ಕರ್ನಾಟಕ

karnataka

ETV Bharat / business

4 ತಿಂಗಳಲ್ಲಿ 1.6 ಕೋಟಿ ಚಂದಾದಾರರನ್ನು ಕಳೆದುಕೊಂಡ ಜಿಯೋ: ಬಿಎಸ್​ಎನ್​ಎಲ್​ ಗ್ರಾಹಕರ ಸಂಖ್ಯೆ ಹೆಚ್ಚಳ - MOBILE SUBSCRIBERS IN INDIA

ರಿಲಯನ್ಸ್​ ಜಿಯೋ ನಾಲ್ಕು ತಿಂಗಳಲ್ಲಿ ಸುಮಾರು 1.65 ಕೋಟಿ ಚಂದಾದಾರರನ್ನು ಕಳೆದುಕೊಂಡಿದೆ.

4 ತಿಂಗಳಲ್ಲಿ 1.6 ಕೋಟಿ ಚಂದಾದಾರರನ್ನು ಕಳೆದುಕೊಂಡ ಜಿಯೋ
ಜಿಯೋ (IANS)

By ETV Bharat Karnataka Team

Published : Dec 23, 2024, 6:51 PM IST

ನವದೆಹಲಿ: ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 1.65 ಕೋಟಿ ಚಂದಾದಾರರನ್ನು ಕಳೆದುಕೊಂಡಿದೆ. ಜಿಯೋ ಅಕ್ಟೋಬರ್​ನಲ್ಲಿ 37.6 ಲಕ್ಷ, ಸೆಪ್ಟೆಂಬರ್ 2024 ರಲ್ಲಿ 79 ಲಕ್ಷ, ಆಗಸ್ಟ್ 2024 ರಲ್ಲಿ 40 ಲಕ್ಷ ಮತ್ತು ಜುಲೈ 2024 ರಲ್ಲಿ 7.58 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಂಕಿಅಂಶಗಳ ಪ್ರಕಾರ, ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ ಟೆಲ್ ಅಕ್ಟೋಬರ್​ನಲ್ಲಿ ಸುಮಾರು 24 ಲಕ್ಷ ಚಂದಾದಾರರನ್ನು ಗಳಿಸಿದೆ. ಏರ್ ಟೆಲ್ ಆಗಸ್ಟ್ 2024 ರಲ್ಲಿ 24 ಲಕ್ಷ ಮತ್ತು ಜುಲೈ 2024 ರಲ್ಲಿ 16 ಲಕ್ಷ ಚಂದಾದಾರರನ್ನು ಕಳೆದುಕೊಂಡಿತ್ತು.

ವೊಡಾಫೋನ್ ಐಡಿಯಾ ಸೆಪ್ಟೆಂಬರ್ ನಲ್ಲಿ 15.5 ಲಕ್ಷ ಮತ್ತು ಅಕ್ಟೋಬರ್​ನಲ್ಲಿ 19 ಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ. ಜುಲೈನಲ್ಲಿ ಮೊಬೈಲ್ ಕರೆ ದರಗಳನ್ನು ಹೆಚ್ಚಿಸಿದ್ದು ಚಂದಾದಾರರ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಜುಲೈನಲ್ಲಿ ಜಾರಿಗೆ ಬಂದ 2024 ರ ಮಧ್ಯದಲ್ಲಿ ಕಂಪನಿಗಳು ಸುಂಕ ಹೆಚ್ಚಳ ಮಾಡಿರುವುದು ಖಾಸಗಿ ಟೆಲಿಕಾಂ ಕಂಪನಿಗೆ ಚಂದಾದಾರರ ಸಂಖ್ಯೆಯಲ್ಲಿನ ಕುಸಿತಕ್ಕೆ ಕಾರಣವಾಗಿದೆ.

ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹೊಸ ಚಂದಾದಾರರನ್ನು ಪಡೆಯುತ್ತಿದ್ದು, ಕಂಪನಿಗೆ ಅಕ್ಟೋಬರ್​ನಲ್ಲಿ ಐದು ಲಕ್ಷ ಗ್ರಾಹಕರು ಸೇರ್ಪಡೆಯಾಗಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಬಿಎಸ್ಎನ್ಎಲ್ ಗೆ 68 ಲಕ್ಷಕ್ಕೂ ಹೆಚ್ಚು ಚಂದಾದಾರರು ಸೇರಪಡೆಯಾಗಿದ್ದಾರೆ. ಅಕ್ಟೋಬರ್ ತಿಂಗಳ ಅಂಕಿಅಂಶಗಳ ಪ್ರಕಾರ, ರಿಲಯನ್ಸ್ ಜಿಯೋ 47.48 ಕೋಟಿ ಚಂದಾದಾರರನ್ನು ಹೊಂದಿದೆ. ಭಾರ್ತಿ ಏರ್ ಟೆಲ್ 28.7 ಕೋಟಿ, ವೊಡಾಫೋನ್ ಐಡಿಯಾ 12.5 ಕೋಟಿ ಮತ್ತು ಬಿಎಸ್ಎನ್ಎಲ್ 3.6 ಕೋಟಿ ಚಂದಾದಾರರನ್ನು ಹೊಂದಿದೆ.

ಒಟ್ಟಾರೆ ಮಾರುಕಟ್ಟೆ ಪಾಲು ನೋಡುವುದಾದರೆ, ರಿಲಯನ್ಸ್ ಜಿಯೋ ಶೇಕಡಾ 39.99 ರಷ್ಟು ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರ್ತಿ ಏರ್ ಟೆಲ್ ಶೇಕಡಾ 33.50 ರಷ್ಟು ಪಾಲು ಹೊಂದಿದೆ. ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಕ್ರಮವಾಗಿ ಶೇಕಡಾ 18.30 ಮತ್ತು ಶೇಕಡಾ 8.05 ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿವೆ.

ಅಕ್ಟೋಬರ್ ಅಂತ್ಯದ ವೇಳೆಗೆ ಒಟ್ಟು ವೈರ್ ಲೆಸ್ ಚಂದಾದಾರರ ಸಂಖ್ಯೆ 1,150.42 ಮಿಲಿಯನ್ ಆಗಿದ್ದು, ಮಾಸಿಕ ಶೇಕಡಾ 0.29 ರಷ್ಟು ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ.

ಇದನ್ನೂ ಓದಿ : ₹9,823 ಕೋಟಿ ಹೂಡಿಕೆಯ ಯೋಜನೆಗಳಿಗೆ ಸಿಎಂ ಅಸ್ತು: ರಾಜ್ಯದಲ್ಲಿ 5,605 ಉದ್ಯೋಗ ಸೃಷ್ಟಿ - KARNATAKA INVESTMENT PROJECTS

ABOUT THE AUTHOR

...view details