ಕರ್ನಾಟಕ

karnataka

ETV Bharat / business

1 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಉತ್ತಮ ಬೈಕ್​ ಖರೀದಿಸಬೇಕೇ? ಇಲ್ಲಿವೆ ಟಾಪ್ 10 ಬೈಕ್​ಗಳು! - Best Bikes Under Rs1 Lakh

Best Bikes Under ₹1 Lakh: ನೀವು ಹೊಸ ಬೈಕ್ ಖರೀದಿಸಲು ಬಯಸುವಿರಾ?, 1 ಲಕ್ಷ ರೂ.ವರೆಗಿನ ಬಜೆಟ್ ಸಾಕಾಗಬಹುದೇ ಎಂಬ ಅನುಮಾನ ಕಾಡುತ್ತಿದೆಯೇ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.

ELECTRIC VEHICLE  CHARGING PRECAUTIONS  SAFETY GUIDELINES  EXPERTS TIPS
ಚಾರ್ಜಿಂಗ್ ಸಮಯದಲ್ಲಿ ಈ ಸಲಹೆಗಳನ್ನು ಅನುಸರಿಸಿ

By ETV Bharat Karnataka Team

Published : Apr 5, 2024, 8:16 PM IST

ಭಾರತದಲ್ಲಿ ಬೈಕ್‌ಗಳಿಗೆ ಎಷ್ಟು ಕ್ರೇಜ್ ಇದೆ ಎಂದು ಹೇಳಬೇಕಿಲ್ಲ. ಅದಕ್ಕಾಗಿಯೇ ಎಲ್ಲಾ ಪ್ರಮುಖ ಆಟೋಮೊಬೈಲ್ ಕಂಪನಿಗಳು ಯುವಕರನ್ನು ಆಕರ್ಷಿಸಲು ಸೂಪರ್ ಸ್ಟೈಲಿಶ್ ಲುಕ್, ಬೆಸ್ಟ್​ ಫರ್ಫಾಮನ್ಸ್ ಮತ್ತು ರೈಡಿಂಗ್ ಅನುಭವ ಹೊಂದಿರುವ ಬೈಕ್‌ಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿವೆ. ಹೀಗಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿರುವ 1 ಲಕ್ಷ ರೂ ಬಜೆಟ್‌ನೊಳಗಿನ ಟಾಪ್ 10 ಬೈಕ್‌ಗಳು ಇಲ್ಲಿವೆ.

1. ಟಿವಿಎಸ್ ರೈಡರ್ 125:ಉತ್ತಮ ರೈಡಿಂಗ್ ಅನುಭವ ಬಯಸುವವರಿಗೆ ಇದು ಉತ್ತಮ ಆಯ್ಕೆ. 124.8 ಸಿಸಿ ಎಂಜಿನ್ ಹೊಂದಿದೆ. 25bhp ಶಕ್ತಿ ಉತ್ಪಾದಿಸುತ್ತದೆ. ಲೀಟರ್​​ಗೆ 56.7 ಕಿಮೀ ಮೈಲೇಜ್ ನೀಡುತ್ತದೆ. ಅಂದಾಜು ಬೆಲೆ 97,054 ರೂ.

2. Hero Xtreme 125R: ಹೀರೋ ಕಂಪನಿ ಬಿಡುಗಡೆ ಮಾಡಿದ ಸೂಪರ್ ಸ್ಟೈಲಿಶ್ ಮಾಡೆಲ್ ಬೈಕ್ ಇದು. ಉತ್ತಮ ಡೈನಾಮಿಕ್ ಮತ್ತು ಸ್ಪೋರ್ಟಿ ನೋಟ ಹೊಂದಿದೆ. 124.7 ಸಿಸಿ ಎಂಜಿನ್ ಹೊಂದಿದೆ. 11.4 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಒಂದು ಲೀಟರ್ ಪೆಟ್ರೋಲ್​ಗೆ 66 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 96,786 ರೂ.

3. ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125: ಪ್ರಸಿದ್ಧ ಕಾರು ತಯಾರಕ ಸುಜುಕಿ ಕಂಪನಿ ದ್ವಿಚಕ್ರ ವಾಹನಗಳಲ್ಲಿ ಉತ್ತಮ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಕಂಪನಿಯ ಸೂಪರ್ ಸ್ಪೋರ್ಟ್ಸ್ ಸ್ಕೂಟಿ ಸುಜುಕಿ ಬರ್ಗ್‌ಮ್ಯಾನ್ 125 ಬೈಕ್​ ಆಕರ್ಷಕ ಸ್ಕೂಟಿ 124 ಸಿಸಿ ಎಂಜಿನ್ ಹೊಂದಿದೆ. ಇದರ ಮೈಲೇಜ್ 58.5 ಕಿಮೀ/ಲೀ. 13 ಬಣ್ಣಗಳಲ್ಲಿ ಲಭ್ಯವಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 96,524 ರೂ.

4. ಸುಜುಕಿ ಅವೆನಿಸ್ 125:ಕಾಲೇಜು ಮತ್ತು ಕಚೇರಿಗೆ ಹೋಗುವವರಿಗೆ ಉತ್ತಮ ಆಯ್ಕೆ. ಈ ಸ್ಕೂಟಿ 124.3 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. 8.58 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಮೈಲೇಜ್ 49.6 ಕಿಮೀ/ಲೀಟರ್. ಬೆಲೆ ಅಂದಾಜು 94,503 ರೂ.

5. ಬೆನ್ಲಿಂಗ್ ಔರಾ:ಸ್ಟೈಲೀಶ್ ನೋಟ ಹೊಂದಿರುವ ಬೆನ್ಲಿಂಗ್ ಔರಾ ಎಲೆಕ್ಟ್ರಿಕ್ ಸ್ಕೂಟರ್ ಕಾಲೇಜು, ಕಚೇರಿ ಮತ್ತು ಮನೆಯ ಅಗತ್ಯಗಳಿಗೆ ತುಂಬಾ ಉಪಯುಕ್ತ. ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 91,667 ರೂ.

6. ಕೈನೆಟಿಕ್ ಗ್ರೀನ್ ಜುಲು: ಸ್ಟೈಲಿಶ್ ಲುಕ್‌ನೊಂದಿಗೆ ಕೈನೆಟಿಕ್ ಗ್ರೀನ್ ಜುಲು ಅತ್ಯುತ್ತಮವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದು. ಇದು 2000 W ಶಕ್ತಿ ಉತ್ಪಾದಿಸುತ್ತದೆ. ಇದರ ವ್ಯಾಪ್ತಿ 104 ಕಿ.ಮೀ. ಟೆಲಿಸ್ಕೋಪಿಕ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಶಾಕ್ ಅಬ್ಸಾರ್ಬರ್ ರಿಯರ್ ಸಸ್ಪೆನ್ಷನ್​ನೊಂದಿಗೆ ಬರುತ್ತಿರುವ ಈ ಸ್ಕೂಟಿಯ ಬೆಲೆ ಮಾರುಕಟ್ಟೆಯಲ್ಲಿ ಅಂದಾಜು 94,990 ರೂ ಆಗಿದೆ.

7. TVS Ntorq 125: ಈ ಬೈಕ್​ ಉತ್ತಮ ಸವಾರಿ ಅನುಭವ, ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಸೂಪರ್ ಸ್ಪೋರ್ಟ್ಸ್ ಲುಕ್‌ನೊಂದಿಗೆ ಪ್ರಭಾವ ಬೀರುತ್ತದೆ. ಕ್ರೀಡಾ ಸ್ಕೂಟಿ ಅನೇಕ ಅಭಿಮಾನಿಗಳನ್ನು ಹೊಂದಿದೆ. 124.8 ಸಿಸಿ ಎಂಜಿನ್ ಹೊಂದಿದೆ. ಮೈಲೇಜ್- 41 ಕಿಮೀ/ಲೀಟರ್. ಧ್ವನಿ ಸಹಾಯಕ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಇದರ ಮೂಲಕ, ವಿವಿಧ ಬೈಕ್ ಕಾರ್ಯಗಳನ್ನು ಪ್ರವೇಶಿಸಬಹುದು. ಲೋಕೆಷನ್​ ಸೇವೆಗಳು, ಕರೆ ಅಧಿಸೂಚನೆಗಳಂತಹ 20 ರೀತಿಯ ಆಜ್ಞೆಗಳನ್ನು ಹೊಂದಿದೆ. ಸವಾರಿ ಮಾಡುವಾಗ, ನೀವು ಬ್ಲೂಟೂತ್ ಅಥವಾ ವೈರ್ಡ್ ಇಯರ್‌ಫೋನ್‌ಗಳನ್ನು ಹೆಲ್ಮೆಟ್‌ಗೆ ಸಂಪರ್ಕಿಸಬಹುದು ಮತ್ತು ನಿಮ್ಮ ಆದೇಶದೊಂದಿಗೆ ಸ್ಕೂಟಿ ಸಿಸ್ಟಮ್ ಅನ್ನು ನಿರ್ವಹಿಸಬಹುದು. ಈ ಬೈಕ್​ನ ಮಾರುಕಟ್ಟೆ ಬೆಲೆ ಅಂದಾಜು 87,133 ರೂ.

8. ಯಮಹಾ ರೇ ZR 125: ಯಮಹಾ ರೇ ZR 125 ಯಮಹಾ ಕಂಪನಿ ಬಿಡುಗಡೆ ಮಾಡಿದ ಪವರ್​ಫುಲ್​ ಸ್ಕೂಟಿ. 125 ಸಿಸಿ ಎಂಜಿನ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ನಲ್ಲಿ 49 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಸ್ಟೈಲಿಶ್ ಲುಕ್ ಮತ್ತು ರೈಡಿಂಗ್​​ಗೆ ಉತ್ತಮ ಸೌಕರ್ಯ ಹೊಂದಿದೆ. ಈ ಬೈಕ್​ನ ಮಾರುಕಟ್ಟೆ ಬೆಲೆ ಅಂದಾಜು 87,079 ರೂ.

9. ಹೋಂಡಾ ಡಿಯೋ 125: ಹೋಂಡಾ ಬಿಡುಗಡೆ ಮಾಡಿರುವ ಸ್ಪೋರ್ಟ್ಸ್ ಸ್ಕೂಟಿ ಹೋಂಡಾ ಡಿಯೋ 125 ಯುವಕರನ್ನು ಸೆಳೆಯುತ್ತಿದೆ. 123.92 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದು 8.14 bhp ಶಕ್ತಿ ಉತ್ಪಾದಿಸುತ್ತದೆ. ಹೋಂಡಾ ಸ್ಕೂಟಿಯ ಮೈಲೇಜ್ 48kmpl. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 86,147 ರೂ.

10. ಹೀರೋ ಸೂಪರ್ ಸ್ಪ್ಲೆಂಡರ್:ಹೀರೋ ಬಿಡುಗಡೆ ಮಾಡಿರುವ ಮತ್ತೊಂದು ಬಜೆಟ್ ಬೈಕ್ ಹೀರೋ ಸೂಪರ್ ಸ್ಪ್ಲೆಂಡರ್. 124.7 ಸಿಸಿ ಎಂಜಿನ್ ಹೊಂದಿದೆ. 10.72 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಸೂಪರ್ ಸ್ಪ್ಲೆಂಡರ್ ಪ್ರತಿ ಲೀಟರ್​ಗೆ 55 ಕಿ.ಮೀ ಮೈಲೇಜ್ ನೀಡುತ್ತದೆ. ಉತ್ತಮ ಬಜೆಟ್ ಬೈಕ್ ಖರೀದಿಸಲು ಬಯಸುವವರಿಗೆ ಸೂಪರ್ ಸ್ಪ್ಲೆಂಡರ್ ಅತ್ಯುತ್ತಮ ಆಯ್ಕೆ. ಈ ಬೈಕ್‌ನ ಮಾರುಕಟ್ಟೆ ಬೆಲೆ ಅಂದಾಜು 80,759 ರೂಪಾಯಿ.

ಇದನ್ನೂ ಓದಿ:ಇ-ವಾಹನ ಕೊಳ್ಳುವುದಷ್ಟೇ ಅಲ್ಲ, ಚಾರ್ಜಿಂಗ್​​​ ಸುರಕ್ಷತೆ, ಬ್ಯಾಟರಿ ನಿರ್ವಹಣೆ ತಿಳಿಯಿರಿ - EV Charging

ABOUT THE AUTHOR

...view details