2011ರ ಜನಗಣತಿಯ ಪ್ರಕಾರ, 25 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತದ 18 ರಾಜ್ಯಗಳ ಬಳಕೆ ವೆಚ್ಚ ಮಾಹಿತಿ ಇಲ್ಲಿದೆ. ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳನ್ನು ಇದು ಒಳಗೊಂಡಿರುತ್ತದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಳಕೆಯ ಅಸಮಾನತೆಯು 2023-24ರಲ್ಲಿ ಬಹುತೇಕ ಎಲ್ಲಾ 18 ಪ್ರಮುಖ ರಾಜ್ಯಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ಗೃಹ ಬಳಕೆ ವೆಚ್ಚ ಸಮೀಕ್ಷೆಯ (ಎಚ್ಸಿಇಎಸ್) ವಿವರವಾದ ಫಲಿತಾಂಶಗಳು ತಿಳಿಸಿವೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್ಪಿಐ) ಈ ಸಮೀಕ್ಷೆಯನ್ನು ನಡೆಸಿದ್ದು, ಈ ವರದಿಯು ಆಗಸ್ಟ್, 2023 ರಿಂದ ಜುಲೈ, 2024 ರವರೆಗೆ ನಡೆಸಿದ ಗೃಹ ಬಳಕೆ ವೆಚ್ಚ ಸಮೀಕ್ಷೆಯನ್ನು ಆಧರಿಸಿದೆ.
ಕೌಟುಂಬಿಕ ಖರ್ಚಿನಲ್ಲಿ ಸರಾಸರಿ ಎಂಪಿಸಿಇ ಮತ್ತು ನಗರ-ಗ್ರಾಮೀಣ ವ್ಯತ್ಯಾಸಗಳು: ಕರ್ನಾಟಕದಲ್ಲಿ, ಸರಾಸರಿ ಎಂಪಿಸಿಇ ಮತ್ತು ಗ್ರಾಮೀಣ-ನಗರ ಬಳಕೆ ವೆಚ್ಚ 2022-23ರಲ್ಲಿ 4,397 ಮತ್ತು 7,666 ರೂ. ಆಗಿತ್ತು. ಇದು 2023-2024 ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರಮವಾಗಿ 4,903 ಮತ್ತು 8,076 ರೂ.ಗೆ ಏರಿಕೆಯಾಗಿವೆ.
ಪ್ರಮುಖ ರಾಜ್ಯಗಳಲ್ಲಿ, ಎಂಪಿಸಿಇ 2022-23 ಮತ್ತು 2023-24ರಲ್ಲಿ ಗ್ರಾಮೀಣ ಮತ್ತು ನಗರ ಎರಡೂ ವಲಯಗಳಲ್ಲಿ ಛತ್ತೀಸ್ ಗಢದಲ್ಲಿ ಅತ್ಯಂತ ಕಡಿಮೆಯಾಗಿದೆ (ಗ್ರಾಮೀಣ ಪ್ರದೇಶಗಳಿಗೆ; 2022-23ರಲ್ಲಿ 2,466 ರೂ. ಮತ್ತು 2023-24ರಲ್ಲಿ 2,739 ರೂ.; ನಗರ ಪ್ರದೇಶಗಳಿಗೆ; 2022-2ರಲ್ಲಿ 4,483 ರೂ. ಮತ್ತು 2023-24ರಲ್ಲಿ 4,927 ರೂ.) ಇದು ಕೇರಳದಲ್ಲಿ (2022-23ರಲ್ಲಿ 5,924 ರೂ., 2023-24ರಲ್ಲಿ 6,611 ರೂ.), ಮತ್ತು ತೆಲಂಗಾಣದಲ್ಲಿ (2022-23ರಲ್ಲಿ 8,158 ರೂ., 2023-24ರಲ್ಲಿ 8,978 ರೂ.) ನಗರ ಪ್ರದೇಶಗಳಲ್ಲಿ ಅತ್ಯಧಿಕವಾಗಿದೆ.
2022-23 (74%) ಮತ್ತು 2023-24 (65%) ರಲ್ಲಿ ಕರ್ನಾಟಕದಾದ್ಯಂತ ಸರಾಸರಿ ಎಂಪಿಸಿಇಯಲ್ಲಿ ನಗರ-ಗ್ರಾಮೀಣ ವ್ಯತ್ಯಾಸದಲ್ಲಿ ವ್ಯಾಪಕ ಅಂತರ ಇರುವುದನ್ನು ಗಮನಿಸಲಾಗಿದೆ. 2022-23ರ ಮಟ್ಟದಿಂದ 2023-24ರಲ್ಲಿ ನಗರ-ಗ್ರಾಮೀಣ ಅಂತರವು ಕುಸಿದಿದೆ.
2023-24ರಲ್ಲಿ ಅತ್ಯಂತ ಕಡಿಮೆ ನಗರ-ಗ್ರಾಮೀಣ ವೆಚ್ಚ ಅಂತರವು ಕೇರಳದಲ್ಲಿ (ಸುಮಾರು 18%) ಮತ್ತು ಜಾರ್ಖಂಡ್ನಲ್ಲಿ (ಸುಮಾರು 83%) ಕಂಡುಬಂದಿದೆ. ಕರ್ನಾಟಕದ ಗ್ರಾಮೀಣ ಸಾಮಾಜಿಕ ಗುಂಪಿನಲ್ಲಿ ಸರಾಸರಿ ಎಂಪಿಸಿಇ 4,903 ರೂ., ಎಸ್ಟಿ 4,590 ರೂ., ಎಸ್ಸಿ 4,620, ಒಬಿಸಿ 4,926 ರೂ. ಆಗಿದೆ. ಕರ್ನಾಟಕದ ನಗರ ಸಾಮಾಜಿಕ ಗುಂಪಿನಲ್ಲಿ ಸರಾಸರಿ ಎಂಪಿಸಿಇ 8,076 ರೂ., ಎಸ್ಟಿ 5,908 ರೂ., ಎಸ್ಸಿ 6,584, ಒಬಿಸಿ 7,971 ರೂ. ಆಗಿದೆ.
ಕರ್ನಾಟಕದ ಸಾಮಾಜಿಕ ಗುಂಪಿನಲ್ಲಿರುವ ಎಲ್ಲಾ ಗುಂಪುಗಳು: ಆಹಾರ ಮತ್ತು ಧಾನ್ಯಗಳ ಸೇವನೆಯಲ್ಲಿ ವ್ಯತ್ಯಾಸ: ರಾಜ್ಯಗಳಲ್ಲಿ ಪಶ್ಚಿಮ, ಉತ್ತರ ಮತ್ತು ದಕ್ಷಿಣದ ರಾಜ್ಯಗಳಾದ ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ, ಹರಿಯಾಣ, ಗುಜರಾತ್, ಆಂಧ್ರಪ್ರದೇಶ ತಲಾ ಮಾಸಿಕ ಬಳಕೆ ವೆಚ್ಚವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.
ಪ್ರಮುಖ ರಾಜ್ಯಗಳ ಒಟ್ಟು ಖರ್ಚಿನಲ್ಲಿ ಧಾನ್ಯಗಳು ಮತ್ತು ಆಹಾರದ ಒಟ್ಟಾರೆ ಶೇಕಡಾವಾರು ಪಾಲು: ಗ್ರಾಮೀಣ ಕುಟುಂಬಗಳ ಒಟ್ಟು ಬಳಕೆಯ ಖರ್ಚಿನಲ್ಲಿ ಆಹಾರದ ಪಾಲು 45.08% (ಕರ್ನಾಟಕ), 40.32% (ಕೇರಳದಲ್ಲಿ) ರಿಂದ 53.22% (ಅಸ್ಸಾಂ) ಹೀಗೆ ಬದಲಾಗುತ್ತದೆ. ನಗರ ವಲಯದಲ್ಲಿ, ಬಳಕೆಯ ಖರ್ಚಿನಲ್ಲಿ ಆಹಾರದ ಪಾಲು 37.67% (ಕರ್ನಾಟಕ), 36.14% (ಮಹಾರಾಷ್ಟ್ರದಲ್ಲಿ) ರಿಂದ 48.79% (ಬಿಹಾರದಲ್ಲಿ) ವರೆಗೆ ಬದಲಾಗುತ್ತದೆ.
ಗ್ರಾಮೀಣ ಭಾರತದಲ್ಲಿ ಒಟ್ಟು ಖರ್ಚಿನಲ್ಲಿ ಧಾನ್ಯಗಳ ಪಾಲು 4.78% (ಕರ್ನಾಟಕ), 2.56% (ಪಂಜಾಬ್) ರಿಂದ 7.90% (ಜಾರ್ಖಂಡ್) ವರೆಗೆ ಬದಲಾಗುತ್ತದೆ. ನಗರ ಭಾರತದಲ್ಲಿ, ಈ ಪಾಲು ಹರಿಯಾಣದಲ್ಲಿ 2.75% ರಿಂದ 5.84% (ಜಾರ್ಖಂಡ್ನಲ್ಲಿ) ವರೆಗೆ ಬದಲಾಗುತ್ತದೆ.
2023-24ರಲ್ಲಿ ಧಾನ್ಯಗಳ ಒಟ್ಟು ಬಳಕೆಯಲ್ಲಿ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳ ಶೇಕಡಾವಾರು ಪಾಲು, ಕರ್ನಾಟಕದಲ್ಲಿ ಸೇವಿಸುವ ಧಾನ್ಯದ ಶೇಕಡಾ 64.29 ರಷ್ಟು ಅಕ್ಕಿಗಾಗಿ ಖರ್ಚು ಮಾಡಲಾಗುತ್ತದೆ. 13.98 ರಷ್ಟು ಗೋಧಿ ಮತ್ತು 21.7 ಪ್ರತಿಶತದಷ್ಟು ಇತರ ಧಾನ್ಯಗಳಿಗೆ ಖರ್ಚು ಮಾಡಲಾಗುತ್ತದೆ. 2023-24ರಲ್ಲಿ ಕರ್ನಾಟಕದ ಒಟ್ಟು ತಲಾ ಧಾನ್ಯಗಳ ಬಳಕೆಯಲ್ಲಿ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳ ತಲಾ ಬಳಕೆಯ ಶೇಕಡಾವಾರು ಪಾಲು, ಅಕ್ಕಿ ಬಳಕೆಯಲ್ಲಿ 66.11% ಅಕ್ಕಿ ಬಳಕೆ ಮತ್ತು 18.39% ಗೋಧಿ ಮತ್ತು 15.5% ಇತರ ಧಾನ್ಯಗಳಿಗೆ ಖರ್ಚು ಮಾಡಲಾಗಿದೆ.
ಗ್ರಾಮೀಣ ಭಾರತದಲ್ಲಿ ಒಟ್ಟು ಖರ್ಚಿನಲ್ಲಿ ಧಾನ್ಯಗಳ ಪಾಲು 4.78% (ಕರ್ನಾಟಕ), 2.56% (ಪಂಜಾಬ್) ರಿಂದ 7.90% (ಜಾರ್ಖಂಡ್) ವರೆಗೆ ಬದಲಾಗುತ್ತದೆ. ನಗರ ಭಾರತದಲ್ಲಿ, ಈ ಪಾಲು ಹರಿಯಾಣದಲ್ಲಿ 2.75% ರಿಂದ 5.84% (ಜಾರ್ಖಂಡ್ನಲ್ಲಿ) ವರೆಗೆ ಬದಲಾಗುತ್ತದೆ.
ಗುಜರಾತ್, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 'ಹಾಲು ಮತ್ತು ಹಾಲಿನ ಉತ್ಪನ್ನಗಳ' ಪಾಲು ಗರಿಷ್ಠವಾಗಿದ್ದರೆ, ಕೇರಳದಲ್ಲಿ 'ಮೊಟ್ಟೆ, ಮೀನು ಮತ್ತು ಮಾಂಸ' ಹೆಚ್ಚಿನ ಕೊಡುಗೆಯನ್ನು ಹೊಂದಿದೆ. ನಗರ ವಲಯದಲ್ಲೂ, ಛತ್ತೀಸ್ ಗಢ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರಮುಖ ರಾಜ್ಯಗಳ ಒಟ್ಟು ಆಹಾರ ಖರ್ಚಿನಲ್ಲಿ ಐಟಂ ಗುಂಪಿನ ಪಾಲು ಗರಿಷ್ಠವಾಗಿದೆ. ಇಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗರಿಷ್ಠ ವೆಚ್ಚ ಮಾಡಲಾಗುತ್ತದೆ.