ETV Bharat / business

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಭಾರತ: ಯುಎನ್ - ECONOMY

ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಮೇಲ್ವಿಚಾರಣೆಯ ಮುಖ್ಯಸ್ಥ ಹಮೀದ್ ರಶೀದ್ (ಬಲಭಾಗದಲ್ಲಿರುವವರು)
ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಮೇಲ್ವಿಚಾರಣೆಯ ಮುಖ್ಯಸ್ಥ ಹಮೀದ್ ರಶೀದ್ (ಬಲಭಾಗದಲ್ಲಿರುವವರು) (IANS)
author img

By ETV Bharat Karnataka Team

Published : 4 hours ago

ವಿಶ್ವಸಂಸ್ಥೆ: ವಾರ್ಷಿಕ ಶೇ 6.6 ರಷ್ಟು ಆರ್ಥಿಕ ಬೆಳವಣಿಗೆ ದರದೊಂದಿಗೆ ಭಾರತವು ಮತ್ತೊಮ್ಮೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಮೇಲ್ವಿಚಾರಣೆಯ ಮುಖ್ಯಸ್ಥ ಹಮೀದ್ ರಶೀದ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಮುಖ ಆರ್ಥಿಕ ವರದಿಯಾಗಿರುವ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ 2025 (ಡಬ್ಲ್ಯುಇಎಸ್​ಪಿ) (World Economic Situation and Prospects 2025) ಅನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಮುಂದಿನ ವರ್ಷ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 6.8 ಕ್ಕಿಂತಲೂ ಸ್ವಲ್ಪ ವೇಗವಾಗಿ ಬೆಳೆಯಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಸೇವೆ ಮತ್ತು ಕೆಲ ಸರಕುಗಳ ವಿಭಾಗಗಳಲ್ಲಿ, ವಿಶೇಷವಾಗಿ ಔಷಧ ಮತ್ತು ಎಲೆಕ್ಟ್ರಾನಿಕ್ಸ್​ ಸರಕುಗಳ ರಫ್ತು ಹೆಚ್ಚಳದಿಂದ ಭಾರತದ ಆರ್ಥಿಕತೆ ಬಲಶಾಲಿಯಾಗಲಿದೆ ಎಂದು ಡಬ್ಲ್ಯುಇಎಸ್​ಪಿ ಹೇಳಿದೆ. ದೃಢವಾದ ಖಾಸಗಿ ಬಳಕೆ ಮತ್ತು ಹೂಡಿಕೆಗಳು ರಾಷ್ಟ್ರದ ಆರ್ಥಿಕತೆಯ ಬೆಳವಣಿಗೆಗೆ ಕೊಡುಗೆ ನೀಡಲಿದ್ದು, ಮೂಲಸೌಕರ್ಯ ಅಭಿವೃದ್ಧಿಯ ಮೇಲಿನ ಬಂಡವಾಳ ವೆಚ್ಚವು ಮುಂದಿನ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಪೂರೈಕೆ ವಲಯವನ್ನು ನೋಡುವುದಾದರೆ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿನ ವಿಸ್ತರಣೆಯು ಮುಂದಿನ ವರ್ಷದುದ್ದಕ್ಕೂ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗಲಿದೆ. ಹಾಗೆಯೇ ಕೃಷಿ ವಲಯಕ್ಕೂ ಖುಷಿಯ ಸುದ್ದಿ ಇದ್ದು, 2024 ರಲ್ಲಿ ಉತ್ತಮ ಮುಂಗಾರು ಮಳೆಯಿಂದಾಗಿ ಬೇಸಿಗೆಯಲ್ಲಿ ಎಲ್ಲಾ ಪ್ರಮುಖ ಬೆಳೆಗಳ ಬಿತ್ತನೆ ಪ್ರಮಾಣ ಜಾಸ್ತಿಯಾಗಿದೆ. 2025 ರಲ್ಲಿ ಕೃಷಿ ಉತ್ಪಾದನೆ ಬೆಳವಣಿಗೆಯಾಗುವ ನಿರೀಕ್ಷೆಗಳಿವೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ವರ್ಷ ಅಂದಾಜು ಮಾಡಲಾಗಿದ್ದ ಶೇಕಡಾ 6.8ರ ಬೆಳವಣಿಗೆ ದರಕ್ಕೆ ಹೋಲಿಸಿದರೆ ಈ ವರ್ಷದ ಭಾರತದ ಬೆಳವಣಿಗೆಯ ಮುನ್ಸೂಚನೆಯು ಕೊಂಚ ಇಳಿಕೆಯಾಗಿದೆ. ಒಟ್ಟಾರೆ ಜಾಗತಿಕ ಬೆಳವಣಿಗೆಯ ದರವು ಶೇಕಡಾ 2.8 ರಷ್ಟಿದ್ದರೆ, ಅಭಿವೃದ್ಧಿ ಹೊಂದಿದ ದೇಶಗಳ ಬೆಳವಣಿಗೆ ದರವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 0.1 ರಷ್ಟು ಕಡಿಮೆಯಾಗಿ 1.6 ಕ್ಕೆ ಇಳಿದಿದೆ.

ವಿಶ್ವದಲ್ಲಿ ಎರಡನೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಚೀನಾದ ಈ ವರ್ಷದ ಅಂದಾಜು ಶೇಕಡಾ 0.1 ರಷ್ಟು ಕಡಿಮೆಯಾಗಿ 4.8 ಕ್ಕೆ ಇಳಿದಿದೆ ಮತ್ತು ಈ ವರ್ಷಕ್ಕೆ ಹೋಲಿಸಿದರೆ ಮುಂದಿನ ವರ್ಷ ಶೇಕಡಾ 0.3 ರಷ್ಟು ಕುಸಿದು ಶೇಕಡಾ 4.5 ಕ್ಕೆ ತಲುಪುವ ನಿರೀಕ್ಷೆಯಿದೆ. ಯುಎಸ್ ಆರ್ಥಿಕತೆಯು ಅಧಿಕ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈ ವರ್ಷ ಶೇಕಡಾ 1.9 ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.