ಕೋಟಿಗೂ ಹೆಚ್ಚು ITR ಗಳನ್ನು ಸಲ್ಲಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಸಕಾಲಿಕ ಮರುಪಾವತಿಯನ್ನು ಪಡೆಯಲು ಸರಿಯಾಗಿ ರಿಟರ್ನ್ಸ್ ಸಲ್ಲಿಸುವಂತೆ ಕೇಳಿದೆ. "ಮರುಪಾವತಿ ಪರಿಶೀಲನೆಗಳಿಗೆ ಒಳಪಟ್ಟಿರುತ್ತವೆ, ಇದು ವಿಳಂಬಕ್ಕೆ ಕಾರಣವಾಗಬಹುದು. ಐಟಿಆರ್ ಫೈಲಿಂಗ್ನಲ್ಲಿ ನಿಖರವಾದ ಬಿಲ್ಗಳನ್ನು ಲಗತ್ತಿಸಬೇಕಾಗುತ್ತದೆ. ಇದರಿಂದ ಮರುಪಾವತಿ ಮಾಡಲು ತ್ವರಿತ ಪ್ರಕ್ರಿಯೆ ನಡೆಯುತ್ತದೆ. ತೆರಿಗೆದಾರರಿಂದ ಮಾಡಿದ ಕ್ಲೈಮ್‌ಗಳಲ್ಲಿನ ಯಾವುದೇ ವ್ಯತ್ಯಾಸಗಳು ಪರಿಷ್ಕೃತ ರಿಟರ್ನ್‌ಗಾಗಿ ವಿನಂತಿಯನ್ನು ಕೇಳುತ್ತದೆ'' ಎಂದು ಐಟಿ ಇಲಾಖೆ ತಿಳಿಸಿದೆ.
ಐಟಿಆರ್ ಸಲ್ಲಿಸುವ ತೆರಿಗೆದಾರರಿಗೆ ಮೂಲ (ಟಿಡಿಎಸ್) ಮೊತ್ತದಲ್ಲಿ ಕಡಿತಗೊಳಿಸಲಾದ ತಪ್ಪಾದ ತೆರಿಗೆಯನ್ನು ಕ್ಲೈಮ್ ಮಾಡಬೇಡಿ. ಅವರ ಆದಾಯವನ್ನು "ಅಂಡರ್ ರಿಪೋರ್ಟ್" ಮಾಡಬೇಡಿ ಅಥವಾ ಕಡಿತಗಳನ್ನು "ಉತ್ಪ್ರೇಕ್ಷೆ" ಮಾಡಬೇಡಿ ಅಥವಾ "ನಕಲಿ" ವೆಚ್ಚಗಳನ್ನು ಮಾಡಿರುವುದಾಗಿ ಕ್ಲೈಮ್‌ಗಳನ್ನು ಸಲ್ಲಿಸಬೇಡಿ. ತೆರಿಗೆದಾರರು ತಾವು ಮಾಡುವ ಕ್ಲೈಮ್ಗಳು "ಸರಿಯಾದ ಮತ್ತು ನಿಖರವಾಗಿರಬೇಕು" ಎಂದು ಐಟಿ ಇಲಾಖೆ ತಿಳಿಸಿದೆ. "ಸುಳ್ಳು ಅಥವಾ ನಕಲಿ ವೆಚ್ಚಗಳ ಕುರಿತ ಕ್ಲೈಮ್ ಮಾಡುವ ವೇಳೆ ಸಲ್ಲಿಸುವುದು ಶಿಕ್ಷಾರ್ಹ ಅಪರಾಧ" ಎಂದು ಇಲಾಖೆ ಹೇಳಿದೆ.