ಅನೇಕರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ, ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಹೇಗೆ ಎಂಬ ಗೊಂದಲದಲ್ಲಿರುತ್ತಾರೆ. ಮಾರುಕಟ್ಟೆ ಬಂಡವಾಳೀಕರಣ (ಮಾರ್ಕೆಟ್ ಕ್ಯಾಪ್) ಮತ್ತು ಅಪಾಯದ ಆಧಾರದ ಮೇಲೆ 3 ವಿಧದ ಮ್ಯೂಚುಯಲ್ ಫಂಡ್‌ಗಳಿವೆ. ಅವುಗಳೆಂದರೆ, ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು. ಈಗ ಇವುಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು:ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಕಂಪನಿಗಳನ್ನು ವರ್ಗೀಕರಿಸಲು ಕೆಲವು ಮಾನದಂಡಗಳನ್ನು ಅನುಸರಿಸುತ್ತದೆ. ಮಾರುಕಟ್ಟೆ ಬಂಡವಾಳೀಕರಣದ ಆಧಾರದ ಮೇಲೆ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಟಾಪ್-100 ಕಂಪನಿಗಳನ್ನು ಲಾರ್ಜ್ ಕ್ಯಾಪ್ ಕಂಪನಿಗಳು ಎಂದು ಕರೆಯಲಾಗುತ್ತದೆ. ಈ ಕಂಪನಿಗಳ ಮಾರ್ಕೆಟ್ ಕ್ಯಾಪ್ ತುಂಬಾ ಹೆಚ್ಚಾಗಿದೆ. ಅದಕ್ಕಾಗಿಯೇ ಅವುಗಳನ್ನು ಬ್ಲೂ-ಚಿಪ್ ಸ್ಟಾಕ್ ಎಂದೂ ಕರೆಯುತ್ತಾರೆ. ವಾಸ್ತವವಾಗಿ ಈ ಕಂಪನಿಗಳು ₹20,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿವೆ.
ಉದಾಹರಣೆಗೆ, ರಿಲಯನ್ಸ್, ITC, SBI, HUL ಇತ್ಯಾದಿ ಕಂಪನಿಗಳು. ಅಂತಹ ದೊಡ್ಡ ಕ್ಯಾಪ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳನ್ನು 'ಲಾರ್ಜ್ ಕ್ಯಾಪ್ ಫಂಡ್‌ಗಳು' ಎಂದು ಕರೆಯಲಾಗುತ್ತದೆ. ಈ ಹೂಡಿಕೆಗಳಲ್ಲಿ ರಿಸ್ಕ್ ತುಂಬಾ ಕಡಿಮೆ ಇರುತ್ತದೆ.
ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು: ಮಾರುಕಟ್ಟೆ ಬಂಡವಾಳೀಕರಣದ ಆಧಾರದ ಮೇಲೆ ಟಾಪ್-101 ರಿಂದ 250 ಕಂಪನಿಗಳನ್ನು ಮಿಡ್ ಕ್ಯಾಪ್ ಕಂಪನಿಗಳು ಎಂದು ಕರೆಯಲಾಗುತ್ತದೆ. ಈ ಕಂಪನಿಗಳ ಮಾರುಕಟ್ಟೆ ಕ್ಯಾಪ್ ₹5,000 ಕೋಟಿಯಿಂದ ₹20,000 ಕೋಟಿವರೆಗೆ ಇರುತ್ತದೆ.
ಉದಾಹರಣೆಗೆ, ವೋಲ್ಟಾಸ್, ಸುಜ್ಲಾನ್ ಎನರ್ಜಿ, ಗೋದ್ರೇಜ್ ಇಂಡಸ್ಟ್ರೀಸ್ ಮುಂತಾದ ಕಂಪನಿಗಳು. ಅಂತಹ ಮಿಡ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳನ್ನು 'ಮಿಡ್ ಕ್ಯಾಪ್ ಫಂಡ್‌ಗಳು' ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಮಿಡ್ ಕ್ಯಾಪ್ ಕಂಪನಿಗಳು ಸಹ ಉತ್ತಮ ರೆಕಾರ್ಡ್ ಹೊಂದಿವೆ. ಆದಾಗ್ಯೂ, ದೊಡ್ಡ ಕ್ಯಾಪ್ ಫಂಡ್‌ಗಳಿಗೆ ಹೋಲಿಸಿದರೆ, ಮಿಡ್ ಕ್ಯಾಪ್ ಫಂಡ್‌ಗಳಲ್ಲಿ ರಿಸ್ಕ್ ಕೂಡ ಮಧ್ಯಸ್ಥಿತಿಯಲ್ಲಿ ಇರುತ್ತದೆ.
ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು:ಮಾರುಕಟ್ಟೆ ಬಂಡವಾಳೀಕರಣದ ವಿಷಯದಲ್ಲಿ ಟಾಪ್ 250 ನಂತರದ ಎಲ್ಲಾ ಕಂಪನಿಗಳನ್ನು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಈ ಕಂಪನಿಗಳ ಮಾರುಕಟ್ಟೆ ಬಂಡವಾಳವು ₹5,000 ಕೋಟಿಗಿಂತ ಕಡಿಮೆಯಿದೆ. ಅಂತಹ ಷೇರುಗಳಲ್ಲಿ ಹೂಡಿಕೆ ಮಾಡುವ ಮ್ಯೂಚುಯಲ್ ಫಂಡ್‌ಗಳನ್ನು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ, ಹೆಚ್ಚಿನ ಸ್ಮಾಲ್ ಕ್ಯಾಪ್ ಕಂಪನಿಗಳು ಗುಡ್ ರೆಕಾರ್ಡ್ ಅನ್ನು ಹೊಂದಿರುವುದು ಕಡಿಮೆಯಿದೆ.
ಉದಾಹರಣೆಗೆ, ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಆರಂಭಿಕ ಕಂಪನಿಗಳು ಅಥವಾ ಕಂಪನಿಗಳು ಸಣ್ಣ ಕ್ಯಾಪ್ ಸ್ಟಾಕ್‌ಗಳ ಅಡಿಯಲ್ಲಿ ಬರುತ್ತವೆ. ಹಾಗಾಗಿ ಇವುಗಳಲ್ಲಿ ಹೂಡಿಕೆ ಮಾಡುವವರಿಗೆ ರಿಸ್ಕ್ ಕೂಡ ಹೆಚ್ಚಿರುತ್ತದೆ.
ಪ್ರಮುಖ ವ್ಯತ್ಯಾಸಗಳು:
1.ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು:
- ಅಪಾಯದ ವಿವರ: ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಕಡಿಮೆ ಅಪಾಯದ ಪ್ರೊಫೈಲ್ ಅನ್ನು ಹೊಂದಿವೆ. ಅವರು ಟಾಪ್ 50-100 ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ.
- ಲಿಕ್ವಿಡಿಟಿ, ಏರಿಳಿತ: ಈ ಲಾರ್ಜ್ ಕ್ಯಾಪ್ ಫಂಡ್‌ಗಳು ಮಾರುಕಟ್ಟೆಯ ಏರಿಳಿತಗಳನ್ನು ತಡೆದುಕೊಳ್ಳಬಲ್ಲವು. ಅಲ್ಪಾವಧಿಯಲ್ಲಿ ಸಣ್ಣ ನಷ್ಟಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡಬಹುದು. ಈ ಫಂಡ್‌ಗಳಲ್ಲಿ ಲಿಕ್ವಿಡಿಟಿ ಇದೆ. ಅಂದರೆ ಅಗತ್ಯ ಬಿದ್ದಾಗ ಇವುಗಳನ್ನು ಮಾರಿ ಹಣ ಗಳಿಸಬಹುದು.
- ರಿಟರ್ನ್ಸ್: ಕಳೆದ 10 ವರ್ಷಗಳಲ್ಲಿ ದೊಡ್ಡ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ಸರಾಸರಿ ವಾರ್ಷಿಕ ಆದಾಯವು 13-15 ಪ್ರತಿಶತದ ನಡುವೆ ಇರುತ್ತದೆ.
2. ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು:
- ಅಪಾಯದ ವಿವರ:ದೊಡ್ಡ ಕ್ಯಾಪ್ ಫಂಡ್‌ಗಳಿಗೆ ಹೋಲಿಸಿದರೆ, ಈ ಮಿಡ್ ಕ್ಯಾಪ್ ಫಂಡ್‌ಗಳು ಸ್ವಲ್ಪ ಅಪಾಯಕಾರಿಯಾಗಿರುತ್ತವೆ.
- ಲಿಕ್ವಿಡಿಟಿ, ಏರಿಳಿತ:ಮಿಡ್ ಕ್ಯಾಪ್ ಫಂಡ್‌ಗಳು ಮಾರುಕಟ್ಟೆಯಲ್ಲಿ ಮಧ್ಯಸ್ಥಿತಿ ಏರಿಳಿತ ಇರುತ್ತದೆ. ಲಿಕ್ವಿಡಿಟಿ ಕೂಡ ಕಡಿಮೆ ಇರುತ್ತದೆ.
- ರಿಟರ್ನ್ಸ್:ಕಳೆದ 10 ವರ್ಷಗಳಲ್ಲಿ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳ ಸರಾಸರಿ ವಾರ್ಷಿಕ ಆದಾಯವು ಶೇ 18-22 ರ ನಡುವೆ ಇರುತ್ತದೆ.
3. ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು:
- ಅಪಾಯದ ವಿವರ: ಸ್ಮಾಲ್ ಕ್ಯಾಪ್ ಫಂಡ್‌ಗಳು ಇತರ ಎರಡಕ್ಕಿಂತ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಆದರೆ, ಇವುಗಳಿಂದ ಬರುವ ಆದಾಯವೂ ತುಂಬಾ ಹೆಚ್ಚಿರುತ್ತದೆ.
- ಲಿಕ್ವಿಡಿಟಿ, ಏರಿಳಿತ: ಸ್ಮಾಲ್ ಕ್ಯಾಪ್ ಫಂಡ್‌ಗಳು ಮಾರುಕಟ್ಟೆ ತುಂಬಾ ಏರಿಳಿತವಾಗು ಸಾಧ್ಯತೆ ಇರುತ್ತದೆ. ಲಿಕ್ವಿಡಿಟಿ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ತುರ್ತು ಸಂದರ್ಭದಲ್ಲಿ ಅವುಗಳನ್ನು ಮಾರಾಟ ಮಾಡಿ ತಕ್ಷಣ ಹಣ ಪಡೆಯುವುದು ತುಂಬಾ ಕಷ್ಟವಾಗುತ್ತದೆ.
- ರಿಟರ್ನ್ಸ್: ಕಳೆದ 10 ವರ್ಷಗಳಲ್ಲಿ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ಸರಾಸರಿ ವಾರ್ಷಿಕ ಆದಾಯವು ಶೇ 18-22ರ ನಡುವೆ ಇರುತ್ತದೆ.
ಗಮನಿಸಿ: ಈ ಡೇಟಾವನ್ನು ಮೇ 2024ರಲ್ಲಿ ತೆಗೆದುಕೊಳ್ಳಲಾಗಿದೆ. ಈಕ್ವಿಟಿಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಆದ್ದರಿಂದ, ಪ್ರಸ್ತುತ ಆದಾಯವನ್ನು ಭವಿಷ್ಯದಲ್ಲಿ ಖಾತರಿಪಡಿಸಲಾಗುವುದಿಲ್ಲ. ಆದ್ದರಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು, ಸೆಬಿ ನೋಂದಾಯಿತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಹೆಚ್ಚು ಸೂಕ್ತ.
ಇದನ್ನೂ ಓದಿ:ನೆಮ್ಮದಿಯ ಜೀವನಕ್ಕೆ ಯೋಚಿಸುತ್ತಿದ್ದೀರಾ?; ಎಲ್ಲಿ, ಏಕೆ ಮತ್ತು ಹೇಗೆ ಹೂಡಿಕೆ ಮಾಡಬೇಕು ಎಂಬ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ! - Life Stage Investment Strategy