ಮುಂಬೈ(ಮಹಾರಾಷ್ಟ್ರ):ಬ್ಯಾಂಕ್ಗಳಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದಂತೆಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶೀಘ್ರದಲ್ಲೇ ಬ್ಯಾಂಕ್ಗಳಲ್ಲಿ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕವೂ ಹಣ ಠೇವಣಿ ಮಾಡಲು ಸೌಲಭ್ಯ ಕಲ್ಪಿಸಲಿದೆ. ಅಲ್ಲದೇ, ಮೂರನೇ ವ್ಯಕ್ತಿಯ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಲಿಂಕ್ ಮಾಡಲು ಸಹ ದೇಶದ ಕೇಂದ್ರೀಯ ಬ್ಯಾಂಕ್ ನಿರ್ಧರಿಸಿದೆ.
ಪ್ರಸ್ತುತ ಆರ್ಥಿಕ ವರ್ಷದ ಮೊದಲ ದ್ವೈಮಾಸಿಕ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ''ಬ್ಯಾಂಕ್ ಶಾಖೆಗಳಲ್ಲಿ ನಗದು ನಿರ್ವಹಣೆಯ ಒತ್ತಡ ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ಅನುಕೂಲ ಹೆಚ್ಚಿಸುವ ನಿಟ್ಟಿನಲ್ಲಿ ಹಣ ಠೇವಣಿ ಮಷಿನ್ಗಳನ್ನು (Cash Deposit Machines) ಇರಿಸಲಾಗುವುದು'' ಎಂದು ತಿಳಿಸಿದರು.
''ಸದ್ಯ ಬ್ಯಾಂಕ್ನಲ್ಲಿ ಡೆಬಿಟ್ ಕಾರ್ಡ್ ಬಳಕೆ ಮೂಲಕ ಮಾತ್ರ ಹಣ ಠೇವಣಿ ಮಾಡುವ ವ್ಯವಸ್ಥೆ ಇದೆ. ಯುಪಿಐ ವ್ಯವಸ್ಥೆಗೆ ಹೆಚ್ಚಿನ ಜನಪ್ರಿಯತೆ ಹಾಗೂ ಅದರ ಸ್ವೀಕಾರವನ್ನು ಹೆಚ್ಚಿಸುವುದರ ಜತೆಗೆ ಎಟಿಎಂಗಳಲ್ಲಿ ಯುಪಿಐ ಲಭ್ಯತೆಯಿಂದ ಕಾರ್ಡ್‌ರಹಿತವಾಗಿ ಹಣ ವಿತ್ಡ್ರಾ ಪ್ರಯೋಜನಗಳನ್ನು ಗಮನಿಸಿ, ಈಗ ಯುಪಿಐ ಮೂಲಕ ಹಣ ಠೇವಣಿ ಇಡುವ ವ್ಯವಸ್ಥೆಯನ್ನು ಕಲ್ಪಿಸುವ ಪ್ರಸ್ತಾಪವನ್ನು ಕೈಗೊಳ್ಳಲಾಗಿದೆ'' ಎಂದು ಅವರು ವಿವರಿಸಿದರು.