Long Term Goals Of Millennials:ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸುವುದು, ಉತ್ತಮ ಮನೆ ಖರೀದಿ ಇಲ್ಲವೇ ಕಟ್ಟಿಸುವುದು ಹಾಗೂ ಆರ್ಥಿಕ ಸ್ವಾತಂತ್ರ್ಯ ಪಡೆಯುವುದು, ಇಂದಿನ ಭಾರತೀಯ ಯುವಕರ (ಮಿಲೇನಿಯಲ್ಸ್)ನ ಮೂರು ಪ್ರಮುಖ ದೀರ್ಘಕಾಲೀನ ಗುರಿಗಳಾಗಿವೆ ಎಂದು ಅಧ್ಯಯನವೊಂದು ಹೇಳಿದೆ.
ಯಾರು ಈ ಮಿಲೇನಿಯಲ್ಸ್?: 1980 ರ ದಶಕದ ಆರಂಭ ಮತ್ತು 1990 ರ ದಶಕದ ಅಂತ್ಯದ ನಡುವೆ ಜನಿಸಿದ ಜನರಿಗೆ ಸಂಬಂಧಿಸಿದ ಅಥವಾ ಅದನ್ನು ಸೂಚಿಸುವ ಪದವೇ ಈ ಮಿಲೇನಿಯಲ್ಸ್
Fib-Millennials Upgrade Index ಆಧರಿಸಿದ ಅಧ್ಯಯನದ ಪ್ರಕಾರ, ಸಮೀಕ್ಷೆಗೆ ಒಳಗಾದವರಲ್ಲಿ 41 ಪ್ರತಿಶತಕ್ಕಿಂತಲೂ ಹೆಚ್ಚು ಜನರು ಸ್ವಂತ ಮನೆ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗೊಂದು ಕನಸಿಟ್ಟುಕೊಂಡವರ ವಯಸ್ಸು 30 ವರ್ಷಕ್ಕಿಂತ ಕಡಿಮೆ. ಒಂಟಿ ಪುರುಷರಿಗೆ ಹೋಲಿಸಿದರೆ, ಒಂಟಿ ಮಹಿಳೆಯರು ಮನೆ ಖರೀದಿಸುವ ಮಹತ್ವಾಕಾಂಕ್ಷೆಯನ್ನು ಹೆಚ್ಚು ಹೊಂದಿರುತ್ತಾರೆ ಎಂಬುದರ ಬಗ್ಗೆ ಅಧ್ಯಯನದಲ್ಲಿ ಹೆಚ್ಚಿನ ಬೆಳಕು ಚಲ್ಲಲಾಗಿದೆ.
ಮೆಟ್ರೋ ಮತ್ತು ನಾನ್ ಮೆಟ್ರೋ ನಗರಗಳಲ್ಲಿ ಸುಮಾರು 8000 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಅವರಲ್ಲಿ ಸುಮಾರು 47 ಪ್ರತಿಶತದಷ್ಟು ಮಂದಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಶೇ 26 ರಷ್ಟು 30-35 ವರ್ಷ ವಯಸ್ಸಿನವರು, ಶೇ 14ರಷ್ಟು 35 - 40 ವರ್ಷ ವಯಸ್ಸಿನವರು ಮತ್ತು ಶೇ 13 ರಷ್ಟು 40 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ.
ಸ್ವಂತ ವ್ಯಾಪಾರ!;ಸಮೀಕ್ಷೆಗೆ ಒಳಗಾದ ಸುಮಾರು 21 ಪ್ರತಿಶತ ಜನರು ಸ್ವಂತ ವ್ಯವಹಾರ ಪ್ರಾರಂಭಿಸುವ ಅಥವಾ ತಮ್ಮ ವ್ಯಾಪಾರವನ್ನು ಬೆಳೆಸುವ ಗುರಿಯನ್ನು ಹೊಂದಿದ್ದಾರೆ. ಸುಮಾರು 19 ಪ್ರತಿಶತದಷ್ಟು ಜನರು ದೀರ್ಘಾವಧಿಯಲ್ಲಿ ಆರ್ಥಿಕ ಸ್ವಾತಂತ್ರ್ಯ ಸಾಧಿಸುವ ಹೆಬ್ಬಯಕೆ ಹೊಂದಿದ್ದಾರೆ ಎಂಬ ಅಂಶವನ್ನು ಅಧ್ಯಯನ ಒತ್ತಿ ಒತ್ತಿ ಹೇಳುತ್ತದೆ.
ಇವುಗಳು ಅಲ್ಪಾವಧಿಯ ಗುರಿಗಳು; ಮತ್ತೊಂದೆಡೆ, ಈ ಮಿಲೇನಿಯಲ್‌ಗಳು ಅಲ್ಪಾವಧಿಯ ಗುರಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತವೆ - ವೃತ್ತಿಪರ ಅಭಿವೃದ್ಧಿ, ಹೊಸ ಗ್ಯಾಜೆಟ್‌ಗಳು, ವಾಹನವನ್ನು ಖರೀದಿಸುವುದು; ದಂತ ಚಿಕಿತ್ಸೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆಯಂತಹ ಕ್ರಮಗಳನ್ನು ಒಳಗೊಂಡಿದೆ. ಅಲ್ಲದೇ , ವೈಯಕ್ತಿಕ ಬೆಳವಣಿಗೆ ಮತ್ತು ದೈಹಿಕ ಸಾಮರ್ಥ್ಯದಂತಹ ವಿಷಯಗಳಿಗೂ ಈಗಿನ ಯುವಕರು ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಒಳ್ಳೆಯ ಕೆಲಸ ಹೊಂದಿರಬೇಕು:ತೀವ್ರ ಪೈಪೋಟಿಯ ಹಿನ್ನೆಲೆಯಲ್ಲಿ ಮಹಾನಗರಗಳಲ್ಲಿ ಮಿಲೇನಿಯಲ್‌ಗಳು ಉತ್ತಮ ಉದ್ಯೋಗ ಪಡೆಯುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅಧ್ಯಯನದ ಪ್ರಕಾರ, ಸುಮಾರು 60 ಪ್ರತಿಶತದಷ್ಟು ಜನರು ಸರಿಯಾದ ಕೆಲಸವನ್ನು ಪಡೆಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.
"ನಮ್ಮ ಅಧ್ಯಯನವು ಇಂದಿನ ಯುವಕರ (ಮಿಲೇನಿಯಲ್ಸ್) ಪ್ರಬಲ ಆಕಾಂಕ್ಷೆಗಳನ್ನು ಬಹಿರಂಗಪಡಿಸಿದೆ. ಅಕ್ಷಯ್ ಮೆಹ್ರೋತ್ರಾ, ಸಹ-ಸಂಸ್ಥಾಪಕ, CEO, FIB, ಅವರು ಎದುರಿಸುತ್ತಿರುವ ಅಸಾಧಾರಣ ಸವಾಲುಗಳು ಮತ್ತು ಅವುಗಳಿಗೆ ಸಾಕಷ್ಟು ಆರ್ಥಿಕ ಪರಿಹಾರಗಳನ್ನು ತೋರಿಸಬೇಕಾದ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅನೇಕ ಮಿಲೇನಿಯಲ್‌ಗಳು ತಮ್ಮ ಅಲ್ಪಾವಧಿಯ ಆಕಾಂಕ್ಷೆಗಳನ್ನು ಪೂರೈಸಲು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲೂ ಸಿದ್ಧರಿದ್ದಾರೆ ಎಂದು ಅಕ್ಷಯ್ ಹೇಳಿದ್ದಾರೆ.
ಇವೇ ಮುಖ್ಯ ಅಡಚಣೆಗಳು:ಈ ಅಧ್ಯಯನದ ಪ್ರಕಾರ, ಸುಮಾರು 35 ಪ್ರತಿಶತ ಯುವಕರಿಗೆ ಕುಟುಂಬದ ವೆಚ್ಚಗಳೇ ಪ್ರಮುಖ ಅಡಚಣೆಯಾಗಿದೆ ಎಂದು ನಂಬುತ್ತಾರೆ. ಆದರೆ 15 ಪ್ರತಿಶತದಷ್ಟು ಜನರು ದೀರ್ಘಾವಧಿಯ ಯೋಜನೆಯ ಕೊರತೆಯೇ ನಮ್ಮ ಬೆಳವಣಿಗೆಗೆ ಮುಖ್ಯ ಅಡಚಣೆಯಾಗಿದೆ ಅಂತಿದ್ದಾರೆ. ಆದರೆ ಸುಮಾರು 39 ಪ್ರತಿಶತ ಜನರು ಉಳಿತಾಯ ಮತ್ತು ಅತ್ಯಂತ ವ್ಯವಸ್ಥಿತ ಹಣಕಾಸು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಆದರೆ 21 ಪ್ರತಿಶತದಷ್ಟು ಜನರು ಇತರ ಆದಾಯದ ಮೂಲಗಳನ್ನು ಹುಡುಕುತ್ತಿದ್ದಾರೆ. 29 ರಷ್ಟು ಜನರು ತಮ್ಮ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಹಣಕಾಸು ಸಂಸ್ಥೆಗಳಿಂದ ಸಾಲ (ಕ್ರೆಡಿಟ್) ತೆಗೆದುಕೊಳ್ಳುವುದಾಗಿ ಹೇಳಿದ್ದಾ
ಇದನ್ನು ಓದಿ:ಬ್ಯಾಂಕ್ ಆಫ್ ಬರೋಡದಲ್ಲಿ 4000 ಅಪ್ರೆಂಟಿಸ್ ಹುದ್ದೆಗಳು; ಕರ್ನಾಟಕದಲ್ಲಿ 537 ಹುದ್ದೆ ಭರ್ತಿಗೆ ಕ್ರಮ
ವಿದೇಶದಲ್ಲಿ ಉನ್ನತ ಶಿಕ್ಷಣದ ಕನಸಿಗೆ ಇದು ಸಕಾಲ: ಅಮೆರಿಕದ ಕಠಿಣ ನೀತಿಯ ನಡುವೆ ಗಮನಿಸಬೇಕಾದ ಅಂಶಗಳಿವು!