CREDIT CARD ELIGIBILITY:ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ತುಂಬಾ ಕಾಮನ್. ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಅನೇಕರು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ, ಅದರ ಸದುಪಯೋಗ ಮಾಡಿಕೊಳ್ಳುತ್ತಾರೆ. ಉದ್ಯೋಗವಿದ್ದರೆ ಕ್ರೆಡಿಟ್ ಕಾರ್ಡ್ ಪಡೆಯುವುದು ಸುಲಭ. ಏಕೆಂದರೆ ಬ್ಯಾಂಕ್‌ಗಳು ಮತ್ತು ಕಂಪನಿಗಳು ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಮೊದಲು ನಿಮ್ಮ ಆದಾಯವನ್ನು ಪರಿಶೀಲನೆ ಮಾಡುತ್ತವೆ. ಅದು ಅವುಗಳ ಕರ್ತವ್ಯವೂ ಹೌದು. ಇದಕ್ಕಾಗಿ ನೀವು ಸಂಬಳದ ಸ್ಲಿಪ್ ಅಥವಾ ಐಟಿಆರ್ ದಾಖಲೆಗಳನ್ನು ಸಲ್ಲಿಸಬೇಕು. ಆದರೆ, ನಿರುದ್ಯೋಗಿಗಳಿಗೆ ಈ ಸೌಲಭ್ಯ ಉಂಟಾ? ಇಂತಹವರು ಕ್ರೆಡಿಟ್ ಕಾರ್ಡ್ ಅನ್ನು ಹೇಗೆ ಪಡೆಯುತ್ತಾರೆ ಅನ್ನುವುದನ್ನು ಈಗ ತಿಳಿದುಕೊಳ್ಳೋಣ
1. ಇತರ ಆದಾಯದ ಮೂಲಗಳನ್ನು ತೋರಿಸುವುದು :ನಿಮಗೆ ಕೆಲಸವಿಲ್ಲದಿದ್ದರೂ, ಇತರ ಆದಾಯದ ಮೂಲಗಳಿಂದ ಆದಾಯದ ವಿವರಗಳನ್ನು ಒದಗಿಸುವ ಮೂಲಕ ನೀವು ಕ್ರೆಡಿಟ್ ಕಾರ್ಡ್ ಪಡೆಯಬಹುದು. ಷೇರುಗಳು, ಮ್ಯೂಚುವಲ್ ಫಂಡ್‌ಗಳಿಂದ ಲಾಭಾಂಶ, ಸ್ವತಂತ್ರ ಉದ್ಯೋಗಗಳ ಮೂಲಕ ಗಳಿಸಿದ ಆದಾಯ, ಐಟಿಆರ್ ದಾಖಲೆಗಳನ್ನು ಸಲ್ಲಿಸಿ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿ ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು. ಇದನ್ನೆಲ್ಲಾ ಪರಿಗಣಿಸಿ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆಯೇ? ಅಥವಾ? ಇಲ್ಲವೇ ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತದೆ. ನೀವು ಎಲ್ಲ ಅರ್ಹತೆಗಳನ್ನು ಹೊಂದಿದ್ದರೆ, ಖಂಡಿತವಾಗಿಯೂ ಕ್ರೆಡಿಟ್ ಕಾರ್ಡ್ ಮಂಜೂರಾಗುತ್ತದೆ.
2. ಸ್ಥಿರ ಠೇವಣಿಗಳ ಮೇಲೆಯೂ ಸಿಗಲಿದೆ ಕ್ರೆಡಿಟ್ ಕಾರ್ಡ್:ನೀವು ನಿರುದ್ಯೋಗಿಗಳಾಗಿದ್ದರೂ ಕ್ರೆಡಿಟ್ ಕಾರ್ಡ್ ಪಡೆಯುವ ಇನ್ನೊಂದು ಮಾರ್ಗ ಎಂದರೆ, ನಿಮ್ಮ ನಿಶ್ಚಿತ ಠೇವಣಿಗಳ ಮೂಲಕ ಬ್ಯಾಂಕ್‌ಗಳು ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಈ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ FD ಯ ಶೇ 80-90ರ ಮಿತಿಯನ್ನು ಹೊಂದಿರುತ್ತವೆ. ನೀವು ಸಕಾಲದಲ್ಲಿ ಬಾಕಿ ಪಾವತಿಸದಿದ್ದರೆ, ಅದನ್ನು ನಿಮ್ಮ ನಿಶ್ಚಿತ ಠೇವಣಿಯಿಂದ ಮರು ಪಾವತಿ ಮಾಡಿಕೊಳ್ಳಲಾಗುತ್ತದೆ.
3. ಆಡ್ - ಆನ್ ಕ್ರೆಡಿಟ್ ಕಾರ್ಡ್ :ನಿಮ್ಮ ಕುಟುಂಬದಲ್ಲಿ ಯಾರಾದರೂ (ಪ್ರಾಥಮಿಕ) ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನೀವು ಅದರ ಮೇಲೆ ಆಡ್-ಆನ್ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ, ಆಡ್-ಆನ್ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾಥಮಿಕ ಕ್ರೆಡಿಟ್ ಕಾರ್ಡ್ ಹೊಂದಿರುವವರ ಸಂಗಾತಿಗೆ, ಪೋಷಕರು, ಒಡಹುಟ್ಟಿದವರು ಮತ್ತು ಮಕ್ಕಳಿಗೆ (18 ವರ್ಷಕ್ಕಿಂತ ಮೇಲ್ಪಟ್ಟವರು) ನೀಡಲಾಗುತ್ತದೆ. ಇಲ್ಲಿ ನೆನಪಿಡಬೇಕಾದ ಒಂದು ವಿಷಯ ಎಂದರೆ ಪ್ರಾಥಮಿಕ ಕಾರ್ಡ್‌ನಲ್ಲಿನ ಕ್ರೆಡಿಟ್ ಮಿತಿಯನ್ನು ವಿಭಜಿಸಿ ಆಡ್ - ಆನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇಲ್ಲಿ ಮಾಡಲಾಗುವ ಎಲ್ಲ ವ್ಯವಹಾರಗಳನ್ನು ಪ್ರಾಥಮಿಕ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸೇರಿಸಲಾಗುತ್ತದೆ.