ಕರ್ನಾಟಕ

karnataka

ಜುಲೈ ತಿಂಗಳಲ್ಲಿ ಶೇ 10 ರಷ್ಟು GST ಸಂಗ್ರಹ ಹೆಚ್ಚಳ: 1.74 ಲಕ್ಷ ಕೋಟಿಯಿಂದ 1.82 ಲಕ್ಷ ಕೋಟಿಗೆ ಜಿಗಿತ - GST collections surged

By ETV Bharat Karnataka Team

Published : Aug 2, 2024, 7:14 AM IST

ಜುಲೈ ತಿಂಗಳಲ್ಲಿ 1.82ಲಕ್ಷ ಕೋಟಿ ಜಿಎಸ್​​ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಅಂಕಿ- ಅಂಶಗಳಿಂದ ತಿಳಿದು ಬಂದಿದೆ. ಇದು ಕಳೆದ ತಿಂಗಳ ಅಂದರೆ ಜೂನ್​ನ ಸಂಗ್ರಹಕ್ಕಿಂತ ಶೇ 10 ರಷ್ಟು ಹೆಚ್ಚಳ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

July GST collections surge 10.3 pc to Rs 1.82 lakh crore
ಜುಲೈ ತಿಂಗಳಲ್ಲಿ ಶೇ 10 ರಷ್ಟು GST ಸಂಗ್ರಹ ಹೆಚ್ಚಳ: 1.74ಲಕ್ಷ ಕೋಟಿಯಿಂದ 1.82 ಲಕ್ಷ ಕೋಟಿಗೆ ಏರಿಕೆ (IANS)

ನವದೆಹಲಿ:ಭಾರತದ ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿಯ ಸಂಗ್ರಹವು ಜುಲೈನಲ್ಲಿ ಶೇ.10.3 ರಷ್ಟು ಏರಿಕೆಯಾಗಿ 1.82 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಇಲಾಖೆಯಿಂದ ಗುರುವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ.

ಹಿಂದಿನ ತಿಂಗಳು 1.74 ಲಕ್ಷ ಕೋಟಿ ರೂಪಾಯಿ ಜಿಎಸ್​​ಟಿ ಸಂಗ್ರಹವಾಗಿದ್ದರೆ, ಈ ಬಾರಿ ಶೇ 10ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ 1.82ಲಕ್ಷ ಕೋಟಿ ರೂಗಳಿಗೆ ಏರಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಒಟ್ಟು GST ಸಂಗ್ರಹ 7.39 ಲಕ್ಷ ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 10.2 ರಷ್ಟು ಜಿಗಿತ ಕಂಡಿದೆ.

ಜುಲೈನಲ್ಲಿ ದೇಶೀಯ ಸಂಗ್ರಹಣೆಗಳು ಶೇಕಡಾ 8.9 ರಷ್ಟು ಏರಿಕೆಯಾಗಿದ್ದು, ಆಮದುಗಳಿಂದ ಜಿಎಸ್ಟಿ ಆದಾಯವು ಶೇಕಡಾ 14.2 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಮತ್ತೊಂದೆಡೆ, ಅಧಿಕಾರಿಗಳು ಕ್ಲೈಮ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವುದರಿಂದ ಮರುಪಾವತಿಗಳು ಹಿಂದಿನ ವರ್ಷದ ಅದೇ ಅವಧಿಗಿಂತ 19 ಪ್ರತಿಶತ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಒಟ್ಟು 16,283 ಕೋಟಿ ರೂಪಾಯಿ ಮರುಪಾವತಿಯಲ್ಲಿ 11,566 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದೆ. 1.66 ಲಕ್ಷ ಕೋಟಿಗಳಲ್ಲಿ ನಿವ್ವಳ ದೇಶೀಯ ಆದಾಯವು ಕಳೆದ ಜುಲೈನ ರೂ 1.45 ಲಕ್ಷ ಕೋಟಿಗಿಂತ 14.4 ಶೇಕಡಾ ಹೆಚ್ಚಾಗಿದೆ. ದೇಶದ ದೃಢವಾದ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ತೆರಿಗೆ ಅನುಸರಣೆಯನ್ನು ಪ್ರತಿಬಿಂಬಿಸುವ GST ಸಂಗ್ರಹಣೆ ಸ್ಥಿರವಾಗಿ ಏರುತ್ತಿವೆ ಮತ್ತು ಏಪ್ರಿಲ್‌ನಲ್ಲಿ ದಾಖಲೆಯ 2.1 ಲಕ್ಷ ಕೋಟಿ ರೂ. ಜಿಎಸ್​​ಟಿ ಸಂಗ್ರಹವಾಗಿತ್ತು.

ಜುಲೈ 23 ರಂದು ಹಣಕಾಸು ಸಚಿವೆ ನಿರಾಮಲಾ ಸೀತಾರಾಮನ್ ಅವರು ಮಂಡಿಸಿದ 2024-25ರ ಕೇಂದ್ರ ಬಜೆಟ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯ ಗುರಿಯನ್ನು ಹೊಂದಿದೆ ಎಂದು ಪ್ರಕಟಿಸಿದ್ದರು. ಹಣಕಾಸು ಸಚಿವರು ಜಿಎಸ್‌ಟಿ ಆಡಳಿತವು ಸ್ವಾತಂತ್ರ್ಯಾ ನಂತರದ ಅತ್ಯಂತ ದೂರಗಾಮಿ ತೆರಿಗೆ ಸುಧಾರಣೆಯ ಕ್ರಮ ಎಂದು ಬಣ್ಣಿಸಿದ್ದರು, ಜಿಎಸ್​​ಟಿ ನೀತಿಯು ಅದ್ಭುತ ಯಶಸ್ಸು ಕಂಡಿದೆ ಎಂದು ಸಹ ಅವರು ಹೇಳಿದ್ದರು.

ಕಳೆದ ತಿಂಗಳು ಜಿಎಸ್‌ಟಿ ಜಾರಿಯಾಗಿ ಏಳು ವರ್ಷ ಪೂರ್ಣಗೊಂಡಿದೆ. ಜಿಎಸ್‌ಟಿ ತೆರಿಗೆದಾರರ ಮೂಲದಿಂದ ಏಪ್ರಿಲ್ 2018 ರಲ್ಲಿ 1.05 ಕೋಟಿ ಸಂಗ್ರಹವಾಗುತ್ತಿತ್ತು. ಅದೀಗ 2024 ರ ಏಪ್ರಿಲ್‌ನಲ್ಲಿ 1.46 ಕೋಟಿಗೆ ಏರಿಕೆಯಾಗಿದೆ. ಸಣ್ಣ ತೆರಿಗೆದಾರರಿಗೆ ಅನುಸರಣೆ ಹೊರೆ ಕಡಿಮೆಯಾಗಿದೆ ಮತ್ತು 2023-24ರ ಆರ್ಥಿಕ ವರ್ಷದಲ್ಲಿ 2 ಕೋಟಿ ರೂ.ವರೆಗಿನ ಒಟ್ಟು ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರಿಗೆ ವಾರ್ಷಿಕ ರಿಟರ್ನ್ ಫೈಲಿಂಗ್ ಅಗತ್ಯ ಇಲ್ಲ. ಹಾಗೂ ಅದನ್ನು ಮನ್ನಾ ಮಾಡಲು GST ಕೌನ್ಸಿಲ್ ಶಿಫಾರಸು ಮಾಡಿದೆ.

ಇದನ್ನು ಓದಿ:ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಸ್ವಪ್ನಿಲ್​ ಕುಸಾಲೆ ​ - Third medal for India in Olympics

ABOUT THE AUTHOR

...view details