ಬೆಂಗಳೂರು/ ಹೈದರಾಬಾದ್: ಗಗನಮುಖಿಯಾಗುತ್ತಾ ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದ್ದ ಚಿನ್ನದ ಬೆಲೆ ಇಂದು ಇಳಿಕೆ ಕಂಡಿದೆ. ಗುರುವಾರ 10 ಗ್ರಾಮಗೆ 89,225ರೂ ಇದ್ದ ಚಿನ್ನದ ದರ, ಶುಕ್ರವಾರ 545ರೂ ಇಳಿಕೆ ಕಾಣುವ ಮೂಲಕ 10ಗ್ರಾಂಗೆ 88,680 ಆಗಿದೆ. ಇನ್ನು ಬೆಳ್ಳಿದರದಲ್ಲೂ ಕೂಡ ಇಳಿಕೆ ಕಂಡಿದ್ದು, ಕೆಜಿಗೆ 99,860 ರೂ ಇದ್ದ ಬೆಳಿ ಶುಕ್ರವಾರ 244 ರೂ ಇಳಿಕೆಯೊಂದಿಗೆ 99,616 ಆಗಿದೆ.
ಬೆಂಗಳೂರಿನಲ್ಲಿ 99.9 ಪ್ಯೂರಿಟಿಯ 10 ಗ್ರಾಂ ಚಿನ್ನದ ಬೆಲೆ 88677 ರೂ ಇದೆ. ಇನ್ನು ಬೆಳ್ಳಿಯ ಬೆಲೆ 98400 ರೂ ಇದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 82,530 ರೂ ಇದ್ದರೆ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 89190 ರೂ ಇದೆ.
ಹೈದರಾಬಾದ್ನಲ್ಲಿನ ಬಂಗಾರದ ದರ: 10 ಗ್ರಾಂ ಚಿನ್ನದ ದರ 88,680, ಕೆಜಿ ಬೆಳ್ಳಿ ದರ 99,616 ರೂ ಇದೆ.
ಸೂಚನೆ: ಇಲ್ಲಿ ಉಲ್ಲೇಖ ಮಾಡಿರುವ ದರಗಳು ಬೆಳಗ್ಗೆ ಮಾರುಕಟ್ಟೆ ಆರಂಭದ ಬೆಲೆಗಳು ಆಗಿದ್ದು, ಇದು ನಂತರದ ಬೆಳವಣಿಗೆಯಲ್ಲಿ ಬದಲಾಗುವ ಸಾಧ್ಯತೆಗಳು ಇರುತ್ತವೆ.
ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಗುರುವಾರ ಒಂದು ಔನ್ಸ್ ಚಿನ್ನದ ದರ 2,940 ಡಾಲರ್ ಇದ್ದು, ಶುಕ್ರವಾರ 7 ಡಾಲರ್ ಕುಸಿತದೊಂದಿಗೆ 2,930 ಡಾಲರ್ ಆಗಿದೆ. ಬೆಳ್ಳಿ ದರ ಔನ್ಸ್ಗೆ 32.89 ಡಾಲರ್ ಆಗಿದೆ.
ಷೇರು ಮಾರುಕಟ್ಟೆ: ದೇಶಿ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರವೂ ನಷ್ಟದೊಂದಿಗೆ ಆರಂಭಗೊಂಡಿವೆ.. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಿಶ್ರ ಸೂಚನೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಇದರಿಂದಾಗಿ ಸೂಚ್ಯಂಕಗಳು ಏರಿಳಿತವನ್ನು ಕಾಣುತ್ತಿವೆ.
ಮುಂಬೈ ಷೇರು ವಿನಿಮಯ ಸೂಚ್ಯಂಕ ನಿಫ್ಟಿ 12 ಗಂಟೆ ವೇಳೆಗೆ, 113 ಅಂಶಗಳ ಕುಸಿತದೊಂದಿಗೆ 22,799.90 ಗಳೊಂದಿಗೆ ವ್ಯವಹಾರ ನಿರತವಾಗಿತ್ತು. ರಾಷ್ಟ್ರೀಯ ಷೇರು ವಿನಿಮಯ ಸೂಚ್ಯಂಕ ಸೆನ್ಸೆಕ್ಸ್ 392 ಅಂಕಗಳ ನಷ್ಟದೊಂದಿಗೆ 75,343.92 ರಲ್ಲಿ ವಹಿವಾಟು ನಿರತವಾಗಿತ್ತು.
ಲಾಭದಲ್ಲಿರುವ ಷೇರುಗಳು: ಟಾಟಾ ಸ್ಟೀಲ್, ಜೊಮಾಟೊ, ಎಲ್ಅಂಡ್ಟಿ, ಎನ್ಟಿಪಿಸಿ, ಟಿಸಿಎಸ್ , ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಅದಾನಿ ಪೋರ್ಟ್ಸ್
ನಷ್ಟದ ಷೇರುಗಳು: ಎಂಅಂಡ್ಎಂ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೇಂಟ್, ನೆಸ್ಲೆ ಇಂಡಿಯಾ, ಮಾರುತಿ ಸುಜುಕಿ, ಪವರ್ಗ್ರಿಡ್ ಕಾರ್ಪೊರೇಷನ್.
ರೂಪಾಯಿ ಮೌಲ್ಯ:ಫೆ 21ರಂ ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು 86.50 ರೂ ಇದೆ.
ಇದನ್ನೂ ಓದಿ:ಶುಭಸುದ್ದಿ: ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ: ಯಾವ ಬ್ಯಾಂಕ್‌ನಲ್ಲಿ ಎಷ್ಟು Interest?
ಇದನ್ನೂ ಓದಿ:ಸ್ವಂತ ವ್ಯಾಪಾರ, ಒಳ್ಳೆಯ ಮನೆ, ಸಾಕಷ್ಟು ಹಣ: ಇವು ಇಂದಿನ ಯುವಕರ ದೀರ್ಘಾವಧಿ ಗುರಿಗಳು!