ಕರ್ನಾಟಕ

karnataka

ETV Bharat / business

ಚಿನ್ನ, ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ: ಬಂಗಾರದ ದರದಲ್ಲಿ 1,530 ರೂ. ಇಳಿಕೆ, ಇಂದಿನ ಬೆಲೆ ಇಷ್ಟಿದೆ - GOLD RATE TODAY

ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರಗಳ ವಿವರ ಹೀಗಿದೆ.

ಬಂಗಾರದ ದರದಲ್ಲಿ ಭಾರಿ ಇಳಿಕೆ
ಬಂಗಾರದ ದರದಲ್ಲಿ ಭಾರಿ ಇಳಿಕೆ

By ETV Bharat Karnataka Team

Published : Apr 23, 2024, 1:43 PM IST

ಹೈದರಾಬಾದ್:ವಿವಾಹ ಕಾರ್ಯಕ್ರಮಗಳ ಹಿನ್ನೆಲೆ ಒಂದೇ ಸಮನೆ ಏರಿಕೆ ಗತಿಯಲ್ಲಿದ್ದ ಚಿನ್ನ, ಬೆಳ್ಳಿಯ ದರಗಳು ಮಂಗಳವಾರ ಭಾರೀ ಇಳಿಕೆ ಕಂಡಿವೆ. 73,690 ರೂಪಾಯಿ ಇದ್ದ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ಇಂದು 1,530 ರೂಪಾಯಿ ಇಳಿಕೆ ಕಂಡು, ಪ್ರಸ್ತುತ 72,160 ರೂಪಾಯಿಯಷ್ಟು ಬಿಕರಿಯಾಗುತ್ತಿದೆ. ಬೆಳ್ಳಿ ದರವೂ ತುಸು ಬದಲಾವಣೆ ಕಂಡಿದ್ದು, 2500 ರೂಪಾಯಿ ತಗ್ಗಿದ್ದು, ಕೆಜಿಗೆ 83,000 ರೂಪಾಯಿ ಇದೆ. ಸೋಮವಾರದ ಬೆಲೆ 85,500 ರೂಪಾಯಿ ಇತ್ತು.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ:

ಬೆಂಗಳೂರಿನಲ್ಲಿ10 ಗ್ರಾಂ ಚಿನ್ನದ ಬೆಲೆ 72,160 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.

ಮಂಗಳೂರಿನಲ್ಲಿ10 ಗ್ರಾಂ ಚಿನ್ನದ ಬೆಲೆ 72,160 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.

ಮೈಸೂರಿನಲ್ಲಿ10 ಗ್ರಾಂ ಚಿನ್ನದ ಬೆಲೆ 72,160 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.

ಹೈದರಾಬಾದ್​ನಲ್ಲಿ10 ಗ್ರಾಂ ಚಿನ್ನದ ಬೆಲೆ 72,160 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 82,485 ರೂ.

ಮುಂಬೈನಲ್ಲಿ10 ಗ್ರಾಂ ಚಿನ್ನದ ಬೆಲೆ 72,160 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,000 ರೂ.

ಗಮನಿಸಿ:ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಚಿನ್ನ ಮತ್ತು ಬೆಳ್ಳಿ ದರಗಳು ಕಾಲ ಕಾಲಕ್ಕೆ ಬದಲಾಗುತ್ತವೆ.

ಸ್ಪಾಟ್ ಗೋಲ್ಡ್ ಬೆಲೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ತೀವ್ರವಾಗಿ ಕುಸಿದಿವೆ. ಸೋಮವಾರ ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,370 ಡಾಲರ್‌ಗಳಷ್ಟಿತ್ತು. ಆದರೆ, ಮಂಗಳವಾರದ ವೇಳೆಗೆ ಅದು 67 ಡಾಲರ್‌ಗಳಷ್ಟು ಕಡಿಮೆಯಾಗಿ 2,303 ಡಾಲರ್‌ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 26.96 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?:ಕ್ರಿಪ್ಟೋ ಕರೆನ್ಸಿ ವಹಿವಾಟು ಮಂಗಳವಾರ ಭಾರಿ ಲಾಭದೊಂದಿಗೆ ಮುಂದುವರಿಯುತ್ತಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಮೌಲ್ಯಗಳು ಯಾವುವು?

ಕ್ರಿಪ್ಟೋ ಕರೆನ್ಸಿ ಈಗಿನ ಬೆಲೆ
ಬಿಟ್‌ಕಾಯಿನ್ 55,00,013 ರೂ.
ಎಥೆರಿಯಮ್ 2,57,620 ರೂ.
ಟೆಥರ್ 80.17 ರೂ.
ಬೈನಾನ್ಸ್ ಕಾಯಿನ್​ 47,751 ರೂ.
ಸೋಲೋನಾ 12,651 ರೂ.

ಸ್ಟಾಕ್ ಮಾರುಕಟ್ಟೆ ಅಪ್​ಡೇಟ್ಸ್​:ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರವೂ ಉತ್ತಮ ಲಾಭದೊಂದಿಗೆ ಪ್ರಾರಂಭವಾಯಿತು. ವಿದೇಶಿ ಹೂಡಿಕೆಯಲ್ಲಿನ ಹೆಚ್ಚಳ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯು ಇದಕ್ಕೆ ಕಾರಣವಾಯಿತು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 213 ಪಾಯಿಂಟ್​ಗಳ ಏರಿಕೆ ಕಂಡು 73,862ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಪ್ರಸ್ತುತ 50 ಪಾಯಿಂಟ್ ಏರಿಕೆ ಕಂಡು 22,387ಕ್ಕೆ ತಲುಪಿದೆ.

ರೂಪಾಯಿ ಮೌಲ್ಯ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 2 ಪೈಸೆಗಳಷ್ಟು ಇಳಿಕೆ ಕಂಡಿದೆ. ಪ್ರಸ್ತುತ, ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.83.34 ಆಗಿದೆ.

ಕಚ್ಚಾ ತೈಲ ಬೆಲೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 0.38 ರಷ್ಟು ಹೆಚ್ಚಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 87.33 ಡಾಲರ್ ಆಗಿದೆ.

ಇದನ್ನೂ ಓದಿ:ತೆರಿಗೆ ಪೂರ್ವ ಲಾಭದಲ್ಲಿ 1 ಲಕ್ಷ ಕೋಟಿ ಮಿತಿ ದಾಟಿದ ರಿಲಯನ್ಸ್​​​​: ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ - RIL cross lakh cr pre tax profit

ABOUT THE AUTHOR

...view details