ಕರ್ನಾಟಕ

karnataka

ETV Bharat / business

ಇಂತಹ ಆಲೋಚನೆಗಳನ್ನು ಸದ್ಯಕ್ಕೆ ತಲೆಯಿಂದ ತೆಗೆದು ಹಾಕಿಬಿಡಿ: ಆರೋಗ್ಯ ವಿಮೆ ಪ್ರವೇಶದ ಬಗ್ಗೆ LIC ಸ್ಪಷ್ಟನೆ - LIC HEALTH INSURANCE CLARIFED - LIC HEALTH INSURANCE CLARIFED

ಎಲ್​​​​ಐಸಿ ಕೂಡಾ ಶೀಘ್ರ ಆರೋಗ್ಯ ವಿಮೆ ಯೋಜನೆ ಜಾರಿಗೆ ತರುವುದಾಗಿ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ಬಗ್ಗೆ LIC ಸ್ಪಷ್ಟನೆ ನೀಡಿದೆ.

lic-health-insurance-no-formal-proposal-to-enter-health-insurance-says-lic
ಇಂತಹ ಆಲೋಚನೆಗಳನ್ನು ಸದ್ಯಕ್ಕೆ ತಲೆಯಿಂದ ತೆಗೆದು ಹಾಕಿಬಿಡಿ: ಆರೋಗ್ಯ ವಿಮೆ ಪ್ರವೇಶದ ಬಗ್ಗೆ LIC ಸ್ಪಷ್ಟನೆ (LIC Health Insurance (Getty Images))

By ETV Bharat Karnataka Team

Published : Jun 15, 2024, 9:41 AM IST

ನವದೆಹಲಿ: LIC ಆರೋಗ್ಯ ವಿಮೆ ಬಗ್ಗೆ ಬಂದ ವರದಿಗಳ ಬಗ್ಗೆ ಎಲ್​ಐಸಿ ಸ್ಪಷ್ಟನೆ ನೀಡಿದೆ. ಭಾರತೀಯ ಜೀವ ವಿಮಾ ನಿಗಮ ಪ್ರಸ್ತುತ ಆರೋಗ್ಯ ವಿಮಾ ವಿಭಾಗವನ್ನು ಪ್ರವೇಶಿಸುವ ಯಾವುದೇ ಯೋಚನೆ ಯೋಜನೆ ಸದ್ಯಕ್ಕೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಶುಕ್ರವಾರ ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಪೈಲಿಂಗ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕಂಪನಿ ತನ್ನ ಬೆಳವಣಿಗೆ ಮತ್ತು ವಿಸ್ತರಣೆಯ ಎಲ್ಲಾ ಅವಕಾಶಗಳನ್ನು ಕಾರ್ಯತಂತ್ರವಾಗಿ ಬಳಸಿಕೊಳ್ಳುತ್ತದೆ ಮತ್ತು ಅದರ ಭಾಗವಾಗಿ ಕೆಲವು ಪಾಲುದಾರಿಕೆಗಳನ್ನು ಪಡೆದುಕೊಳ್ಳುವುದು ಮತ್ತು ಹೂಡಿಕೆಗಳನ್ನು ಮಾಡುವಂತಹ ಕ್ರಮಗಳು ಮುಂದುವರಿಯುತ್ತದೆ ಎಂದು ಅದು ಫೈಲಿಂಗ್​ನಲ್ಲಿ ಹೇಳಿದೆ.

ಪ್ರಸ್ತುತ, ವಿಮಾ ಕಾಯಿದೆ 1938 ರ ಅಡಿ ಜೀವ ವಿಮಾ ಕಂಪನಿಗಳು ಆರೋಗ್ಯ ವಿಮೆಯನ್ನು ಒದಗಿಸಲು ಸಾಧ್ಯವಿಲ್ಲ. ಇವುಗಳನ್ನು ಸಾಮಾನ್ಯ ವಿಮಾ ಕಂಪನಿಗಳು ಅಥವಾ ಆರೋಗ್ಯ ವಿಮಾ ಕಂಪನಿಗಳು ಒದಗಿಸಬೇಕಾಗುತ್ತದೆ. ಈ ನಿಯಮಗಳನ್ನು ಬದಲಾಯಿಸಲು ಮತ್ತು ವಿಮಾ ಕಂಪನಿಗಳಿಗೆ ಸಂಯೋಜಿತ ಪರವಾನಗಿ ನೀಡಲು ಸರ್ಕಾರ ಸಹ ಉದ್ದೇಶಿಸಿದೆ. ಇದಕ್ಕಾಗಿ ರಚಿಸಲಾದ ಸಂಸದೀಯ ಸಮಿತಿಯು ತನ್ನ ವರದಿಯಲ್ಲಿ, ಎಲ್ಲ ಜೀವ, ಸಾಮಾನ್ಯ ಮತ್ತು ಆರೋಗ್ಯ ವಿಮಾ ಪಾಲಿಸಿಗಳನ್ನು ಒಂದೇ ಕಂಪನಿಯಿಂದ ಲಭ್ಯವಾಗುವಂತೆ ಮಾಡಬೇಕು ಎಂಬ ಪ್ರಸ್ತಾಪವನ್ನು ಮಾಡಿದೆ. ಆ ಮೂಲಕ ವಿಮೆಯ ವಿಸ್ತಾರವನ್ನು ಹೆಚ್ಚಿಸಬೇಕು ಎಂದು ವರದಿಯಲ್ಲಿ ಹೇಳಿದೆ.

ಹೀಗಾಗಿ 1938 ವಿಮಾ ಕಾಯಿದೆಗೆ ತಿದ್ದುಪಡಿ ತರಬೇಕಾಗಿದೆ. ಸರ್ಕಾರ ಇದನ್ನು ಮಾಡಿದ ಬಳಿಕ ಈ ಆರೋಗ್ಯ ವಿಮೆ ನೀಡಲು ಸಾಧ್ಯವಾಗಬಹುದು. ಆದರೆ ಇದಕ್ಕೆ ಸಾಕಷ್ಟು ಸಮಯಬೇಕಾಗಬಹುದು.

ಇದನ್ನು ಓದಿ:ಎಟಿಎಂ ಬಳಕೆದಾರರಿಗೆ ಬ್ಯಾಡ್ ನ್ಯೂಸ್: ನಗದು ಹಿಂಪಡೆಯುವ ಶುಲ್ಕ ಹೆಚ್ಚಳ - Cash Withdrawal Charges

ABOUT THE AUTHOR

...view details