ನವದೆಹಲಿ: ಬಜಾಜ್ ಆಟೋ ಸೆಪ್ಟೆಂಬರ್ 2024ರಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶೀಯ ಮಾರಾಟವು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 28 ರಷ್ಟು ಹೆಚ್ಚಳ ಕಂಡಿದೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ದೇಶೀಯವಾಗಿ 2,59,333 ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 2,02,510 ಯುನಿಟ್‌ಗಳಿಗೆ ಹೋಲಿಸಿದರೆ ಶೇ 13 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಬಲವಾದ ದೇಶೀಯ ಬೆಳವಣಿಗೆ ಜೊತೆ ಜೊತೆಗೆ ಬಜಾಜ್ ಆಟೋ ರಫ್ತುನಲ್ಲಿಯೂ ಗಣನೀಯ ಹೆಚ್ಚಳವನ್ನು ಕಂಡಿದೆ. ದ್ವಿಚಕ್ರ ವಾಹನಗಳ ರಫ್ತು ವಾರ್ಷಿಕ ಶೇ 13ರಷ್ಟು ಬೆಳವಣಿಗೆ ಸಾಧಿಸಿದೆ.
ಈ ಪರಿಣಾಮವಾಗಿ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳೆರಡನ್ನೂ ಸೇರಿಸಿದರೆ, ಬಜಾಜ್ ದ್ವಿಚಕ್ರ ವಾಹನಗಳ ಒಟ್ಟು ಮಾರಾಟವು ಸೆಪ್ಟೆಂಬರ್‌ನಲ್ಲಿ 22 ಪ್ರತಿಶತದಷ್ಟು ಬೆಳವಣಿಗೆ ಸಾಧಿಸಿದೆ. 4,00,489 ಘಟಕಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಬೈಕ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ತಿಂಗಳ ಅವಧಿಯಲ್ಲಿ ಮಾರಾಟವಾದ 3,27,712 ಯುನಿಟ್‌ಗಳಿಂದ ಇದು ಗಮನಾರ್ಹ ಏರಿಕೆಯಾಗಿದೆ. ಅದರ ದ್ವಿಚಕ್ರ ವಾಹನ ವಿಭಾಗದ ಹೊರತಾಗಿ, ಬಜಾಜ್‌ನ ವಾಣಿಜ್ಯ ವಾಹನ ವ್ಯಾಪಾರವೂ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.