ಹೈದರಾಬಾದ್:ಅನೇಕ ಜನರು ಹಣ ಉಳಿಸಲು ಸಣ್ಣ ಉಳಿತಾಯ ಯೋಜನೆಗಳನ್ನೇ ಅವಲಂಬಿಸಿದ್ದಾರೆ. ಇತರರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಸಾಕಷ್ಟು ಕಾಳಜಿ ವಹಿಸಬೇಕು. ಮ್ಯೂಚುವಲ್ ಫಂಡ್ ಹೂಡಿಕೆಯ ಮೂಲ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಹಣಕಾಸಿನ ಗುರಿ ಪೂರೈಸಲು ನೀವು ಸಾಕಷ್ಟು ಹೂಡಿಕೆ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ. ವ್ಯವಸ್ಥಿತ (SIP) ವಿಧಾನವನ್ನು ಅನುಸರಿಸಬೇಕು. ಆಗ ಮಾತ್ರ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಗಳಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೆ, ಅನೇಕ ಜನರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಗೊತ್ತಿದ್ದೂ ತಿಳಿಯದೆಯೂ ಕೆಲವು ತಪ್ಪುಗಳು ಆಗುತ್ತವೆ. ಇದು ಅವರ ಹಣಕಾಸಿನ ಗುರಿಗಳನ್ನು ಸಾಧಿಸುವ ಸಾಧ್ಯತೆಗಳನ್ನು ಬಹಳಷ್ಟು ಕಡಿಮೆ ಮಾಡುತ್ತದೆ.
ಸ್ಪಷ್ಟವಾದ ಅರಿವಿನ ಕೊರತೆ:ಅಲ್ಪಾವಧಿ ಲಾಭಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಕನಿಷ್ಠ ಏಳು ವರ್ಷಗಳವರೆಗೆ ಹೂಡಿಕೆ ಮಾಡಿ. ಅದಕ್ಕಿಂತ ಹೆಚ್ಚು ಕಾಲ ಹೂಡಿಕೆ ಮುಂದುವರಿಸುವುದು ಉತ್ತಮ. ಮಾರುಕಟ್ಟೆ ಬೆಳವಣಿಗೆಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬೇಕು. ಅದರ ಹೊರತಾಗಿ, ಅಲ್ಪಾವಧಿ ಗಮನದಲ್ಲಿಟ್ಟುಕೊಂಡು ಸರಿಯಾದ ಗುರಿಯಿಲ್ಲದೇ ಹೂಡಿಕೆ ಮಾಡಿದರೆ ನಷ್ಟದ ಅಪಾಯವಿದೆ. ಏಕೆಂದರೆ ಷೇರು ಮಾರುಕಟ್ಟೆಯು ಅಲ್ಪಾವಧಿಯಲ್ಲಿಯೇ ಅನೇಕ ಏರಿಳಿತಗಳನ್ನು ಕಾಣುತ್ತಿರುತ್ತದೆ. ಇದು ಸಹಜವೂ ಕೂಡಾ. ಇಂತಹ ಸಮಯದಲ್ಲಿ ಡಿಸ್ಕೌಂಟ್ನಲ್ಲಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕು. ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯವರೆಗೆ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ ಉತ್ತಮ ಆದಾಯವನ್ನು ಗಳಿಸುವ ಸಾಧ್ಯತೆ ಇದೆ.
ಗುರಿಗೆ ತಕ್ಕಂತೆ ಹೂಡಿಕೆ ಮಾಡ್ತಿಲ್ಲ;ಹೆಚ್ಚಿನ ಜನರು ದೊಡ್ಡ ಆರ್ಥಿಕ ಗುರಿಗಳನ್ನು ಹೊಂದಿದ್ದಾರೆ. ಆದರೆ ತಮ್ಮ ಗುರಿಗಳನ್ನು ಸಾಧಿಸಲು ಇವರೆಲ್ಲ ಸಾಕಷ್ಟು ಹೂಡಿಕೆಗಳನ್ನು ಮಾಡಲು ಸಾಧ್ಯವಾಗಿಲ್ಲ. ಅಂದುಕೊಂಡಷ್ಟು ಹಾಗೂ ಯೋಜನಾ ಬದ್ಧವಾಗಿ ಹೂಡಿಕೆ ಮಾಡಲು ಸಾಧ್ಯವಾಗದೇ ಇದ್ದರೆ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಉದಾಹರಣೆಗೆ, ನೀವು 20 ವರ್ಷಗಳಲ್ಲಿ ರೂ.1 ಕೋಟಿ ಗಳಿಸುವ ಗುರಿ ಹೊಂದಿದ್ದೀರಿ ಎಂದು ಭಾವಿಸೋಣ. ಆದರೆ, ತಿಂಗಳಿಗೆ 1000 ರೂ. ಮಾತ್ರ ಹೂಡಿಕೆ ಮಾಡುತ್ತಿದ್ದಾರೆ. ಅಥವಾ ಕೇವಲ 1 ಲಕ್ಷ ಮೊತ್ತದ ಹೂಡಿಕೆ ಮಾಡುತ್ತಿದ್ದೀರಿ ಎಂದು ಭಾವಿಸೋಣ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಗುರಿ ಈಡೇರುವುದಿಲ್ಲ.
ವಾಸ್ತವವಾಗಿ, ನೀವು 20 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಗಳನ್ನು ಗಳಿಸಲು ಬಯಸಿದರೆ, ಅಂತಹವರು ಇಂದಿನಿಂದಲೇ ತಿಂಗಳಿಗೆ 7,550 ರೂಪಾಯಿಗಳ ದರದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಅಥವಾ ಒಮ್ಮೆಲೇ 6.1 ಲಕ್ಷ ರೂ. ಹೂಡಿಕೆ ಮಾಡಿ. ಆಗ ಮಾತ್ರ 20 ವರ್ಷಗಳ ನಂತರ ನೀವು ಒಂದು ಕೋಟಿ ರೂಪಾಯಿಗಳ ಒಟ್ಟು ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಇಷ್ಟು ಹಣವನ್ನು ನೀವು ಯೋಜನಾ ಬದ್ಧವಾಗಿ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.