ಜನರು ಈಗೀಗ ಹೆಚ್ಚೆಚ್ಚು ಆರ್ಥಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉಳಿತಾಯ ಹಾಗೂ ಭವಿಷ್ಯದ ಉತ್ತಮ ಜೀವನಕ್ಕಾಗಿ ಯೋಚನೆ ಹಾಗೂ ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ವಿಷಯವಾಗಿದೆ. ಏಕೆಂದರೆ ನಮ್ಮನ್ನು ನಂಬಿದವರಿಗೆ ಹಾಗೂ ನಮ್ಮ ನಂತರವೂ ಆರ್ಥಿಕ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾದರೆ, ಜೀವ ವಿಮಾ ಪಾಲಿಸಿ ತೆಗೆದುಕೊಳ್ಳುವುದು ಅನಿವಾರ್ಯ. ಎಲ್ಐಸಿ ಈಗಾಗಲೇ ಹಲವು ರೀತಿಯ ಪಾಲಿಸಿಗಳನ್ನು ಜನರ ಅನಕೂಲಕ್ಕಾಗಿ ಜಾರಿಗೆ ತಂದಿದೆ. ಗ್ರಾಹಕರ ಬೇಡಿಕೆ ಹಾಗೂ ಅನುಕೂಲಕ್ಕಾಗಿ ಹೆಚ್ಚಿನ ಭದ್ರತೆ ಮತ್ತು ಗಣನೀಯ ಲಾಭವನ್ನು ಖಾತರಿಪಡಿಸುವ ಮತ್ತೊಂದು ಪಾಲಿಸಿಯನ್ನು ಎಲ್ಐಸಿ ಹೊರ ತಂದಿದೆ. ಅದೇ 'ಎಲ್‌ಐಸಿ ಹೊಸ ಜೀವನ್ ಆನಂದ್ ಪಾಲಿಸಿ' (915).
ಈ ಹೊಸ ಪಾಲಿಸಿದಾರರಿಗೆ ದೈನಂದಿನ ಉಳಿತಾಯದೊಂದಿಗೆ ಗಣನೀಯ ಪ್ರಮಾಣದ ಹಣವನ್ನು ಗಳಿಸಲು ಇದು ಸಹಾಯ ಮಾಡುತ್ತದೆ. ನೀವು ದಿನಕ್ಕೆ ಕನಿಷ್ಠ ರೂ.200 ಉಳಿಸಿದರೆ, ಮೆಚ್ಯೂರಿಟಿ ಸಮಯದಲ್ಲಿ ರೂ.1.22 ಕೋಟಿಗಳ ಮೊತ್ತವನ್ನು ನೀವು ಪಡೆಯಬಹುದಾಗಿದೆ. LIC ಹೊಸ ಜೀವನ್ ಆನಂದ್ ಪಾಲಿಸಿಯ ಸಂಪೂರ್ಣ ವಿವರಗಳನ್ನು ನೋಡುವುದಾದರೆ,
ಎಲ್ಐಸಿ ನ್ಯೂ ಜೀವನ್ ಆನಂದ್ ಕಡಿಮೆ ಪ್ರೀಮಿಯಂ ಎಲ್ಐಸಿ ಪಾಲಿಸಿಗಳಲ್ಲಿ ಒಂದಾಗಿದೆ. ಕಡಿಮೆ ಪ್ರೀಮಿಯಂ ಹೆಚ್ಚಿನ ಆದಾಯ ಇದರ ಮೂಲ ಮಂತ್ರವಾಗಿದೆ. ಈ ಯೋಜನೆಯು ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ. ಇದು ಅನೇಕ ಮೆಚ್ಯೂರಿಟಿ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಪ್ರತಿ ತಿಂಗಳು ನೀವು 6,075 ಹೂಡಿಕೆ ಮಾಡುವ ಮೂಲಕ, 35 ವರ್ಷಗಳ ಬಳಿಕ ಸುಮಾರು 1.22 ಕೋಟಿಗಳನ್ನು ಪಡೆಯಬಹುದು.
ಪ್ರೀಮಿಯಂ ಪಾವತಿ: ಮೊದಲ ವರ್ಷದ ಪ್ರೀಮಿಯಂ (ಶೇ 4.5ರಷ್ಟು ಜಿಎಸ್‌ಟಿ )
- ವರ್ಷಕ್ಕೆ : 71,274 ರೂಪಾಯಿ
- ಆರು ತಿಂಗಳಿಗೆ : 36,041 ರೂ.
- ಮೂರು ತಿಂಗಳಿಗೆ : 18,223 ರೂ.
- ತಿಂಗಳಿಗೆ : 6,075 ರೂ.