ಪ್ರಾಚೀನ ಕಾಲದಿಂದಲೂ ಭಾರತೀಯರು ಚಿನ್ನವನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸುತ್ತಾರೆ. ಅನಾದಿ ಕಾಲದಿಂದಲೂ ಜನರು ಬಂಗಾರವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಅಲ್ಲದೇ ಚಿನ್ನವನ್ನು ಉತ್ತಮ ಹೂಡಿಕೆಯ ಸಾಧನವಾಗಿ ಬಳಸಲಾಗುತ್ತದೆ. ಆದಾಗ್ಯೂ, ಚಿನ್ನಕ್ಕೆ ಹೋಲಿಸಿದರೆ, ವಜ್ರದ ಹರಳುಗಳನ್ನ ಭಾರತದಲ್ಲಿ ವಿಶಿಷ್ಟ ಹೂಡಿಕೆಯಾಗಿ ನೋಡಲಾಗುತ್ತದೆ. ಅದಕ್ಕಾಗಿಯೇ ಚಿನ್ನ ಮತ್ತು ವಜ್ರದ ಮೇಲೆ ಹೂಡಿಕೆ ಯಾವುದು ಉತ್ತಮ? ಯಾವುದರಲ್ಲಿ ಅಪಾಯ ಕಡಿಮೆ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ
ಸುಲಭ ಖರೀದಿ:ಚಿನ್ನವನ್ನು ಸುಲಭವಾಗಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಅಲ್ಲದೇ ಚಿನ್ನದ ಬೆಲೆ ಹಣದುಬ್ಬರ, ಆರ್ಥಿಕ ಪರಿಸ್ಥಿತಿಗಳು, ಬೇಡಿಕೆ ಮತ್ತು ಪೂರೈಕೆಯಂತಹ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಆದರೆ ವಜ್ರ?: ಮತ್ತೊಂದೆಡೆ, ವಜ್ರ ಉದ್ಯಮದಲ್ಲಿ ಖರೀದಿದಾರ ಮತ್ತು ಮಾರಾಟಗಾರರ ನಡುವೆ ಅನೇಕ ಮಧ್ಯವರ್ತಿಗಳಿರುತ್ತಾರೆ. ಅದಕ್ಕಾಗಿಯೇ ವಜ್ರಗಳನ್ನು ಖರೀದಿಸುವುದು ಸ್ವಲ್ಪ ಸವಾಲಿನ ಸಂಗತಿಯಾಗಿದೆ. ವಜ್ರದ ಬೆಲೆಯು ಸಾಮಾನ್ಯವಾಗಿ ಫ್ಯಾಷನ್, ಉದ್ಯಮದ ಪರಿಸ್ಥಿತಿಗಳು ಮತ್ತು ಗ್ರಾಹಕರ ಬೇಡಿಕೆಯಂತಹ ಅಂಶಗಳನ್ನು ಅವಲಂಬಿಸಿರುತ್ತದೆ.
- ಸ್ಥಿರ ಮಾರುಕಟ್ಟೆ:ಚಿನ್ನವು ವಿಶ್ವಾದ್ಯಂತ ಸ್ಥಿರ ಮಾರುಕಟ್ಟೆಯನ್ನು ಹೊಂದಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ಚಿನ್ನವನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ತುಂಬಾ ಸುಲಭ.
- ವಜ್ರಗಳ ಮೌಲ್ಯವು ಸ್ಪಷ್ಟತೆ, ಬಣ್ಣ, ಕ್ಯಾರೆಟ್ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಅವುಗಳನ್ನು ಮಾರಾಟ ಮಾಡುವುದು ಸ್ವಲ್ಪ ಕಷ್ಟ ಎಂದೇ ಹೇಳಬೇಕಾಗುತ್ತದೆ.
- ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಸಮಯದಲ್ಲಿಯೂ ಚಿನ್ನದ ಮೌಲ್ಯವು ಸ್ಥಿರವಾಗಿರುತ್ತದೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ಬಂಗಾರ ನೆರವಿಗೆ ಬರುತ್ತದೆ. ಹಣದುಬ್ಬರ ಮತ್ತು ಮಾರುಕಟ್ಟೆಯ ಏರಿಳಿತದ ಸಮಯದಲ್ಲೂ ಬಂಗಾರದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎಂದು ಹೇಳಬಹುದು.
- ಮತ್ತೊಂದೆಡೆ, ವಜ್ರದ ಬೆಲೆಗಳು ಏರಿಳಿತಗೊಳ್ಳುತ್ತವೆ. ಹಣದುಬ್ಬರದ ಸಮಯದಲ್ಲಿ ಚಿನ್ನಕ್ಕೆ ಹೋಲಿಸಿದರೆ ವಜ್ರದ ಮೇಲಿನ ಹೂಡಿಕೆಗಳು ರಕ್ಷಣಾತ್ಮಕವಾಗಿರುವುದಿಲ್ಲ.