ನವದೆಹಲಿ: ಸಾಮಾನ್ಯವಾಗಿ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಂದ ಕೆಲವು ನಿರೀಕ್ಷಿತ ಕೌಶಲ್ಯಗಳನ್ನು ಸಂಸ್ಥೆಗಳು ಎದುರು ನೋಡುತ್ತವೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಬಹುತೇಕ ಉದ್ಯಮ ವಲಯಗಳು ಎದುರು ನೋಡುತ್ತಿರುವ ಪ್ರಮುಖ ಕೌಶಲ್ಯ ಎಂದರೆ ಅದು ವಾಹನ ಚಾಲನೆಯಾಗಿದೆ. ಇ- ಕಾಮರ್ಸ್, ನಿರ್ಮಾಣ, ಪ್ರವಾಸೋದ್ಯಮ ಮತ್ರು ಗ್ರಾಹಕ ಸೇವೆ ಸೇರಿದಂತೆ ಅನೇಕ ವಿವಿಧ ವಲಯಗಳು ಈ ಕೌಶಲ್ಯವನ್ನು ತಮ್ಮ ಉದ್ಯೋಗಿಗಳಿಂದ ಸಂಸ್ಥೆಗಳು ಆಪೇಕ್ಷಿಸುತ್ತಿವೆ ಎಂದು ವರದಿ ತಿಳಿಸಿದೆ.
ಇಂಡೀಡ್ ಅವರ ಗ್ಲೋಬಲ್ ಹೈರಿಂಗ್ ಪ್ರಕಾರ, ಶೇ 53ರಷ್ಟು ಉದ್ಯೋಗದಾತರು ಚಾಲನಾ ಸಾಮರ್ಥ್ಯ ಪ್ರಮುಖ್ಯತೆಯನ್ನು ಒತ್ತಿ ಹೇಳುವ ಜೊತೆಗೆ ಇದು ಅಪೇಕ್ಷಣೀಯ ಕೌಶಲ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮಾರ್ಚ್ 2023 ರಿಂದ ಮಾರ್ಚ್ 2024ರವರೆಗೆ ಶೇ 4ರಷ್ಟು ಉದ್ಯೋಗಗಳು ಚಾಲನೆಯನ್ನು ಬರದಿರುವ ಹಿನ್ನೆಲೆ ಉದ್ಯೋಗಿಗಳನ್ನು ಕೈಬಿಟ್ಟಿದೆ. ಚಾಲನೆ ಸಾಮರ್ಥ್ಯ ಹೊಂದಿದಲ್ಲಿ ಉದ್ಯೋಗ ಪಡೆಯುವ ಭರವಸೆ ಕೂಡ ಶೇ 10ರಷ್ಟು ಹೆಚ್ಚಿದೆ. ಉದ್ಯೋಗದಾತರು ಕೂಡ ಇದನ್ನು ಎದುರು ನೋಡುತ್ತಾರೆ ಎಂದು ವರದಿ ತಿಳಿಸಿದೆ.
ಈ ದತ್ತಾಂಶವೂ ಕೆಲವು ವಿರೋಧಾಭಾಸವನ್ನು ಎತ್ತಿ ತೋರಿಸುತ್ತದೆ. ಆದರೂ ಕಡಿಮೆ ಉದ್ಯೋಗಾವಕಾಶಗಳನ್ನು ತುಂಬಲು ಉತ್ಸುಕರಾಗಿರುವ ಉದ್ಯೋಗಾಕಾಂಕ್ಷಿಗಳು, ಈ ರೀತಿಯ ಹೊಸ ಉದ್ಯೋಗದ ಪ್ರಮುಖ ಪಾತ್ರಗಳನ್ನು ಹೊಂದುವ ಮೂಲಕ ಸರಿದೂಗಿಸಬಹುದಾಗಿದೆ ಎಂದು ಇಂಡೀಡ್ ಇಂಡಿಯಾದ ಸೇಲ್ಸ್ನ ಮುಖ್ಯಸ್ಥ ಶಶಿ ಕುಮಾರ್ ತಿಳಿಸಿದ್ದಾರೆ.