ಹೈದರಾಬಾದ್: ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಭಾನುವಾರ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ.78,620ರಷ್ಟಿದ್ದರೆ ಸೋಮವಾರದ ವೇಳೆಗೆ ಸುಮಾರು 255ರೂ.ಗಳಷ್ಟು ಇಳಿಕೆಯಾಗಿ ರೂ.78,365ಕ್ಕೆ ತಲುಪಿದೆ. ಭಾನುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.89,200 ರಷ್ಟಿತ್ತು. ಇನ್ನು ಸೋಮವಾರವಾದ ಇಂದು ಬೆಳಗ್ಗೆ 545ರಷ್ಟು ಏರಿಕೆಯಾಗಿ ರೂ.89,450ಕ್ಕೆ ತಲುಪಿದೆ.
ಹೈದರಾಬಾದ್‌ನಲ್ಲಿ 24ನೇ ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ ರೂ.78,365 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 89,450 ರೂ. ಇದೆ.
ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?: ಬೆಂಗಳೂರಿನಲ್ಲಿ ಸೋಮವಾರ 24 ಕ್ಯಾರೆಟ್( 999Gold) 77,450 ರೂ ಇದ್ದು, ನಿನ್ನೆಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನು 22 ಕ್ಯಾರೆಟ್ ನ 10 ಗ್ರಾಂ ಆಭರಣ ಚಿನ್ನ 71 ಸಾವಿರ ರೂ ಇದೆ.
ಗಮನಿಸಿ:ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬಹುದು.
ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಬಹುತೇಕ ಸ್ಥಿರವಾಗಿವೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 2,623 ಡಾಲರ್ ಇತ್ತು, ಆದರೆ ಸೋಮವಾರದ ವೇಳೆಗೆ 2 ಡಾಲರ್ ಏರಿಕೆಯಾಗಿ 2,625 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 29.70 ಡಾಲರ್ ಆಗಿದೆ.