ಕರ್ನಾಟಕ

karnataka

ETV Bharat / business

ಕಳೆದ ವಾರ 172 ದಶಲಕ್ಷ ಡಾಲರ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟ್​ಅಪ್​ಗಳು - STARTUPS - STARTUPS

ಕಳೆದ ವಾರದ ಅವಧಿಯಲ್ಲಿ ಭಾರತದ ಸ್ಟಾರ್ಟ್​ಅಪ್​ಗಳು 172.71 ದಶಲಕ್ಷ ಡಾಲರ್​ಗೂ ಅಧಿಕ ಮೊತ್ತದ ಬಂಡವಾಳ ನಿಧಿ ಸಂಗ್ರಹಿಸಿವೆ.

Over $172 million in funding raised by 30 Indian startups last week
Over $172 million in funding raised by 30 Indian startups last week

By ETV Bharat Karnataka Team

Published : Apr 7, 2024, 3:51 PM IST

ನವದೆಹಲಿ: ಭಾರತೀಯ ಸ್ಟಾರ್ಟ್ಅಪ್​ಗಳು ಸಾಮಾನ್ಯ ವೇಗದಲ್ಲಿ ನಿಧಿ ಸಂಗ್ರಹಿಸುವುದನ್ನು ಮುಂದುವರಿಸಿದ್ದು, ಕಳೆದ ವಾರ 30 ಸ್ಟಾರ್ಟ್ಅಪ್​ಗಳು ದೇಶದಲ್ಲಿ 172.71 ದಶಲಕ್ಷ ಡಾಲರ್​ಗೂ ಅಧಿಕ ಮೊತ್ತದ ಬಂಡವಾಳ ನಿಧಿ ಪಡೆದುಕೊಂಡಿವೆ. ಇದರಲ್ಲಿ ಎಂಟು ಬೆಳವಣಿಗೆಯ ಹಂತದ ಡೀಲ್​ಗಳು ಮತ್ತು 16 ಆರಂಭಿಕ ಹಂತದ ಡೀಲ್​ಗಳು ಸೇರಿವೆ ಎಂದು ಎನ್ ಟ್ರಾಕರ್ ವರದಿ ಮಾಡಿದೆ.

ಆರಂಭಿಕ ಹಂತದ ಕನಿಷ್ಠ ಆರು ಸ್ಟಾರ್ಟ್ಅಪ್​ಗಳು ತಾವು ಸಂಗ್ರಹಿಸಿದ ಮೊತ್ತವನ್ನು ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್ 25 ರಿಂದ 30 ರ ವಾರದಲ್ಲಿ ಸುಮಾರು 17 ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್​ಗಳು ಒಟ್ಟಾಗಿ ಸುಮಾರು 125.73 ಮಿಲಿಯನ್ ಡಾಲರ್ ಸಂಗ್ರಹಿಸಿವೆ. ಬೆಳವಣಿಗೆಯ ಹಂತದ ಡೀಲ್​ಗಳಲ್ಲಿ ಎಂಟು ಸ್ಟಾರ್ಟ್ಅಪ್​ಗಳು ಕಳೆದ ವಾರ 130.1 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿವೆ.

ಭವಿಶ್ ಅಗರ್ವಾಲ್ ನೇತೃತ್ವದ ಓಲಾ ಎಲೆಕ್ಟ್ರಿಕ್ ಅತಿ ಹೆಚ್ಚು 50 ಮಿಲಿಯನ್ ಡಾಲರ್ ಸಾಲ ನಿಧಿಯನ್ನು ಪಡೆದುಕೊಂಡಿದೆ. ಹೈಪರ್ ಲೋಕಲ್ ಮಾರ್ಕೆಟಿಂಗ್-ಟು-ಕಾಮರ್ಸ್ ಸಾಫ್ಟ್ ವೇರ್ ಪ್ಲಾಟ್​ಫಾರ್ಮ್ ಸಿಂಗಲ್ ಇಂಟರ್ಫೇಸ್, ಎನ್​ಬಿಎಫ್​ಸಿ ಇನ್ಫಿನಿಟಿ ಫಿನ್ ಕಾರ್ಪ್, ಹೌಸಿಂಗ್ ಫೈನಾನ್ಸ್ ಕಂಪನಿ ನಿವಾರಾ ಹೋಮ್ ಫೈನಾನ್ಸ್, ಪೇಮೆಂಟ್ ಗೇಟ್ ವೇ ಮತ್ತು ಪಾಯಿಂಟ್ ಆಫ್ ಸೇಲ್ಸ್ ಪ್ರೊವೈಡರ್ ಇನ್ನೋವಿಟಿ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮೂಲಸೌಕರ್ಯ ಸಂಸ್ಥೆ ಎಂ 2 ಪಿ ಫಿನ್​ಟೆಕ್ ಕ್ರಮವಾಗಿ $ 30 ಮಿಲಿಯನ್, $ 26 ಮಿಲಿಯನ್, $ 10 ಮಿಲಿಯನ್, $ 4.8 ಮಿಲಿಯನ್ ಮತ್ತು $ 4.2 ಮಿಲಿಯನ್ ನಿಧಿ ಪಡೆದುಕೊಂಡಿವೆ.

ಇದಲ್ಲದೆ 16 ಆರಂಭಿಕ ಹಂತದ ಸ್ಟಾರ್ಟ್ಅಪ್​ಗಳು ಒಟ್ಟಾಗಿ 42.61 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿವೆ. ಡಿ 2 ಸಿ ಆರೋಗ್ಯ ಮತ್ತು ವೆಲ್​ನೆಸ್ ಬ್ರಾಂಡ್ ಟ್ರಾಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬಳಸಿದ ದ್ವಿಚಕ್ರ ವಾಹನಗಳ ಫುಲ್-ಸ್ಟ್ಯಾಕ್ ರಿಟೇಲ್ ವ್ಯಾಪಾರ ಉದ್ಯಮ ಬೀಪ್​ಕಾರ್ಟ್, ಎಐ ಪ್ಲಾಟ್​ಫಾರ್ಮ್ ಸಿಫ್ಟ್ ಹಬ್, ಡೀಪ್-ಟೆಕ್ ಸ್ಟಾರ್ಟ್ಅಪ್ ಪ್ಲಾನಿಸ್ ಮತ್ತು ಫುಲ್-ಸ್ಟ್ಯಾಕ್ ಮೆಟಲ್ ಸಪ್ಲೈ-ಚೈನ್ ಪ್ಲಾಟ್ ಫಾರ್ಮ್ ಮೆಟಲ್ ಬುಕ್ ನಂತರದ ಸ್ಥಾನಗಳಲ್ಲಿವೆ.

ನಗರವಾರು ನೋಡುವುದಾದರೆ, ಬೆಂಗಳೂರು ಮೂಲದ ಸ್ಟಾರ್ಟ್ಅಪ್​ಗಳು 11 ಫಂಡಿಂಗ್​ ಡೀಲ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮುಂಬೈ, ದೆಹಲಿ-ಎನ್​ಸಿಆರ್, ಚೆನ್ನೈ ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ : ಇವಿ ಉತ್ಪಾದನಾ ಘಟಕ ಸ್ಥಾಪನೆ: ಸ್ಥಳ ಪರಿಶೀಲನೆಗಾಗಿ ಭಾರತಕ್ಕೆ ಆಗಮಿಸಲಿದೆ ಟೆಸ್ಲಾ ತಂಡ - TESLA

For All Latest Updates

ABOUT THE AUTHOR

...view details