ಕರ್ನಾಟಕ

karnataka

ETV Bharat / business

ಬೆಳಗ್ಗೆ ದೋಸೆ, ರಾತ್ರಿ ಬಿರಿಯಾನಿ: ನಿಮಿಷಕ್ಕೆ 34 ಪ್ಲೇಟ್​ ಬಿರಿಯಾನಿ ಆರ್ಡರ್​,​ ಒಂದು ವರ್ಷದಲ್ಲಿ ಸ್ವಿಗ್ಗಿಗೆ 1.57 ಕೋಟಿ ಆರ್ಡರ್‌! - 34 BIRYANI ORDERS PER MINUTE IN HYD

ಎಷ್ಟರಮಟ್ಟಿಗೆ ಎಂದರೆ ಹೈದರಾಬಾದಿಗಳು ನಿಮಿಷಕ್ಕೆ 34 ಬಿರಿಯಾನಿ ಆರ್ಡರ್ ಮಾಡುತ್ತಿದ್ದಾರೆ. ಈ ವರ್ಷದಲ್ಲಿ 1.57 ಕೋಟಿ ಪ್ಲೇಟ್ ಬಿರಿಯಾನಿ ಆರ್ಡರ್​ ಮಾಡಿದ್ದಾರೆ. ಮುಂಜಾನೆ 4 ಗಂಟೆಗೆ ಬಿರಿಯಾನಿ ಆರ್ಡರ್ ಮಾಡುವವರೂ ಇದ್ದಾರೆ.

Dosa in the Morning, Biryani at Night: 1.57 Crore Orders for Swiggy in the Year
ಬೆಳಗ್ಗೆ ದೋಸೆ, ರಾತ್ರಿ ಬಿರಿಯಾನಿ: ನಿಮಿಷಕ್ಕೆ 34 ಪ್ಲೇಟ್​ ಬಿರಿಯಾನಿ ಆರ್ಡರ್​,​ ಒಂದು ವರ್ಷದಲ್ಲಿ ಸ್ವಿಗ್ಗಿಗೆ 1.57 ಕೋಟಿ ಆರ್ಡರ್‌! (Etv Bharat)

By ETV Bharat Karnataka Team

Published : Dec 25, 2024, 1:09 PM IST

ಹೈದರಾಬಾದ್:ಹೈದರಾಬಾದ್‌ನಲ್ಲಿ ಮೊದಲು ಮನಸ್ಸಿಗೆ ಹೊಳೆಯುವ ಖಾದ್ಯ ಎಂದರೆ ಅದು ಬಿರಿಯಾನಿ. ಯಾವುದೇ ಪಾರ್ಟಿ ಇರಲಿ, ಅತಿಥಿಗಳು ಮನೆಗೆ ಬರ್ತಾರೆ ಎಂದರೆ ಅಲ್ಲಿ ಬಿರಿಯಾನಿ ಇರಲೇಬೇಕು. ಅಡುಗೆ ಮಾಡಲು ಬೇಜಾರು ಅಂತಾ ಅನಿಸಿದರೆ ಮನಸ್ಸಿಗೆ ಬರುವ ಮೊದಲ ಆಹಾರವೇ ಈ ಬಿರಿಯಾನಿ. ಅಂದ ಹಾಗೆ ಇದು ನಗರದ ಜೀವನಶೈಲಿಯ ಭಾಗವಾಗಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಆಚರಣೆಗಳಲ್ಲಿ ಬಂಧು ಮಿತ್ರರು ಒಟ್ಟಾಗಿ ಬಿರಿಯಾನಿ ಸೇವಿಸುವುದು ಒಂದು ಕ್ರೇಜ್​.

ಹೌದು ಇದೇ ವಿಷಯವಾಗಿ ಒಂದು ಇಂಟ್ರೆಸ್ಟಿಂಗ್​ ವಿಚಾರ ಹೊರ ಬಿದ್ದಿದೆ. ಪ್ರತಿ ನಿಮಿಷಕ್ಕೆ 34 ಪ್ಲೇಟ್‌ಗಳ ಬಿರಿಯಾನಿ ಆರ್ಡರ್ ಮಾಡುವ ಮೂಲಕ ದೇಶದಲ್ಲೇ ಅತ್ಯಧಿಕ ಆರ್ಡರ್​ ಮಾಡಿದ ಖ್ಯಾತಿಯನ್ನು ಹೈದರಾಬಾದ್ ಜನ ಪಡೆದುಕೊಂಡಿದ್ದಾರೆ. 2024ರಲ್ಲಿ ನಗರವು ಬಿರಿಯಾನಿಗಾಗಿ 1.57 ಕೋಟಿ ಆರ್ಡರ್ ಮಾಡಿದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಬಿರಿಯಾನಿ ಜನಪ್ರಿಯ ಖಾದ್ಯವಾಗಿದ್ದರೂ, ಮುಂಜಾನೆ 4 ಗಂಟೆಯಿಂದಲೇ ಆರ್ಡರ್ ಮಾಡುವವರೂ ಇದ್ದಾರೆ ಎಂಬುದು ಗಮನಾರ್ಹ.

ಈ ಆರ್ಡರ್‌ಗಳಲ್ಲಿ ಹೆಚ್ಚಿನವು ಚಿಕನ್ ಬಿರಿಯಾನಿಗಾಗಿ ಎಂದು Swiggy ಯ ಡೇಟಾ ಬಹಿರಂಗಪಡಿಸಿದೆ. ಒಬ್ಬ ಗ್ರಾಹಕರು ಕಳೆದ ವರ್ಷ 60 ಪ್ಲೇಟ್‌ಗಳ ಬಿರಿಯಾನಿ ಮೇಲೆ 18,840 ರೂ. ವೆಚ್ಚ ಮಾಡಿದ್ದಾರೆ. ಆಚರಣೆಗಳ ಸಂದರ್ಭದಲ್ಲಿ ಇತರ ಪ್ಲಾಟ್‌ಫಾರ್ಮ್‌ಗಳು, ರೆಸ್ಟೋರೆಂಟ್‌ಗಳಿಂದ ಆರ್ಡರ್​ ಮಾಡುವವರ ಸಂಖ್ಯೆ ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ ಒಟ್ಟು ಬಳಕೆ ದ್ವಿಗುಣಗೊಳ್ಳುತ್ತದೆ.

ಟಿ20 ವಿಶ್ವಕಪ್‌ ಸಂದರ್ಭದಲ್ಲಿ ಬಿರಿಯಾನಿ ಆರ್ಡರ್‌ಗಳಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಈ ಈವೆಂಟ್‌ ಸಂದರ್ಭದಲ್ಲಿ 8.69 ಲಕ್ಷ ಪ್ಲೇಟ್‌ಗಳನ್ನು ಆರ್ಡರ್ ಮಾಡಲಾಗಿದೆ.

ಮುಂಜಾನೆ ದೋಸೆ ಗೆ ಇನ್ನಿಲ್ಲದ ಬೇಡಿಕೆ: ಹೈದರಾಬಾದ್ ನಗರದ ಜನರು ಕೂಡಾ ದೋಸೆ ಎಂದರೆ ಮುಗಿ ಬೀಳುತ್ತಾರೆ. ಬೆಳಗ್ಗೆ ದೋಸೆ ಆರ್ಡರ್‌ಗಳಲ್ಲಿ ರಾಷ್ಟ್ರದಲ್ಲಿ ಹೈದರಾಬಾದ್​ ಅಗ್ರಸ್ಥಾನದಲ್ಲಿದೆ, ವರ್ಷವಿಡೀ 17.54 ಲಕ್ಷ ದೋಸೆ ಆರ್ಡರ್‌ಗಳನ್ನು ಮಾಡಲಾಗಿದೆ. ಹೈದರಾಬಾದಿಗಳು ದೋಸೆ ರುಚಿ ಸವಿಯುವ ಮೂಲಕ ತಮ್ಮ ದಿನಚರಿ ಶುರು ಮಾಡಲು ಇಷ್ಟ ಪಡುತ್ತಾರೆ. ಹಾಗಾಗಿ ದೋಸೆ ಹೈದರಾಬಾದಿಗಳ ನೆಚ್ಚಿನ ತಿಂಡಿ ಕೂಡಾ ಆಗಿದೆ.

ಇದನ್ನು ಓದಿ:ಕ್ರಿಸ್​ಮಸ್​ ವಿಶೇಷ 'ಎಗ್‌ಲೆಸ್ ಪ್ಲಮ್ ಕೇಕ್': ಹೀಗೆ ಮಾಡಿ ನೋಡಿ ವಾವ್ ಎನ್ನುತ್ತಾರೆ ಅತಿಥಿಗಳು..

ABOUT THE AUTHOR

...view details