ಕರ್ನಾಟಕ

karnataka

ETV Bharat / business

ಬೆಂಗಳೂರು, ದಾವಣಗೆರೆಯಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಹೇಗಿದೆ? - Gold Silver Rates - GOLD SILVER RATES

ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಮುಖ ನಗರಗಳಲ್ಲಿ ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ದರಗಳು ಹೇಗಿವೆ ಎಂಬುದನ್ನು ತಿಳಿಯೋಣ.

Petrol and Diesel Rate  Gold and Silver rate  Stock market  Cryptocurrency price
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 5, 2024, 12:45 PM IST

Updated : Jul 5, 2024, 1:02 PM IST

ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ₹74,760 ರಷ್ಟಿದ್ದರೆ, ಶುಕ್ರವಾರ ₹74,760ರಷ್ಟಿತ್ತು. ಗುರುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ₹92,670ರಷ್ಟಿದ್ದರೆ, ಶುಕ್ರವಾರದ ವೇಳೆಗೆ ₹340ರಷ್ಟು ಏರಿಕೆಯಾಗಿ ₹93,010ಕ್ಕೆ ತಲುಪಿದೆ.

ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರಗಳ ಮಾಹಿತಿ:

  • ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,090 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಇದೆ.
  • ಮೈಸೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,090 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಇದೆ.
  • ಬೆಳಗಾವಿಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,090 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಇದೆ.
  • ದಾವಣಗೆರೆಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,090 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಇದೆ
  • ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 74,760 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 93,010 ರೂ. ಇದೆ.
  • ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 74,340 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 93,010 ರೂ. ಇದೆ.
  • ವಿಶಾಖಪಟ್ಟಣಂನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 74,340 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 93,010 ರೂ. ಇದೆ.

ಗಮನಿಸಿ:ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬೇಕು.

ಸ್ಪಾಟ್ ಗೋಲ್ಡ್ ಬೆಲೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಸ್ಥಿರವಾಗಿವೆ. ಗುರುವಾರ, ಒಂದು ಔನ್ಸ್ ಚಿನ್ನದ ಬೆಲೆ 2,358 ಡಾಲರ್‌ಗಳಷ್ಟಿತ್ತು. ಆದರೆ, ಶುಕ್ರವಾರದ ಹೊತ್ತಿಗೆ ಅದು 3 ಡಾಲರ್‌ಗಳಷ್ಟು ಏರಿಕೆಯಾಗಿ 2,361 ಡಾಲರ್‌ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.53 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?:ಕ್ರಿಪ್ಟೋಕರೆನ್ಸಿ ವ್ಯಾಪಾರವು ಶುಕ್ರವಾರ ಭಾರೀ ನಷ್ಟವನ್ನು ಅನುಭವಿಸುತ್ತಿದೆ.

ಕ್ರಿಪ್ಟೋ ಕರೆನ್ಸಿ ಈಗಿನ ಬೆಲೆ
ಬಿಟ್‌ಕಾಯಿನ್ ₹46,24,876
ಎಥೆರಿಯಮ್ ₹.2,44,078
ಟೆಥರ್ ₹79.90
ಬೈನಾನ್ಸ್ ನಾಣ್ಯ ₹39,067
ಸೋಲೋನಾ ₹10,304

ಷೇರು ಮಾರುಕಟ್ಟೆ ಅಪ್‌ಡೇಟ್‌:ದೇಶೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಭಾರೀ ನಷ್ಟದೊಂದಿಗೆ ಪ್ರಾರಂಭವಾದವು. ಮಾರುಕಟ್ಟೆ ಆರಂಭದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 307 ಅಂಕ ಕಳೆದುಕೊಂಡು 79,747ರಲ್ಲಿ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 51 ಅಂಕ ಕಳೆದುಕೊಂಡು 24,250ರಲ್ಲಿ ಮುಂದುವರಿಯಿತು.

ಯಾರೆಗ ಲಾಭ?: ಹಿಂದೂಸ್ತಾನ್ ಯೂನಿಲಿವರ್, ಎಲ್ & ಟಿ, ಎನ್‌ಟಿಪಿಸಿ, ಸನ್‌ಫಾರ್ಮಾ, ಜೆಎಸ್‌ಡಬ್ಲ್ಯೂ ಸ್ಟೀಲ್, ಆಕ್ಸಿಸ್ ಬ್ಯಾಂಕ್.

ಯಾರಿಗೆ ನಷ್ಟ?: HDFC ಬ್ಯಾಂಕ್, M&M, ಟಾಟಾ ಸ್ಟೀಲ್, ಟೈಟಾನ್, ಪವರ್ಗ್ರಿಡ್, ICICI ಬ್ಯಾಂಕ್, TCS, ITC.

$ ಎದುರು ರೂಪಾಯಿ ಮೌಲ್ಯ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 5 ಪೈಸೆಗಳಷ್ಟು ಹೆಚ್ಚಾಗಿದೆ. ಪ್ರಸ್ತುತ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.83.45 ಆಗಿದೆ.

ಪೆಟ್ರೋಲ್, ಡೀಸೆಲ್ ದರಗಳು:ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 102.86 ರೂ. ಹಾಗೂ ಡೀಸೆಲ್ ಬೆಲೆ 88.64 ರೂ. ಇದೆ. ಬೆಳಗಾವಿಯಲ್ಲಿ ಲೀಟರ್​ ಪೆಟ್ರೋಲ್ ದರ 103.48 ರೂ. ಮತ್ತು ಡೀಸೆಲ್ ಬೆಲೆ 89.54 ರೂ. ಇದೆ. ದಾವಣಗೆರೆಯಲ್ಲಿ ಲೀಟರ್​ ಪೆಟ್ರೋಲ್ ದರ 103.88 ರೂ. ಮತ್ತು ಡೀಸೆಲ್ ಬೆಲೆ 90.59 ರೂ. ಇದೆ. ಕಲಬುರಗಿಯಲ್ಲಿ 102.63 ರೂ. ದರ ಹಾಗೂ ಡೀಸೆಲ್ ಬೆಲೆ 88.76 ರೂ. ಇದೆ.

ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಡೀಸೆಲ್ ಬೆಲೆ 95.63 ರೂ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಡೀಸೆಲ್ ಬೆಲೆ 96.16 ರೂ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ಕಚ್ಚಾ ತೈಲ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 0.37 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 87.11 ಡಾಲರ್ ಆಗಿದೆ.

ಇದನ್ನೂ ಓದಿ:ಭಾರತವೀಗ ಆರ್ಥಿಕ ಆಶಾವಾದಿ ರಾಷ್ಟ್ರ: ಜನತೆಯ ನಾಡಿಮಿಡಿತ ಬಹಿರಂಗಪಡಿಸಿದ ಸಮೀಕ್ಷೆ - India Most Optimistic Nation

Last Updated : Jul 5, 2024, 1:02 PM IST

ABOUT THE AUTHOR

...view details