ಕೋಲ್ಕತ್ತಾ: ಭಾರತದ ಟೀ ಉದ್ಯಮ ವಲಯದಲ್ಲಿ ಸಣ್ಣ ಚಹಾ ಬೆಳೆಗಾರರು ಬೆನ್ನೆಲುಬಾಗಿ ನಿಂತಿದ್ದಾರೆ. 2023ಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಭಾರತದ ಸಣ್ಣ ಟೀ ಬೆಳೆಗಾರರು ದೇಶದ ಒಟ್ಟಾರೆ ಚಹಾದ ಉತ್ಪಾದನೆ ವಲಯದಲ್ಲಿ ಶೇ 53ರಷ್ಟು ಕೊಡುಗೆ ನೀಡುತ್ತಿದ್ದಾರೆ. ಇವರು ಒಟ್ಟಾರೆ 1,367 ಮಿಲಿಯನ್ ಕೆಜಿ ಟೀ ಉತ್ಪಾದನೆ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಭಾರತದ ಸಣ್ಣ ಟೀ ಬೆಳೆಗಾರರ ಅಸೋಸಿಯೇಷನ್ನ ಅಧ್ಯಕ್ಷ ಬಿಜೋಯ್ ಚಕ್ರವರ್ತಿ, ಚಹಾದ ಎಲೆಗಳಿಗೆ ಸರ್ಕಾರ ಶೀಘ್ರದಲ್ಲೇ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಘೋಷಣೆ ಮಾಡುವ ಭರವಸೆ ಹೊಂದಿದ್ದೇವೆ. ಈಗಾಗಲೇ ನಾರಿನ ಕೃಷಿಕರಿಗೆ ಸಹಾಯ ಮಾಡಲು ಸರ್ಕಾರ ಕಚ್ಛಾ ನಾರಿಗೆ ಎಂಎಸ್ಪಿ ಘೋಷಿಸಿದೆ ಎಂದರು.
ಸಣ್ಣ ಟೀ ಉತ್ಪಾದನೆ ಬೆಳವಣಿಗೆಯು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಉದ್ಯಮಶೀಲತೆಯ ಉತ್ತೇಜನಕ್ಕೆ ಕಾರಣವಾಗಿದೆ. ನಾನು ಒಂದು ಎಕರೆ ಪ್ರದೇಶದಲ್ಲಿ ಚಹಾ ಉತ್ಪಾದನೆ ಆರಂಭಿಸಿದೆ. ಇದು ನನಗೆ ಉತ್ತಮ ಆದಾಯ ತಂದು ಕೊಟ್ಟಿತು ಎಂದು ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ 25 ವರ್ಷದ ಬಿಮಲ್ ಗೋಗೊಯ್ ತಿಳಿಸಿದ್ದಾರೆ.
ಇತ್ತೀಚಿಗೆ ಸರ್ಕಾರ ಟೀ ಅಭಿವೃದ್ಧಿ ಮತ್ತು ಉತ್ತೇಜನ ಯೋಜನೆ ಅಡಿ ಚಹಾ ಉದ್ಯಮಕ್ಕೆ ಆರ್ಥಿಕ ಸಹಾಯ ನೀಡುವ ಘೋಷಣೆ ಮಾಡಿತ್ತು. ಇದು ಸಣ್ಣ ಚಹಾ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನ ನೀಡಿದೆ. ಈ ಯೋಜನೆಯು ಮುಂದಿನ ಎರಡು ವರ್ಷ ಅಂದರೆ 2024-25 ಮತ್ತು 2025-26ರಲ್ಲಿ ಶೇ 82 ರಷ್ಟು ಅಂದರೆ 290.81 ಕೋಟಿ ಯಿಂದ 528.97 ಕೋಟಿ ರೂ ಮೀಸಲು ಹೆಚ್ಚಿಸಲಾಗಿದೆ.
ಈ ಯೋಜನೆ ಅಡಿ ಸಣ್ಣ ಟೀ ಬೆಳೆಗಾರರು ವಿವಿಧ ರೀತಿಯ ಸಹಾಯಧನವನ್ನು ಪಡೆಯಲಿದ್ದಾರೆ. ಚಹಾ ಬೆಳೆಗಾರರಿಗೆ ಸಹಾಯಕ್ಕೆ ಸ್ವ ಸಹಾಯ ಗುಂಪು ಮತ್ತು ಕೃಷಿ ಉತ್ಪಾದನಾ ಸಂಘಟನೆಗಳನ್ನು ಕೂಡ ಸಜ್ಜು ಮಾಡಲಾಗಿದೆ. ಮುಂದಿನ ಎರಡು ವರ್ಷದಲ್ಲಿ 800 ಸ್ವ- ಸಹಾಯ ಗುಂಪು ಮತ್ತು ಕೃಷಿ ಉತ್ಪಾದನಾ ಸಂಘಟನೆಗಳು 105.5 ಕೋಟಿ ನೆರವಿನೊಂದಿಗೆ ಉತ್ಪಾದನೆ ಹೆಚ್ಚಳದ ಗುರಿ ಹೊಂದಿದೆ. ಈ ಹಿಂದೆ 40 ಸ್ವಸಹಾಯ ಗುಂಪು ಮತ್ತು ಎಂಟು ಕೃಷಿ ಉತ್ಪಾದನಾ ಸಂಘಟನೆಗಳು 2.7 ಕೋಟಿ ಯೋಜನೆ ಹೊಂದಿದ್ದವು.
ಈ ನಡೆಯು ಮುಂದಿನ ಎರಡು ವರ್ಷದಲ್ಲಿ ಸಣ್ಣ ಚಹಾ ಬೆಳೆಗಾರರು 1 ಸಾವಿರದಿಂದ 30 ಸಾವಿರದ ವಿಸ್ತರಣೆಯ ನಿರೀಕ್ಷೆ ಹೊಂದಿದೆ. ಈ ಸಹಾಯದ ಉದ್ದೇಶ ಚಹಾದ ಉತ್ಪಾದನೆ ಸುಧಾರಣೆ ಮತ್ತು ಗುಣಮಟ್ಟ ಆಗಿದೆ. ಜೊತೆಗೆ ಸಣ್ಣ ಟೀ ಬೆಳೆಗಾರರಿಂದ ಉತ್ಪಾದಿತವಾದ ಟೀಗೆ ಹೆಚ್ಚಿನ ಮೌಲ್ಯವನ್ನು ನೀಡುವುದಾಗಿದೆ.
ಇದರಡಿ ಸಣ್ಣ ಚಹಾ ಬೆಳೆಗಾರರ ಕೃಷಿ ಚಟುವಟಿಕೆಗೆ ಬೇಕಾದ ಸಾಧನಗಳು, ಎಲೆ ಸಾಗಿಸುವ ವಾಹನ, ಎಲೆ ನೆರಳು ಒದಗಿಸುವುದು, ಮೆಕಾನಿಕಲ್ ಕೃಷಿ ಮತ್ತು ಗೋದಾಮಿನಂತಹ ಸೌಲಭ್ಯಗಳನ್ನು ನೀಡುವುದಾಗಿದೆ. ಎಸ್ಎಚ್ಜಿ, ಎಫ್ಪಿಒಗಳಿಂದ ಸ್ಥಾಪಿತವಾದ ಹೊಸ ಟೀ ಘಟಕಗಳಿಂದ ಸಣ್ಣ ಟೀ ಬೆಳೆಗಾರರು ಅಗತ್ಯ ಬೆಂಬಲ ಪಡೆಯಲಿದ್ದಾರೆ.
ಇದರ ಹೊರತಾಗಿ ಮಣ್ಣಿನ ಪರೀಕ್ಷೆಯ ಸಹಾಯ ದೊರೆಯಲಿದೆ. ಜೊತೆಗೆ ಸಣ್ಣ ಚಹಾ ಬೆಳೆಗಾರರಿಗೆ ಕೌಶಲ್ಯ ವೃದ್ಧಿ ಮತ್ತು ಉತ್ತಮ ವಿಸ್ತರಣೆಗಾಗಿ ಕೃಷಿ ಭೂಮಿ ಶಾಲೆಯ ಮೂಲಕ ಸಾಮರ್ಥ್ಯ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಈ ಮೂಲಕ ಅವರಿಗೆ ಕೃಷಿಯಲ್ಲಿ ಉತ್ತಮ ಅಭ್ಯಾಸಗಳ ಅಳವಡಿಕೆ ಮತ್ತು ಚಹಾ ತೋಟಗಳ ನಿರ್ವಹಣೆ ಕುರಿತು ಶಿಕ್ಷಣ ನೀಡಲಾಗುವುದು.
ಇದನ್ನೂ ಓದಿ: ಅಸ್ಸಾಂನ ಟೀ ತೋಟಕ್ಕೆ ಭೇಟಿ ನೀಡಿದ ಮೋದಿ; ಚಹಾ ತೋಟಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರಿಗೆ ಮನವಿ