Best Camera Phones Under 10K: ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವಂತಹ ಸ್ಮಾರ್ಟ್ ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕಾಗಿ ಹಲವಾರು ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಬೆಲೆಯ ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಹೀಗೆ ಮಾರುಕಟ್ಟೆಗೆ ಬರುವಂತಹ ಮೊಬೈಲ್ಗಳಲ್ಲಿ ಉತ್ತಮವಾದ ಸ್ಮಾರ್ಟ್ಫೋನ್ ಆಯ್ಕೆ ಮಾಡಿಕೊಳ್ಳುವುದು ಕೊಂಚ ಸವಾಲಿನ ಕೆಲಸವೇ ಸರಿ. ಹಾಗಾದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 10 ಸಾವಿರ ರೂ. ಗೆ ಲಭ್ಯ ಇರುವ, ಉತ್ತಮ ವೈಶಿಷ್ಟ್ಯವುಳ್ಳ, ಬೆಸ್ಟ್ ಕಾಮೆರಾ ಹೊಂದಿರು ಟಾಪ್ 5 ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ಫೋನ್ಗಳ ಬಗ್ಗೆ ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.
1. Realme Narzo 50i:ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸುವವರಿಗೆ Realme Narzo 50i ಅತ್ಯುತ್ತಮ ಆಯ್ಕೆ ಆಗಿರಲಿದೆ.
ಬೆಲೆ:ರೂ.7,499
ಬಣ್ಣ: ಕಾರ್ಬನ್ ಬ್ಲಾಕ್
RAM: 4 GB
ಸ್ಟೋರೇಜ್:64 GB
ಸ್ಕ್ರೀನ್: 6.5 ಇಂಚಿನ HD+ ಡಿಸ್ಪ್ಲೇ
ಬ್ಯಾಟರಿ:5000 mAh Li-Po
ಪ್ರೊಸೆಸರ್:1.6 GHz ಆಕ್ಟಾ ಕೋರ್ SC9863A ಪ್ರೊಸೆಸರ್
ಕ್ಯಾಮೆರಾ:8MP ಆಟೋಫೋಕಸ್ ಸಿಂಗಲ್ ಪ್ರೈಮರಿ ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ
ತೂಕ: 195 ಗ್ರಾಂ
ವಾರಂಟಿ:1 ವರ್ಷ
ಮೊಬೈಲ್ನ ಪ್ಲಸ್ ಮತ್ತು ಮೈನಸ್ ಅಂಶಗಳು
- 'Realme Narzo 50i' ಫೋನ್ ಸ್ಪ್ಲಾಷ್ ಪ್ರೂಫ್ ರೆಸಿಸ್ಟೆನ್ಸ್ ಕೋಟಿಂಗ್ ಹೊಂದಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್ ನೀಡಲಿದೆ.
- ಈ ಫೋನ್ Android 11 ನಲ್ಲಿ ಕಾರ್ಯನಿರ್ವಹಿಸುತ್ತದೆ.
- ರಿವರ್ಸ್ ಚಾರ್ಜಿಂಗ್ ಸಹ ಹೊಂದಿದೆ.
- ಈ ಫೋನ್ ಗೊರಿಲ್ಲಾ ಗ್ಲಾಸ್ ಹೊಂದಿಲ್ಲ
- ಪ್ರತ್ಯೇಕವಾಗಿ ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ ಮೊಬೈಲ್ ಸ್ಟೋರೇಜ್ ವಿಸ್ತರಿಸಬಹುದು.
- 1080p ವೀಡಿಯೋ ರೆಕಾರ್ಡಿಂಗ್ ಕೂಡ ಇರಲಿದೆ.
2. Oppo A15s :ಕಡಿಮೆ ಬೆಲೆಯಲ್ಲಿ ದೈನಂದಿನ ಬಳಕೆಗಾಗಿ ಉತ್ತಮ ಫೋನ್ ಹುಡುಕುತ್ತಿದ್ದರೆ 'Oppo A15s' ಬೆಸ್ಟ್ ಆಯ್ಕೆ ಆಗಲಿದೆ.
ಬೆಲೆ: ರೂ.9,990
ಬಣ್ಣ:ಡೈನಾಮಿಕ್ ಬ್ಲಾಕ್
ಡಿಸ್ಪ್ಲೇ:16.55 ಸೆಂಟಿಮೀಟರ್ (6.52 ಇಂಚುಗಳು) HD+ ಡಿಸ್ಪ್ಲೇ
ಪ್ರೊಸೆಸರ್:2.3 GHz MediaTek Helio P35 Octa Core
RAM: 4 GB
ಸ್ಟೋರೇಜ್: 64 GB
ಬ್ಯಾಟರಿ ಸಾಮರ್ಥ್ಯ: 4230 mAH ಲಿಥಿಯಂ ಪಾಲಿಮರ್ ಬ್ಯಾಟರಿ
ಬ್ಯಾಕ್ ಕ್ಯಾಮೆರಾ:13MP ಮೇನ್ ಕ್ಯಾಮೆರಾ + 2MP ಡೆಪ್ತ್ ಕ್ಯಾಮೆರಾ + 2MP ಮ್ಯಾಕ್ರೋ ಲೆನ್ಸ್ AI ಟ್ರಿಪಲ್ ಕ್ಯಾಮೆರಾ
ಫ್ರಂಟ್ ಕ್ಯಾಮೆರಾ:8 MP AI ಬ್ಯೂಟಿಫಿಕೇಶನ್ ಸೆಲ್ಫಿ ಕ್ಯಾಮೆರಾ
ತೂಕ:120 ಗ್ರಾಂ
ವಾರಂಟಿ:1 ವರ್ಷ
ಮೊಬೈಲ್ನ ಪ್ಲಸ್ ಮತ್ತು ಮೈನಸ್ ಅಂಶಗಳು
- Oppo A15S 6.52-ಇಂಚಿನ ಡಿಸ್ಪ್ಲೇ ಪ್ಯಾನೆಲ್‌ನೊಂದಿಗೆ 480 ನಿಟ್‌ಗಳ ಬ್ರೈಟ್‌ನೆಸ್ ಸೆಟ್ಟಿಂಗ್ನೊಂದಿಗೆ ಬರಲಿದೆ.
- ಗೊರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿಲ್ಲ.
- ಸ್ನ್ಯಾಪಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಲಭ್ಯವಿದೆ. ಫಾಸ್ಟ್ ರಿಯಾಕ್ಷನ್ ಫೇಸ್-ಐಡಿ ಕೂಡ ಇದು ಹೊಂದಿದೆ.
- ಇದು ಗೇಮಿಂಗ್ ಚಟುವಟಿಕೆಗೆ ಸೂಕ್ತವಲ್ಲ
- ಬ್ಯಾಕ್ ಮತ್ತು ಫ್ರಂಟ್ ಕ್ಯಾಮೆರಾಗಳ ಮೂಲಕ 1080 ಪಿಕ್ಸೆಲ್‌ಗಳವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
- ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರಲಿದೆ.
3. Xiaomi Redmi 10 Prime:ವೇಗದ ಚಾರ್ಜಿಂಗ್, ಉತ್ತಮ ಬ್ಯಾಟರಿ ಮತ್ತು ಬೆಸ್ಟ್ ಡಿಸೈನ್ ಬಯಸುವವರು 'Xiaomi Redmi 10 Prime' ಫೋನ್ ಖರೀದಿಸುವುದು ಸೂಕ್ತ.
ಬೆಲೆ:ರೂ.10,999
ಡಿಸ್‌ಪ್ಲೇ:6.5 ಇಂಚಿನ FHD + ಡಾಟ್ ಡಿಸ್ಪ್ಲೇ; 90 Hz ರಿಫ್ರೆಶ್ ರೆಟ್ ಹೊಂದಿರಲಿದೆ.
ಪ್ರೊಸೆಸರ್:ಮೀಡಿಯಾ ಟೆಕ್ ಹೆಲಿಯೊ ಜಿ88 ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಹೈಪರ್ ಎಂಜಿನ್ 2.0; 2.0 GHz ಕ್ಲಾಕ್ ಸ್ಪೀಡ್
RAM:4 GB