ಕರ್ನಾಟಕ

karnataka

ETV Bharat / business

ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ ಸಾಧ್ಯತೆ: ಉತ್ಪಾದನೆ ಕುಸಿತ ನಿರೀಕ್ಷೆ - PETROLEUM PRODUCTS

ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಾಗಲಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ ಸಾಧ್ಯತೆ: ಉತ್ಪಾದನೆ ಕುಸಿತ ನಿರೀಕ್ಷೆ
ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ ಸಾಧ್ಯತೆ: ಉತ್ಪಾದನೆ ಕುಸಿತ ನಿರೀಕ್ಷೆ (IANS)

By ETV Bharat Karnataka Team

Published : Jan 5, 2025, 5:18 PM IST

ನವದೆಹಲಿ: ಮಾರ್ಚ್ 31, 2025 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿಯಂಥ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇಕಡಾ 3 ರಿಂದ 4 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಫಿಚ್ ರೇಟಿಂಗ್ಸ್ ವರದಿ ತಿಳಿಸಿದೆ. ಗ್ರಾಹಕ ವಲಯ, ಕೈಗಾರಿಕಾ ವಲಯ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಹೆಚ್ಚಿದ ಬಳಕೆಯಿಂದಾಗಿ ಬೇಡಿಕೆ ಹೆಚ್ಚಾಗಲಿದೆ ಎಂದು ರೇಟಿಂಗ್ ಏಜೆನ್ಸಿ ವರದಿಯಲ್ಲಿ ತಿಳಿಸಿದೆ.

ಇಂಧನ ಉತ್ಪಾದನೆಯಲ್ಲಿನ ಕುಸಿತ, ಸ್ಥಳೀಯವಾಗಿ ಅತಿಯಾದ ಇಂಧನ ಪೂರೈಕೆ ಮತ್ತು ವಿಭಿನ್ನ ಕಚ್ಚಾ ತೈಲಗಳ ನಡುವಿನ ಬೆಲೆ ವ್ಯತ್ಯಾಸಗಳು ಕಡಿಮೆಯಾಗಿರುವುದರಿಂದ ಭಾರತದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಸಂಸ್ಕರಣಾ ಲಾಭಗಳು ಹಣಕಾಸು ವರ್ಷ 2025 ರ ಮಧ್ಯದಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದರಿಂದ ಈ ಕಂಪನಿಗಳ ಮಾರುಕಟ್ಟೆ ಲಾಭವು ಹಣಕಾಸು ವರ್ಷ 2024 ಕ್ಕಿಂತ ಉತ್ತಮವಾಗಿರಲಿದೆ ಎಂದು ವರದಿ ಹೇಳಿದೆ.

"ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದು ತೈಲ ಮಾರುಕಟ್ಟೆ ಕಂಪನಿಗಳ ಸಂಸ್ಕರಣಾ ಲಾಭ ಕುಸಿತವನ್ನು ಒಂದಿಷ್ಟು ಕಡಿಮೆ ಮಾಡಲಿದೆ. ಆದಾಗ್ಯೂ, ಎಚ್​ಪಿಸಿಎಲ್-ಮಿತ್ತಲ್ ಎನರ್ಜಿ ಲಿಮಿಟೆಡ್ (ಎಚ್ಎಂಇಎಲ್, ಬಿಬಿ + / ಸ್ಟೇಬಲ್) ನಂತಹ ಶುದ್ಧ ಸಂಸ್ಕರಣಾಗಾರಗಳ ಲಾಭದಾಯಕತೆಯ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಸ್ಥಳೀಯವಾಗಿ ಅತಿಯಾದ ಇಂಧನ ಪೂರೈಕೆ ಪ್ರಮಾಣ ಕಡಿಮೆಯಾಗುವುದರಿಂದ ಮತ್ತು ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಫಿಚ್​ನ ಊಹೆಗೆ ಅನುಗುಣವಾಗಿ ಕುಸಿಯುವುದರಿಂದ, ಹಣಕಾಸು ವರ್ಷ 2026 ರಲ್ಲಿ ಸಂಸ್ಕರಣಾ ಲಾಭಗಳು ತಮ್ಮ ಮಧ್ಯ-ಚಕ್ರದ ಮಟ್ಟಕ್ಕೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಇದೇ ಸಂದರ್ಭದಲ್ಲಿ ಮಾರ್ಕೆಟಿಂಗ್ ಲಾಭಗಳು ಉತ್ತಮವಾಗಿರಲಿವೆ. ರಿಫೈನಿಂಗ್ ಲಾಭಗಳಲ್ಲಿ ಕ್ರಮೇಣ ಸಾಮಾನ್ಯೀಕರಣದಿಂದಾಗಿ ಹಣಕಾಸು ವರ್ಷ 2025 ರಲ್ಲಿ ಎಚ್ಎಂಇಎಲ್​ನ ಕಡಿಮೆ ರೇಟಿಂಗ್ ಪ್ರಮಾಣವು 2026 ರಲ್ಲಿ ಸುಧಾರಿಸಲಿದೆ" ಎಂದು ವರದಿ ತಿಳಿಸಿದೆ.

ಕಡಿಮೆ ಉತ್ಪಾದನೆ ಮತ್ತು ಕಡಿಮೆ ಕಚ್ಚಾ ತೈಲ ಬೆಲೆಗಳಿಂದಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್​ಜಿಸಿ) ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ನಂತಹ ಮುಂಚೂಣಿ ಕಂಪನಿಗಳ ಲಾಭ ಕುಸಿಯುವ ನಿರೀಕ್ಷೆಯಿದೆ. ಹಳೆಯ ನಿಕ್ಷೇಪಗಳಿಂದ ಉತ್ಪಾದಿಸಲಾಗುವ ಅನಿಲದ ಸ್ಥಳೀಯ ಬೆಲೆಗಳು 2025 ರ ಹಣಕಾಸು ವರ್ಷದಲ್ಲಿ ಎಂಎಂಬಿಟಿಯುಗೆ 6.5 ಡಾಲರ್​ಗೆ ಸೀಮಿತವಾಗುವ ನಿರೀಕ್ಷೆಯಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ಭಾರತದ ತೈಲ ಮತ್ತು ಅನಿಲ ಉತ್ಪಾದನೆಯ ಪ್ರಮಾಣವು 2025ರ ಹಣಕಾಸು ವರ್ಷದಲ್ಲಿ ಬಹುತೇಕ ಒಂದೇ ರೀತಿಯಾಗಿರುವ ನಿರೀಕ್ಷೆಯಿದೆ. ಹಳೆಯ ನಿಕ್ಷೇಪಗಳಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯ ಕುಸಿತ ತಡೆಗಟ್ಟುವ ಸಲುವಾಗಿ ಉತ್ಪಾದನೆ ಹೆಚ್ಚಿಸಲು ಮತ್ತು ಪ್ರತ್ಯೇಕ ನಿಕ್ಷೇಪಗಳನ್ನು ಪತ್ತೆ ಮಾಡುವುದಕ್ಕಾಗಿ ಹೊಸ ತಂತ್ರಜ್ಞಾನದ ಮೇಲೆ ಹಣ ಹೂಡಿಕೆ ಮಾಡಲು ಮುಂಚೂಣಿ ಕಂಪನಿಗಳು ಹೆಣಗಾಡುತ್ತಿರುವುದರಿಂದ ಭಾರತದ ಕಚ್ಚಾ ತೈಲ ಉತ್ಪಾದನೆಯು 2025 ರ ಹಣಕಾಸು ವರ್ಷದಲ್ಲಿ ಶೇಕಡಾ 2 ರಿಂದ 3 ರಷ್ಟು ಕುಸಿಯಲಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : 'ಅವಿವಾಹಿತ ಜೋಡಿಗೆ ರೂಮ್ ನೀಡಲ್ಲ': ಓಯೋ ಚೆಕ್ ಇನ್ ನೀತಿ ಮಾರ್ಪಾಟು - OYO CHECK IN POLICY

ABOUT THE AUTHOR

...view details