ಕರ್ನಾಟಕ

karnataka

ETV Bharat / business

ಭಾರತದ ಜಿಡಿಪಿ ಬೆಳವಣಿಗೆ ಶೇ 6.8ರ ದರದಲ್ಲಿ ಮುಂದುವರಿಕೆ: ಎಸ್&ಪಿ ರೇಟಿಂಗ್ಸ್ ಅಂದಾಜು - India GDP Growth - INDIA GDP GROWTH

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 6.8ರಲ್ಲಿ ಮುಂದುವರಿಯಲಿದೆ ಎಂದು ಎಸ್‌&ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ.

ಭಾರತದ ಜಿಡಿಪಿ ಬೆಳವಣಿಗೆ ಶೇ 6.8ರ ದರದಲ್ಲಿ ಮುಂದುವರಿಕೆ
ಸಾಂದರ್ಭಿಕ ಚಿತ್ರ (IANS)

By PTI

Published : Jun 24, 2024, 3:00 PM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಬೆಳವಣಿಗೆಯ ಮುನ್ಸೂಚನೆಯನ್ನು ಶೇ 6.8ಕ್ಕೆ ಉಳಿಸಿಕೊಂಡಿರುವ ಎಸ್&ಪಿ ಗ್ಲೋಬಲ್ ರೇಟಿಂಗ್ಸ್, ಹೆಚ್ಚಿನ ಬಡ್ಡಿದರಗಳು ಮತ್ತು ಕಡಿಮೆ ವಿತ್ತೀಯ ಉತ್ತೇಜನವು ಬೇಡಿಕೆಯನ್ನು ತಗ್ಗಿಸಲಿದೆ ಎಂದು ಹೇಳಿದೆ. 2023-24ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ 8.2ರಷ್ಟು ಬೆಳವಣಿಗೆಯೊಂದಿಗೆ ಭಾರತದ ಆರ್ಥಿಕ ಬೆಳವಣಿಗೆಯು ಮೇಲ್ಮುಖವಾಗಿ ಚಲಿಸಲಿದೆ ಎಂದು ಎಸ್&ಪಿ ಗ್ಲೋಬಲ್ ರೇಟಿಂಗ್ಸ್ ಏಷ್ಯಾ ಪೆಸಿಫಿಕ್​ ಆರ್ಥಿಕ ದೃಷ್ಟಿಕೋನ (Outlook for Asia Pacific) ವರದಿಯಲ್ಲಿ ತಿಳಿಸಿದೆ.

"ಹೆಚ್ಚಿನ ಬಡ್ಡಿದರಗಳು ಮತ್ತು ಕಡಿಮೆ ಹಣಕಾಸಿನ ಬೇಡಿಕೆಯೊಂದಿಗೆ ಈ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಶೇಕಡಾ 6.8ಕ್ಕೆ ಇಳಿಕೆಯಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಅದು ಹೇಳಿದೆ. 2025-26 ಮತ್ತು 2026-27ರ ಹಣಕಾಸು ವರ್ಷಗಳಲ್ಲಿ, ಭಾರತದ ಜಿಡಿಪಿ ಬೆಳವಣಿಗೆಯ ದರವು ಕ್ರಮವಾಗಿ ಶೇಕಡಾ 6.9 ಮತ್ತು ಶೇಕಡಾ 7ರಷ್ಟು ಇರಬಹುದು ಎಂದು ಅಂದಾಜಿಸಿದೆ.

ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಾಗುವ ಮತ್ತು ಹಣದುಬ್ಬರವು ಕಡಿಮೆಯಾಗುವ ದೃಷ್ಟಿಕೋನದಿಂದ ಪ್ರಸಕ್ತ 2025ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.2ಕ್ಕೆ ವಿಸ್ತರಿಸುತ್ತದೆ ಎಂದು ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಂದಾಜಿಸಿತ್ತು. ಆದರೆ ಇದಕ್ಕೆ ಹೋಲಿಸಿದರೆ ಎಸ್&ಪಿಯ ಜಿಡಿಪಿ ಬೆಳವಣಿಗೆ ಅಂದಾಜುಗಳು ಕಡಿಮೆಯಾಗಿವೆ.

ಮತ್ತೊಂದು ರೇಟಿಂಗ್ ಏಜೆನ್ಸಿ ಫಿಚ್, 2025ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯನ್ನು ಶೇಕಡಾ 7.2ರಷ್ಟು ಅಂದಾಜಿಸಿದರೆ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಭಾರತದ ಜಿಡಿಪಿ ಶೇಕಡಾ 7ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಿದೆ. ಮೂಡೀಸ್ ರೇಟಿಂಗ್ಸ್ ಮತ್ತು ಡೆಲಾಯ್ಟ್ ಇಂಡಿಯಾ 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇಕಡಾ 6.6ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಿದರೆ, ಮೋರ್ಗನ್ ಸ್ಟಾನ್ಲಿ ಶೇಕಡಾ 6.8ರಷ್ಟು ಬೆಳವಣಿಗೆಯ ದರವನ್ನು ಅಂದಾಜಿಸಿದೆ.

ಚೀನಾದ ಆರ್ಥಿಕತೆಯ ಅಂದಾಜುಗಳನ್ನು ನೋಡುವುದಾದರೆ- ಎಸ್&ಪಿ 2024ರ ಚೀನಾದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 4.6ರಿಂದ ಶೇಕಡಾ 4.8ಕ್ಕೆ ಏರಿಸಿದೆ. ಆದರೆ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕತೆ ಅನುಕ್ರಮವಾಗಿ ಮಂದಗತಿಯಾಗಲಿದೆ ಎಂದು ಹೇಳಿದೆ. ಕಡಿಮೆ ಬಳಕೆ ಮತ್ತು ದೃಢವಾದ ಉತ್ಪಾದನಾ ಹೂಡಿಕೆಯ ಸಂಯೋಜನೆಯು ಬೆಲೆಗಳು ಮತ್ತು ಲಾಭಾಂಶಗಳ ಮೇಲೆ ಅನುಕೂಲಕರ ಪರಿಣಾಮ ಬೀರಲಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಇನ್ಮುಂದೆ ದುಬಾರಿಯಾಗಲಿವೆ ಹೀರೊ ಬೈಕ್, ಸ್ಕೂಟರ್: ಜುಲೈ 1ರಿಂದಲೇ ಹೊಸ ದರ ಜಾರಿ! - Hero MotoCorp price hike

ABOUT THE AUTHOR

...view details