ಎಲ್ಲಾ ಪ್ರಮುಖ ಆಟೋಮೊಬೈಲ್ ಕಂಪನಿಗಳು ತಮ್ಮ ಇತ್ತೀಚಿನ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಸದ್ಯ 70,000 ರೂ. ಶ್ರೇಣಿಯಲ್ಲಿರುವ ಟಾಪ್ 10 ಬೈಕ್‌ಗಳು ಮತ್ತು ಸ್ಕೂಟಿಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ..
1. Hero HF Deluxe Features :ಈ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ 97.2 ಸಿಸಿ ಎಂಜಿನ್ ಹೊಂದಿದೆ. ಇದು 8.02 PS ಪವರ್ ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಗಂಟೆಗೆ ಗರಿಷ್ಠ 85 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಜೊತೆಗೆ 70 kmpl ಮೈಲೇಜ್ ನೀಡುತ್ತದೆ.
- Price : ಮಾರುಕಟ್ಟೆಯಲ್ಲಿ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಬೆಲೆ 59,998 ರೂ.ಗಳಿಂದ 68,768 ರೂ.ವರೆಗೆ ಇದೆ.
2. Honda Shine 100 Features : ಹೋಂಡಾ ಶೈನ್ 100 ಬೈಕ್ 98.98 ಸಿಸಿ ಎಂಜಿನ್ ಹೊಂದಿದೆ. ಇದು 7.38 PS ಪವರ್ ಮತ್ತು 8.05 Nm ಟಾರ್ಕ್ ಉತ್ಪಾದಿಸುತ್ತದೆ. ಇದು 55 kmpl ಮೈಲೇಜ್ ನೀಡುತ್ತದೆ.
- Price :ಮಾರುಕಟ್ಟೆಯಲ್ಲಿ ಈ ಹೋಂಡಾ ಶೈನ್ 100 ಬೈಕ್ನ ಆರಂಭಿಕ ಬೆಲೆ ಅಂದಾಜು 64,900 ರೂ. ಆಗಿದೆ.
3. Hero Passion Pro Features : ಹೀರೋ ಪ್ಯಾಶನ್ ಪ್ರೋ ಬೈಕ್ 109.15 ಸಿಸಿ ಎಂಜಿನ್ ಹೊಂದಿದೆ. ಇದು 9.3 bhp ಪವರ್ ಮತ್ತು 9 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 56.5 kmpl ಮೈಲೇಜ್ ಕೊಡುತ್ತದೆ.
- Price :ಹೀರೋ ಪ್ಯಾಶನ್ ಪ್ರೋ ಬೈಕಿನ ಬೆಲೆ ಅಂದಾಜು 65,740 ರೂ.ಗಳಿಂದ 75,400 ರೂ. ಆಗಿದೆ.
4. Bajaj Platina 100 Features : ಈ ಬಜಾಜ್ ಪ್ಲಾಟಿನಾ 100 ಬೈಕ್ 102 ಸಿಸಿ ಎಂಜಿನ್ ಹೊಂದಿದೆ. ಇದು 7.9 PS ಪವರ್ ಮತ್ತು 8.3 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 70 kmpl ಮೈಲೇಜ್ ನೀಡುತ್ತದೆ.
- Price : ಮಾರುಕಟ್ಟೆಯಲ್ಲಿ ಈ ಬಜಾಜ್ ಪ್ಲಾಟಿನಾ 100 ಬೈಕಿನ ಬೆಲೆ ಅಂದಾಜು 67,808 ರೂ. ಆಗಿದೆ.
5. TVS Scooty Pep Plus Features : ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ 87.8 ಸಿಸಿ ಎಂಜಿನ್ ಹೊಂದಿದೆ. ಇದು 5.4 PS ಪವರ್ ಮತ್ತು 6.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಒಂದು ಲೀಟರ್ ಪೆಟ್ರೋಲ್ನಲ್ಲಿ 50 ಕಿ.ಮೀ.ವರೆಗೂ ಚಲಿಸಬಹುದಾಗಿದೆ.
- Price :ಮಾರುಕಟ್ಟೆಯಲ್ಲಿ ಈ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಅಂದಾಜು 65,514 ರೂ.ಗಳಿಂದ 68,414 ರೂ.ಗಳವರೆಗೆ ಮಾರಾಟವಾಗುತ್ತಿದೆ.